ಸುದ್ದಿಗಳು

ಅಮೆರಿಕಾದಲ್ಲಿದ್ದಾರಂತೆ ತಮನ್ನಾ ಬಾಯ್ ಫ್ರೆಂಡ್

ಹೈದ್ರಾಬಾದ್, ಜ.11: ಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾ ತನ್ನ ಸೌಂದರ್ಯದಿಂದಲೇ ಟಾಲಿವುಡ್, ಬಾಲಿವುಡ್ ನಲ್ಲಿ ಬೇಡಿಕೆ ಉಳಿಸಿಕೊಂಡಿರುವ ನಟಿ. ವೆಂಕಟೇಶ್, ವರುಣ್ ತೇಜಾ ಅವರ ಅಭಿನಯದ ಮಲ್ಟಿಸ್ಟಾರ್ ಸಿನಿಮಾ ಎಫ್ 2 , ಫನ್ ಆಂಡ್ ಪ್ರಸ್ಟ್ರೇಷನ್ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದು ಬಹುನಿರೀಕ್ಷಿತ ಚಿತ್ರ ಜನವರಿ 12ರಂದು ತೆರೆಕಾಣಲಿದೆ.

ಕಳೆದ ವರ್ಷ ತಮನ್ನಾ ಅಭಿನಯದ ಯಾವ ಚಿತ್ರವೂ ಯಶಸ್ಸು ಸಾಧಿಸಿಲ್ಲ. ಹೀಗಾಗಿ ಈ ವರ್ಷದ ಆರಂಭದಲ್ಲಿ ಅಂದರೆ ಸಂಕ್ರಾಂತಿಯಂದು ತಮನ್ನಾ ಅಭಿನಯದ ಚಿತ್ರ ಬಿಡುಗಡೆಯಾಗುತ್ತಿದ್ದು, ಈ ವರ್ಷವಾದರೂ ಈ ಮಿಲ್ಕಿ ಬ್ಯೂಟಿ ಪಾಲಿಗೆ ಶುಭವಾಗಲಿದೆಯೇ ಕಾದು ನೋಡಬೇಕಿದೆ. ಈ ಮಧ್ಯೆ ತಮನ್ನಾ , ಮೆಘಾ ಸ್ಟಾರ್ ಚಿರಂಜೀವಿ ಅವರ ಬಹುನಿರೀಕ್ಷಿತ ‘ಸೈರಾ ನರಸಿಂಹ ರೆಡ್ಡಿ’ ಬಯೋಪಿಕ್ ನಲ್ಲೂ ನಟಿಸುತ್ತಿದ್ದು, ಪ್ರಮುಖ ಪಾತ್ರದಲ್ಲಿ ಚಿರಂಜೀವಿ ಅಭಿನಯಿಸಿದ್ದಾರೆ.ಸಿನಿಮಾ ಪ್ರಮೋಷನ್ ನಲ್ಲಿ ಐ ಲವ್ ಅಂದ್ರು ಅಭಿಮಾನಿ

ಅಂದಹಾಗೆ ನಟಿ ತಮನ್ನಾ, ತಮಿಳಿನ ಕಣ್ಣಿ ಕಲೈಮನೆ ಚಿತ್ರದಲ್ಲಿ ನಟಿಸುತ್ತಿದ್ದು, ಉದಯನಿಧಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಚಿತ್ರ ಫೆಬ್ರವರಿ 11ರಂದು ಬಿಡುಗಡೆಯಾಗುತ್ತಿದ್ದು, ಹೀಗಾಗಿ ತಮನ್ನಾ ಚೆನ್ನೈನಲ್ಲಿ ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

ಈ ಸಂದರ್ಭ ಅಭಿಮಾನಿಯೊಬ್ಬ, ನನಗೆ ನೀವು ಅಂದ್ರೆ ತುಂಬಾ ಇಷ್ಟ. ನನಗೆ ನಿಮ್ಮನ್ನು ಮದುವೆಯಾಗುವ ಬಯಕೆ. ಇದು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನಗುತ್ತಲೇ ಪ್ರತಿಕ್ರಿಯೆ ನೀಡಲು ಮುಂದಾದ ತಮನ್ನಾ ಇನ್ನೇನು ಉತ್ತರಿಸಬೇಕು ಎನ್ನುವಷ್ಟರಲ್ಲೇ ಮಧ್ಯಪ್ರವೇಶಿಸಿದ ನಟ ಉದಯನಿಧಿ ಸ್ಟಾಲಿನ್, ಇದು ಸಾಧ್ಯವೇ ಇಲ್ಲ. ನಿನಗೆ ಗೊತ್ತಿಲ್ಲವೇ? ತಮನ್ನಾಗೆ ಗೆಳೆಯನೊಬ್ಬನಿದ್ದು, ಆತ ಅಮೆರಿಕಾದಲ್ಲಿ ವಾಸಿಸುತ್ತಿದ್ದಾನೆ ಎಂದಿದ್ದಾರೆ.

ಅಂದಹಾಗೆ ಇದುವರೆಗೂ ತಮನ್ನಾಗೆ ಬಾಯ್ ಪ್ರೇಂಡ್ ಇರುವ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಆದರೆ ಸ್ಟಾಲಿನ್ ಇದನ್ನು ಬಹಿರಂಗಗೊಳಿಸಿದ್ದಾರೆ. ಆದರೆ ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ತಮನ್ನಾ, ಯಾರಾದರೂ ಉತ್ತಮ ಹುಡುಗ ಇದ್ದರೆ ತಿಳಿಸಿ. ನಾನು ಮದುವೆಯಾಗುತ್ತೇನೆ ಎಂದಿದ್ದರು. ಹೀಗಾಗಿ ಸ್ಟಾಲಿನ್ ಹೇಳಿದ್ದು ನಿಜವೇ, ತಮನ್ನಾ ಈ ಹಿಂದೆ ಹೇಳಿದ್ದು ನಿಜವೇ ಎಂಬ ಗೊಂದಲ ಅಭಿಮಾನಿಗಳಿಗೆ ಮೂಡಿದೆಯಂತೆ.

#tamannabhatia #tollywood #telugumovies #tollywoodmovies #balkaninews

Tags