ಸುದ್ದಿಗಳು

ಬಾಲಿವುಡ್ ನಲ್ಲಿ ಭಾರೀ ಚರ್ಚೆಗೆ ಕಾರಣವಾಯ್ತು ತಾಪ್ಸಿ ಪನ್ನು ಈ ಹೇಳಿಕೆ

‘ಮೀಟೂ ಅಭಿಯಾನ ನಿಲ್ಲಬಾರದು’ ಎಂದು ನಟಿ ತಾಪ್ಸಿ ಪನ್ನು ಹೇಳಿಕೆ ನೀಡಿದ್ದು, ಅವರ ಈ ಹೇಳಿಕೆ ಬಾಲಿವುಡ್ ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೀಗೆ ತಾಪ್ಸಿ ಹೇಳಿಗೆ ಚರ್ಚೆಯಾಗುತ್ತಿರುವುದಕ್ಕೆ ಕಾರಣ ಮೀಟೂ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಾಲಿವುಡ್ ನಿರ್ದೇಶಕ ವಿಕಾಸ್ ಬಹ್ಲ್ ಇತ್ತೀಚೆಗಷ್ಟೇ ಆರೋಪದಿಂದ ದೋಷ ಮುಕ್ತರಾಗಿದ್ದರು. ಇದರ ಬೆನ್ನಲೇ ತಾಪ್ಸಿ ‘ಮೀಟೂ ಅಭಿಯಾನ ನಿಲ್ಲಬಾರದು’ ಎಂದು ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

“ಲೈಂಗಿಕ ಶೋಷಣೆ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗದಿದ್ದರೆ ಅಭಿಯಾನದ ಆಶಯವೇ ನಿರರ್ಥಕವಾಗುತ್ತದೆ. ಲೈಂಗಿಕವಾಗಿ ಶೋಷಣೆಗೊಳಗಾದವರು ಸಾರ್ವಜನಿಕ ಸ್ಥಳದಲ್ಲಿ ತಳಮಳ ಅನುಭವಿಸಬೇಕಾಗುತ್ತದೆ. ಹೆಣ್ಣುಮಕ್ಕಳು ಅನ್ಯಾಯದ ವಿರುದ್ಧ ದನಿ ಎತ್ತುವುದನ್ನು ನಿಲ್ಲಿಸಬಾರದು. ಮೀಟೂ ಪ್ರಾರಂಭವಾದಾಗ ಅನೇಕ ಹೆಣ್ಣುಮಕ್ಕಳು ದನಿಗೂಡಿಸಿದ್ದರು . ಅಡಚಣೆಗಳು ಬರುತ್ತವೆ. ಅದಕ್ಕಾಗಿ ನಾವು ಧೃತಿಗೆಡಬಾರದು’ ಎಂದು ತಾಪ್ಸಿ ತಿಳಿಸಿದ್ದಾರೆ.

ಸದ್ಯ ತಾಪ್ಸಿ ಅವರ ತಮಿಳು ಮತ್ತು ತೆಲುಗು ದ್ವಿಭಾಷೆಯಲ್ಲಿ ಸಿದ್ಧವಾಗಿರುವ ‘ಗೇಮ್ ಓವರ್’ ಸಿನಿಮಾ ಜೂನ್ 14ರಂದು ಬಿಡುಗಡೆಯಾಗಲಿದೆ. ಅಶ್ವಿನ್ ಶರವಣನ್ ನಿರ್ದೇಶನದ ಈ ಚಿತ್ರಕ್ಕೆ ಎಸ್. ಶಶಿಕಾಂತ್ ನಿರ್ಮಾಪಕರು. ಈ ಸಿನಿಮಾದಲ್ಲಿ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ ತಾಪ್ಸಿ ಪನ್ನು.

ಪಕ್ಕಾ ಸಸ್ಪೆನ್ಸ್, ಥ್ರಿಲ್ಲರ್ ಆಗಿರುವ ‘ಗೇಮ್ ಓವರ್’ ಚಿತ್ರ ‘ಮಾಯಾ’ ಸಿನಿಮಾಕ್ಕಿಂತಲೂ ಭಿನ್ನ ಬಗೆಯ ಕಥಾ ಹಂದರ ಹೊಂದಿದ್ದು, ಸಿನಿಮಾ, ಚಿತ್ರದ ನಿರ್ದೇಶಕರಿಂದ ಹಿಡಿದು ಪ್ರೇಕ್ಷಕರ ತನಕ ಅಪಾರ ಕುತೂಹಲ ಹುಟ್ಟುಹಾಕಿದೆ.

ಈ ಫೋಟೋದಲ್ಲಿ ಆ ನಟಿಯಂತೆ ಕಂಡರಂತೆ ತಾಪ್ಸಿ ಪನ್ನು!

 

#balkaninews #taapseepannu #metoo #taapseepannutwitter #taapseepannuinstagram #taapseepannufacebook

Tags