ಸುದ್ದಿಗಳು

‘ಸೈನೈಡ್ ಮಲ್ಲಿಕಾ’ ಚಿತ್ರದ ‘ಮೋಷನ್ ಪೋಸ್ಟರ್ ‘ ಬಿಡುಗಡೆ

ಭಾರತದ ಏಕೈಕ ಮಹಿಳ ಸರಣಿ ಕೊಲೆಗಾರ್ತಿಯಾಗಿರುವ ‘ಸೈನೈಡ್ ಮಲ್ಲಿಕಾ’ಳ ನಿಜಜೀವನದ ಕಥೆಯು ಸಿನಿಮಾ ರೂಪದಲ್ಲಿ ಬರುತ್ತಿದೆ. ಇದೀಗ ಈ ಚಿತ್ರದ ‘ಮೋಷನ್ ಪೋಸ್ಟರ್’ ಬಿಡುಗಡೆಯಾಗಿದೆ.

ಬೆಂಗಳೂರು, ಅ. 04: ‘ಪಂಗನಾಮ’ ಚಿತ್ರದ ಮೂಲಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ‘ಕಲಬೆರೆಕೆ’, ‘ಚಿಲ್ರೇಶೋಕಿ’, ‘ವರ್ತಮಾನ’ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಸಂಜನಾ ಪ್ರಕಾಶ್ ಇದೀಗ ‘ಸೈನೈಡ್ ಮಲ್ಲಿಕಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ನೈಜ ಘಟನೆಗಳ ಕಥೆಯನ್ನು ಒಳಗೊಂಡಿದೆ.

ಮಹಿಳಾ ಸರಣಿ ಕೊಲೆಗಾರ್ತಿ

ಭಾರತದ ಏಕೈಕ ಮಹಿಳಾ ಸರಣಿ ಕೊಲೆಗಾರ್ತಿಯಾಗಿರುವ ‘ಸೈನೈಡ್ ಮಲ್ಲಿಕಾ’ಳ ನಿಜಜೀವನದ ಕಥೆಯನ್ನು ‘ಸೈನೈಡ್ ಮಲ್ಲಿಕಾ’ ಹೆಸರಿನಲ್ಲಿ ಸಿನಿಮಾರೂಪವಾಗಿ ಬರುತ್ತಿದೆ. ಕೆಲವು ದಿನಗಳ ಹಿಂದೆ ಚಿತ್ರದ ಮೊದಲ ನೋಟ ಬಿಡುಗಡೆಗೊಂಡಿದ್ದವು. ಇಂದು ಚಿತ್ರದ ಮೋಶನ್ ಪೋಸ್ಟರ್ ಯ್ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡು ನೋಡುಗರಿಂದ ಮೆಚ್ಚುಗೆ ಗಳಿಸುತ್ತಿದೆ.

ಆರು ಮಹಿಳೆಯರನ್ನು ಕೊಂದ ಕಾರಣಕ್ಕೆ ಜೈಲಿಗೆ ಹೋದ ಹಂತಕಿಯರಲ್ಲಿ ಸೈನೈಡ್ ಮಲ್ಲಿಕಾ ಪ್ರಮುಖವಾದವಳು. ಬೆಂಗಳೂರಿನ ದೇವಸ್ಥಾನಗಳಿಗೆ ಬರುತ್ತಿದ್ದ ಶ್ರೀಮಂತ ಕುಟುಂಬದ ಮಹಿಳೆಯರ ಮೇಲೆ ಕಣ್ಣು ಹಾಕಿ ಅವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ಪರಿಚಯ ಆಪ್ತವಾಗುತ್ತಿದ್ದಂತೆ ಸೈನೈಡ್ ನೀಡಿ ಕೊಲೆ ಮಾಡುತ್ತಿದ್ದಳು ನಂತರ ಮಹಿಳೆಯರ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು. 2008ರಲ್ಲಿ ಈಕೆಯನ್ನು ಬಂಧಿಸಲಾಗಿತ್ತು.

ಮೋಷನ್ ಪೋಸ್ಟರ್

ಈ ಮೋಷನ್ ಪೋಸ್ಟರ್ ನಲ್ಲಿ ಓವ್ರ ಮಹಿಳೆಯ ಶವದ ಕೂದಲನ್ನು ತೋರಿಸುತ್ತಾ, ಅದನ್ನು ನಾಯಕಿ ಮಲ್ಲಿಕಾ ಪಕ್ಕದಲ್ಲಿಯೇ ಕುಳಿತುಕೊಂಡು ಕ್ರೌರ್ಯದಿಂದ ನೋಡುತ್ತಾ ಸಿಗರೇಟ್ ಸೇದಿ ಹೊಗೆಯನ್ನು ಹೊರ ಬಿಡುವ ಪೋಸ್ಟರ್ ಆಕರ್ಷಕವಾಗಿದೆ.

ಈ ಚಿತ್ರದೊಂದಿಗೆ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿರುವ ನಟಿ ಸಂಜನಾ ಅವರಿಗೆ ಅನೇಕ ಅವಕಾಶಗಳು ಅರಸಿ ಬರುತ್ತಿವೆ. ಜೊತೆಗೆ ಡಿಗ್ಲಾಮ್ ರೀತಿಯ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. “ಕಥೆ ಹಾಗೂ ಪಾತ್ರ ಇಷ್ಟ ಆದರೆ ಸಿನಿಮಾ ಒಪ್ಪಿಕೊಳ್ಳುತ್ತೇನೆ. ಸಿನಿಮಾ ಮೂಲಕ ಜನರಿಗೆ ಸಂದೇಶ ನೀಡಬೇಕೆಂದುಕೊಂಡಿದ್ದೇನೆ ಹಾಗೂ ‘ಕನ್ನಡವೇ ನನ್ನ ಮೊದಲ ಆದ್ಯತೆ’ ಎಂದು ಹೇಳುತ್ತಾರೆ.

 

@ sunil Javali

Tags