ಸುದ್ದಿಗಳು

ನಾನು ಯಾವತ್ತು ಕಲ್ಪನಾ ಲೋಕದಲ್ಲಿ ಮುಳುಗುತ್ತೇನೋ ಅಂದು ನನ್ನ ಸೋಲು: ತಾಪ್ಸಿ ಪನ್ನು

ಬೆಂಗಳೂರು, ಮಾ.24:

ನಟಿ ತಾಪ್ಸಿ ಪನ್ನು ಟೀಕೆಗಳ ಮಧ್ಯೆ ಹೆಸರು ಮಾಡಿ, ಇದೀಗ ಚಿತ್ರರಂಗದಲ್ಲಿ ಸೈ ಎನಿಸಿಕೊಂಡವರು, ದಕ್ಷಿಣ ಚಿತ್ರರಂಗ ಮಾತ್ರವಲ್ಲ ಬಾಲಿವುಡ್ ನಲ್ಲೂ ಹೆಚ್ಚು ಬೇಡಿಕೆ ಉಳಿಸಿಕೊಂಡಿರುವ ತಾಪ್ಸಿಗೆ ಟೀಕೆಗಳೇ ಪ್ರೋತ್ಸಾಹದ ವಿಚಾರಗಳು. ಅಮಿತಾಬ್ ಬಚ್ಚನ್ ನಂತಹ ಮಹಾನ್ ಕಲಾವಿದರೊಂದಿಗೆ ನಟಿಸಿದ ಈ ತಾಪ್ಸಿ ಇದೀಗ ತುಂಬು ಭರವಸೆಯ ನಟಿ. ದಿಲ್ ಜುಗ್ಲಿ, ಸೂರಮ್, ಮುಲ್ಕ್ ಮತ್ತು ಮನ್ ಮರ್ಜಿಯಾ  ಮತ್ತು ತೆಲುಗಿನ ನೀವೆವರೋ ಚಿತ್ರಗಳು 2018ರಲ್ಲಿ ತೆರೆ ಕಂಡವು. ಪ್ರತಿ ಚಿತ್ರದಲ್ಲೂ ಆಕೆ ವಿಭಿನ್ನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು.ತಮ್ಮ ಸಿನಿ ಜರ್ನಿಯ ಕುರಿತಂತೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ , ಕಳೆದ ವರ್ಷ ನನ್ನ ಪಾಲಿಗೆ ಅತ್ಯುತ್ತಮ ವರ್ಷ ಎಂದು ಬಣ್ಣಿಸಿಕೊಂಡಿದ್ದಾರೆ.

ಕೆಲವೊಂದು ಚಿತ್ರಗಳು ನನಗೆ ಜೀವನದ ಪಾಠ ಕಲಿತಿದೆ

ನನ್ನ ಸಿನಿ ಜೀವನದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿ ಹಲವು ಪಾತ್ರಗಳಿಗೆ ಜೀವತುಂಬಿದ್ದೇನೆ. ಒಂದೊಂದು ಪಾತ್ರವೂ ವಿಭಿನ್ನ ಅನುಭವ ಹಾಗೂ ಪಾಠ ಕಲಿಸಿದೆ. ಕಳೆದ ವರ್ಷ ನನ್ನ ಪಾಲಿನ ಅತ್ಯಂತ ಉತ್ತಮ ವರ್ಷ ಎಂದಿರುವ ತಾಪ್ಸಿ ಪನ್ನು. ನಾವು ಕಡಿಮೆ ಚಿತ್ರಗಳಲ್ಲಿ ನಟಿಸಿದಷ್ಟು ಜನ ಮಾತನಾಡುತ್ತಾರೆ. ಆದರೆ ಚಿತ್ರದಲ್ಲಿನ ಪಾತ್ರಕ್ಕೆ ಮಾಡಿದ ಶ್ರಮದ ಬಗ್ಗೆ ಯಾರೂ ಮೆಚ್ಚುಗೆ ವ್ಯಕ್ತಪಡಿಸುವುದಿಲ್ಲ ಎಂದಿದ್ದಾರೆ ತಾಪ್ಸಿ. 2018 ನನ್ನ ಪಾಲಿಗೆ ಅತ್ಯಂತ ಶ್ರಮದಾಯಕ ಹಾಗೂ ಮೆಚ್ಚುಗೆ ದಾಯಕ ವರ್ಷ. ಮಾಡಿದ ಚಿತ್ರವನ್ನು ಪ್ರೇಕ್ಷಕ ಇಷ್ಟಪಟ್ಟಿದ್ದಾನೆ. ಅಷ್ಟೇ ಅಲ್ಲ ಪ್ರೇಕ್ಷಕರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಅಂದಿದ್ದಾರೆ ನಟಿ.

