ಸುದ್ದಿಗಳು

ಸಿನಿಮಾರಂಗಕ್ಕೆ ‘ಟಕ್ಕರ್’ ಕೊಡಲು ಬಂದ ನವ ನಟ ಮನೋಜ್

ನಾಳೆ ಚಿತ್ರದ ಟೀಸರ್ ರಿಲೀಸ್

ಬೆಂಗಳೂರು.ಏ.20: ಡಿ-ಬಾಸ್ ದರ್ಶನ್ ಸಹೋದರ ಸಂಬಂಧಿ ಮನೋಜ್ ಕುಮಾರ್ ನಟಿಸಿರುವ ಚೊಚ್ಚಲ ‘ಟಕ್ಕರ್’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಚಿತ್ರದ ಪ್ರಮೋಶನ್ ಕೆಲಸಗಳು ಶುರುವಾಗಿವೆ. ಅದರ ಫಲವಾಗಿಯೇ ಚಿತ್ರತಂಡದವರು ಇದೇ ತಿಂಗಳು 21ಕ್ಕೆ ಚಿತ್ರದ ಟೀಸರ್ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.

ಹೌದು, ಈ ಚಿತ್ರದ ಟೀಸರ್ ನಾಳೆ ರಿಲೀಸ್ ಆಗುತ್ತಿದ್ದು, ವಿಶೇಷವೆಂದರೆ, ನಟ ನಿರ್ದೇಶಕ ದಿನಕರ್ ತೂಗುದೀಪ್ ರಿಲೀಸ್ ಮಾಡುತ್ತಿದ್ದಾರೆ. ಅಂದ ಹಾಗೆ ಚಿತ್ರದ ಹೆಸರೇ ಹೇಳುವ ಹಾಗೆ ಇದೊಂದು ಪಕ್ಕಾ ಆಕ್ಷನ್ ಸಿನಿಮಾವಾಗಿದ್ದು, ಮಾಸ್ ಲುಕ್ ನಲ್ಲಿ ಮನೋಜ್ ಮಿಂಚಿದ್ದು, ರಂಜನಿ ರಾಘವನ್ ನಾಯಕಿಯಾಗಿದ್ದಾರೆ.

ಈ ಹಿಂದೆ ‘ರನ್ ಆ್ಯಂಟನಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ರಘು ಶಾಸ್ತ್ರಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಚಿತ್ರದ ಬಗ್ಗೆ ಬಾರೀ ಕುತೂಹಲ ಮೂಡಿದ್ದು ‘ಹುಲಿರಾಯ’ ಖ್ಯಾತಿಯ ಕೆ. ಎನ್ ನಾಗೇಶ್ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನು ‘ಪುಟ್ಟಗೌರಿ ಮದುವೆ’ ಧಾರಾವಾಹಿಯಿಂದಲೇ ಕರ್ನಾಟಕದಲ್ಲಿ ಜನಪ್ರಿಯರಾಗಿರುವ ಗೌರಿ ಅಲಿಯಾಸ್ ರಂಜನಿ ರಾಘವನ್ ಬೆಳ್ಳಿತೆರೆಗೂ ಪಾದಾರ್ಪಣೆ ಮಾಡಿ, ಮೊದಲ ಚಿತ್ರ ‘ರಾಜಹಂಸ’ದಲ್ಲಿಯೇ ಯಶಸ್ಸು ಕಂಡಿದ್ದಾರೆ. ಇನ್ನುಳಿದಂತೆ ನಟಿ ಸುಮಿತ್ರಾ, ಸಾಧು ಕೋಕಿಲ, ‘ಭಜರಂಗಿ’ ಲೋಕಿ ಸೇರಿದಂತೆ ಹಲವು ಮಂದಿಯ ತಾರಾ ಬಳಗವಿದೆ.

‘ನಾರಾಯಣ’ನ ಅವತಾರದ ನಂತರ ‘ಪುಣ್ಯಕೋಟಿ’ಯಾಗಲು ಹೊರಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

#takkar, #film, #teaser, #balkaninews #kannadasuddigalu, #darshan, #dinakar

Tags