ಸುದ್ದಿಗಳು

ತೈಮೂರ್ ಅಲಿಖಾನ್ ಗೆ ಕೇರಳದಲ್ಲಿ ಭಾರೀ ಬೇಡಿಕೆ!

“ಈ ನಡುವೆ ಕೇರಳದ ಆಟಿಕೆಯ ಅಂಗಡಿಯಲ್ಲಿ”

ಮುಂಬೈ,ನ.21: ಬಾಲಿವುಡ್ ನ ಮುದ್ದಾದ ಜೋಡಿ ಸೈಫ್ ಹಾಗೂ ಕರಿನಾ ಕಪೂರ್ ಗೆ 2 ವರ್ಷದ ಪುತ್ರನಿದ್ದು, ತೈಮೂರ್‌ ಅಲಿ ಖಾನ್‌ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿರುವ ಪುಟ್ಟಚೋರ. ತಯಮೂರು ಕುಂತ್ರೂ ನಿಂತ್ರೂ ಸುದ್ದಿನೇ..ಈಗ ತೈಮೂರ್ ಕೇರಳಕ್ಕೂ ಬೇಟಿ ನೀಡಿದ್ದಾನೆ ಹೇಗಂತೀರಾ?

ಗೊಂಬೆಗಳ ಸಾಲು

‘ಓ ಮೈ ಗಾಡ್’ ಮತ್ತು ‘ಸಿಂಗ್ ಇಸ್ ಬ್ಲಿಂಗ್’ ಚಿತ್ರಗಳ ಖ್ಯಾತಿಯ ನಿರ್ಮಾಪಕರಾದ ಅಶ್ವಿನಿ ಯಾರ್ಡಿ ಕೇರಳದ ಆಟಿಕೆ ಅಂಗಡಿಗೆ ಭೇಟಿ ಕೊಟ್ಟಿದ್ದರು. ಅಲ್ಲಿ ತೈಮೂರ್ ನಂತೆ ಹೋಲುವ ಗೊಂಬೆಗಳ ಸಾಲನ್ನು ನೋಡಿ, ಅದರ ಫೋಟೋ ಕ್ಲಿಕ್ಕಿಸಿ ತಮ್ಮ ಟ್ವಿಟ್ಟರ್ ನಲ್ಲಿ “ಈ ನಡುವೆ ಕೇರಳದ ಆಟಿಕೆಯ ಅಂಗಡಿಯಲ್ಲಿ” ಎಂದು ಬರೆದುಕೊಂಡು ಆ ಫೋಟೋವನ್ನು ಹಂಚಿಕೊಂಡಿದ್ದಾರೆ.

Image result for taimur

ಬೊಂಬೆಗೆ 980 ರೂ.

ಇನ್ನು ತೈಮೂರ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಇದನ್ನೇ ಲಾಭ ಮಾಡಿಕೊಳ್ಳಲು ಮುಂದಾಗಿರುವ ಕೇರಳ ಮೂಲದ ಫಸ್ಟ್‌ಕ್ರೈ ಎಂಬ ಕಂಪನಿ, ತೈಮೂರ್‌  ನನ್ನೇ ಹೋಲುವ ಗೊಂಬೆಯನ್ನು ಬಿಡುಗಡೆ ಮಾಡಿದೆ. ತೈಮೂರ್‌ ಬಾಬಾ ಹೆಸರಿನ ಈ ಬೊಂಬೆಗೆ 980 ರೂ. ಬೆಲೆ ನಿಗದಿಪಡಿಸಲಾಗಿದೆ.

Tags

Related Articles