ಸುದ್ದಿಗಳು

ಟ್ರೆಂಡ್ ಆದ ‘ಹೋಲ್ಡ್ ಆನ್’ ಸಾಂಗ್ ಬಗ್ಗೆ ಮಾನ್ವಿತಾ, ಸೂರಿ ಮಾತುಗಳು

ಈ ವರ್ಷದ ಸೂಪರ್ ಹಿಟ್ ಚಿತ್ರ ಯಾವುದು ಎಂದರೆ ಎಲ್ಲರೂ ಹೇಳುವುದೊಂದೆ, ಅದು ಟಗರು. ಹೌದು ಈ ಚಿತ್ರ ಈಗಾಗಲೇ ಯಶಸ್ವಿ 75 ದಿನಗಳನ್ನು ಪೂರೈಸಿ ಶತಕದತ್ತ ಹೊರಟಿದೆ. ಈ ಸಂದರ್ಭದಲ್ಲಿ ಚಿತ್ರತಂಡ, ಒಂದೊಂದೇ ವಿಡಿಯೋ ಹಾಡುಗಳನ್ನು ಯ್ಯೂಟ್ಯೂಬ್ ನಲ್ಲಿ ಬಿಟ್ಟಿದ್ದಾರೆ.

ಕಳೆದ ವಾರ ಯ್ಯೂಟ್ಯೂಬ್ ನಲ್ಲಿ ಬಿಟ್ಟಿದ್ದ ‘ಹೋಲ್ಡ್ ಆನ್’ ಸಾಂಗ್ ಟ್ರೆಂಡ್ ಆಗಿದ್ದು, ಈ ಸಂತಸದಲ್ಲಿ ಚಿತ್ರದ ನಿರ್ದೇಶಕ ಸೂರಿ ಹಾಗೂ ನಾಯಕಿ ಮಾನ್ವಿತಾ ಮಾತನಾಡಿದ್ದಾರೆ. ಈ ಹಾಡು ಶಿವಣ್ಣ ಹಾಗೂ ಮಾನ್ವಿತಾ ಅವರ ಮೇಲೆ ಪಿಕ್ಷರೈಸ್ ಆಗಿದ್ದು , ನೋಡುವುದಕ್ಕೆ ಅತೀ ಸರಳ ಎನಿಸಿದರೂ , ಈ ಹಾಡು ಚಿತ್ರೀಕರಿಸಲು ತುಂಬಾ ಕಷ್ಟಪಟ್ಟಿದ್ದೇವೆ ಎನ್ನುತ್ತಾರೆ.

ಈ ‘ಹೋಲ್ಡ್ ಆನ್’ ಜರ್ನಿ ಸಾಂಗ್ ತಮ್ಮ ಫೇವರೇಟ್ ಎನ್ನುವ ಮಾನ್ವಿತಾ, ಈ ಹಾಡು ಚೆನ್ನಾಗಿ ಮೂಡಿ ಬರಲು ಮೂಲ ಕಾರಣ ಲಂಬಾಣಿ ಹೆಣ್ಣುಮಕ್ಕಳು. ಅವರೇ ನೃತ್ಯದ ಸ್ಟೆಪ್ ಹೇಳಿಕೊಟ್ಟರು. ಒಟ್ಟಾರೆ ಈ ಜರ್ನಿ ಹಾಡಿನ ಚಿತ್ರೀಕರಣವೇ ಒಂದೊಳ್ಳೆಯ ಅನುಭವ. ತುಂಭಾ ಜನರು ಈ ಹಾಡನ್ನು ಹಲವಾರು ಬಾರಿ ನೋಡಿದ್ದಾರೆ. ಈ ಹಾಡು ಚೆನ್ನಾಗಿ ಮೂಡಿ ಬರಲು ಶ್ರಮಿಸಿದ ಎಲ್ಲಾ ತಂತ್ರಜ್ಞರಿಗೂ ಧನ್ಯವಾದಗಳು’ ಎನ್ನುತ್ತಾರೆ. ಈ ಚಿತ್ರದ ನಂತರ ಅವರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಹೊಸಪೇಟೆ ಸುತ್ತಮುತ್ತ ಹೈವೇಯಲ್ಲಿ ಈ ಹಾಡನ್ನು 5 ದಿನ ಶೂಟ್ ಮಾಡಿದ್ದು ಒಳ್ಳೆಯ ಅನುಭವ. ಚಿತ್ರದ ಆರಂಭದಲ್ಲಿಯೇ ಮುಡಿ ಬರುವ ಈ ಹಾಡು ಯುಥ್ ಪುಲ್ ಆಗಿದ್ದು , ರಸ್ತೆಗಳ ಮದ್ಯೆ ಚಲಿಸುವ ಲಾರಿಗಳ ಮದ್ಯೆಯೇ ನಡೆದ ಚಿತ್ರೀಕರಣ ಹಾಡಿಗೊಂದು ವೇಗ ನೀಡಿದೆ. ಇನ್ನು ಈ ಹಾಡಿನಲ್ಲಿ ಕಾಣಿಸಿಕೊಳ್ಳುವ ಸಹ ನೃತ್ಯಗಾರರು ಹೊಸಪೇಟೆಯಲ್ಲಿನ ಲಂಬಾನಿ ಹೆಣ್ಣುಮಕ್ಕಳಾಗಿದ್ದು ಅವರೇ ಹಾಡಿನಲ್ಲಿ ಸ್ಟೇಪ್ ಹಾಕಿದ್ದಾರೆ. ಇದಕ್ಕೆ ಪೂರಕವಾಗಿ ಯೋಗರಾಜ್ ಭಟ್ಟರು ಬರೆದ ಹಾಡು, ಚರಣ್ ರಾಜ್ ಸಂಗೀತ, ಮಹೇನ್ ಸಿಂಗ್ ಅವರ ಛಾಯಾಗ್ರಹಣವೂ ಒಳಗೊಳ್ಳುತ್ತದೆ ” ಎಂದು ಹೇಳುತ್ತಾರೆ ಸೂರಿ.

Tags