ಸುದ್ದಿಗಳು

ದೇವರಾಜ್ ಕುಮಾರ್ ನಿರ್ದೇಶನದಲ್ಲಿ ‘ತಾಜ್ ಮಹಲ್-2’

ಆರ್ ಚಂದ್ರು ನಿರ್ದೇಶನದ ಮೊದಲ ಸಿನಿಮಾ ‘ತಾಜ್ ಮಹಲ್’. ವಿಶೇಷವೆಂದರೆ, ಕಳೆದ ಶುಕ್ರವಾರ ಇವರ ನಿರ್ದೇಶನದ ‘ಐ ಲವ್ ಯೂ’ ಚಿತ್ರವು ತೆರೆ ಕಂಡು ಭರ್ಜರಿ ಯಶಸ್ಸು ಕಾಣುತ್ತಿದೆ. ವಿಶೇಷವೆಂದರೆ, ಇದೀಗ ‘ತಾಜ್ ಮಹಲ್-2’ ಚಿತ್ರವೊಂದು ಆರಂಭವಾಗುತ್ತಿದೆ. ಹೀಗಾಗಿ ಆಗಲೇ ಅವರು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡರಾ ಎಂದು ಅಚ್ಚರಿ ಪಡಬೇಡಿ.

ಹೌದು, ‘ತಾಜ್ ಮಹಲ್’ ಸಿನಿಮಾ ಆರ್ ಚಂದ್ರು ಅವರಿಗೆ ಹೆಸರು ತಂದು ಕೊಟ್ಟ ಸಿನಿಮಾ. ಇದೀಗ ‘ತಾಜ್ ಮಹಲ್-2’ ಚಿತ್ರವು ಆರಂಭವಾಗುತ್ತಿದೆ. ಆದರೆ, ಈ ಚಿತ್ರಕ್ಕೆ ಆರ್ ಚಂದ್ರು ಆ್ಯಕ್ಷನ್ ಕಟ್ ಹೇಳದೇ, ‘ಅನುಷ್ಕ’ ಚಿತ್ರದ ಖ್ಯಾತಿಯ ದೇವರಾಜ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ.

ಹೌದು, ಈ ಚಿತ್ರಕ್ಕೆ ದೇವರಾಜ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇವರು ಈ ಹಿಂದೆ ‘ಡೇಂಜರ್ ಜೋನ್’, ‘ಅನುಷ್ಕ’, ‘ನಿಶ್ಯಬ್ದ-2’ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು. ಇದೀಗ ‘ತಾಜ್ ಮಹಲ್-2’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಇನ್ನೊಂದು ವಿಶೇಷವೆಂದರೆ, ಇಷ್ಟು ದಿನಗಳ ಕಾಲ ದೇವರಾಜ್ ಕುಮಾರ್ ನಿರ್ದೇಶಿಸಿದ್ದ ಚಿತ್ರಗಳಿಗೆ ರೂಪೇಶ್ ಶೆಟ್ಟಿ ನಾಯಕನಟರಾಗಿದ್ದರು. ಆದರೆ, ಈ ಚಿತ್ರಕ್ಕೆ ನಿರ್ದೇಶಕರೇ ನಾಯಕನಟರಾಗಿದ್ದಾರೆ.

ಇನ್ನು ಈ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, ಈ ಚಿತ್ರವನ್ನು ಗಂಗಾಂಬಿಕ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಉಳಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ನಿರ್ದೇಶಕರು ಸದ್ಯದಲ್ಲಿಯೇ ತಿಳಿಸಲಿದ್ದಾರೆ.

#tajmahala-2, #devarajkumar, #movie, #balkaninews #filmnews, #kannadasuddigalu

Tags