ಇದೇ ವೇಳೆ ಕಲ್ಪನಾ ಪ್ರಪಂಚದಲ್ಲಿ ಬದುಕುವ ಹೆಣ್ಣು ನಾನಲ್ಲ ಎಂದಿರುವ  ತಾಪ್ಸಿ, ನಾನು ಯಾವಾಗ ಊಹೆಯನ್ನು ಜೀವನ ಮಾಡಲು ಆರಂಭಿಸುತ್ತೇನೋ ಅಂದು ನನ್ನ ಸೋಲು ಕಟ್ಟಿಟ್ಟ ಬುತ್ತಿ. ಹೀಗಾಗಿ ಪ್ರತಿಯೊಂದು ಹೆಜ್ಜೆಯನ್ನು ನೈಜವಾಗಿ ಹಾಗೂ ರಿಯಾಲಿಟಿಯಲ್ಲೇ ಬದುಕಲು ನಾನು ಇಚ್ಚಿಸುತ್ತೇನೆ ಎಂದಿದ್ದಾರೆ. ವಿಭಿನ್ನ ಪಾತ್ರದಲ್ಲಿ ನಟಿಸಿರುವುದು ನನ್ನೊಳಗೆ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದೆ . ಅಷ್ಟೇ ಅಲ್ಲ ಇದಕ್ಕೆ ನಾನು ಸಾಕಷ್ಟು ಶ್ರಮ ಕೂಡ ಹಾಕಿದ್ದೇನೆ ಎಂದಿದ್ದಾರೆ ತಾಪ್ಸಿ. ಒಂದೇ ರೀತಿ ಪಾತ್ರಗಳನ್ನು ಮಾಡಲು ನನಗೆ ಭಯ. ಹೀಗಾಗಿ ಪ್ರತಿವರ್ಷ ಪಾತ್ರಗಳ ಆಯ್ಕೆ ಮಾಡುವಾಗ ನಾನು ತುಂಬಾ ಜಾಗರೂಕತೆಯಿಂದ ಇರುತ್ತೇನೆ. ಕಾಲ್ ಶೀಟ್ ಓಕೆ ಮಾಡುವಾಗಲು ಚಿತ್ರದಲ್ಲಿ ನನ್ನ ಪಾತ್ರ ಹೇಗೆ ವಿಭಿನ್ನವಾಗಿದೆ ಎಂಬುದನ್ನು ಗಮನಿಸುತ್ತೇನೆ ಎಂದಿದ್ದಾರೆ ನಟಿ. ತಾಪ್ಸಿ ಮುಂದಿನ ಚಿತ್ರ ‘ಮಿಷನ್ ಮಂಗಲ್’. ಬಾಹ್ಯಾಕಾಶ ವಿಚಾರಕ್ಕೆ ಸಂಬಂಧಪಟ್ಟ ಕಥಾವಸ್ತುವನ್ನೊಳಗೊಂಡ ಚಿತ್ರದಲ್ಲಿ ತಾಪ್ಸಿ ಕಾಣಿಸಿಕೊಳ್ಳಲಿದ್ದಾರೆ.

ಅಭಿಮಾನಿಯ ಬೈಕ್ ಗೆ ಆಟೋಗ್ರಾಫ್ ಹಾಕಿದ ಕಿಚ್ಚ

#taapseepannu #taapseepannumovies #taapseepannuhits #taapseepannuinstagram #taapseepannutwitter #taapseepannutelugumovies #taapseepannuhindimovies

Tags