ಸುದ್ದಿಗಳು

ತಮನ್ನಾ ಡ್ಯಾನ್ಸ್ ನೋಡಿ ದಂಗಾಗಿ ಬಿಟ್ಟರಾ ಪ್ರಭುದೇವ..!

ಹೈದರಾಬಾದ್.ಮೇ.22: ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಮಿಲ್ಕಿ ಬ್ಯೂಟಿ ಅಂತಲೇ ಕರೆಸಿಕೊಳ್ಳುವ ತಮನ್ನಾ ಭಾಟಿಯಾ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ತನ್ನ ಮೈಮಾಟ ಡ್ಯಾನ್ಸ್, ಆ್ಯಕ್ಟಿಂಗ್ ಮೂಲಕ ಪಡ್ಡೆಹುಡುಗರ ಎದೆಗೆ ಕಿಚ್ಚು ಹಚ್ಚುವಾಕೆ ಈಕೆ. ಪಡ್ಡೆ ಹುಡುಗರ ಈಕೆಯ ಸೌಂದರ್ಯ ಹಾಗೂ ಡ್ಯಾನ್ಸ್ ನೋಡಿ ದಂಗಾಗೋದು ಕಾಮನ್.

Related image

ಇದೀಗ ಡ್ಯಾನ್ಸ್ ಕಿಂಗ್, ಅರ್ಥಾತ್ ಇಂಡಿಯಾದ ಮೈಕಲ್ ಜಾಕ್ಸನ್ ಎಂದೇ ಕರೆಸಿಕೊಳ್ಳುವ ಪ್ರಭುದೇವಾ ಕೂಡ ಮಿಲ್ಕಿಯ ಡ್ಯಾನ್ಸ್ ನೋಡಿ ದಂಗಾಗಿದ್ದಾರಂತೆ. ಅಂದಹಾಗೆ ಪ್ರಭುದೇವ ಹೀರೋ ಆಗಿ ನಟಿಸ್ತಿರೋ ಸಿನಿಮಾ ‘ದೇವಿ-2’. ಈ ಸಿನಿಮಾದಲ್ಲಿ ಪ್ರಭುದೇವಾಗೆ ಜೋಡಿಯಾಗಿರೋದು ಮಿಲ್ಕಿ ಬ್ಯೂಟಿ ತಮನ್ನಾ.

ದೇವಿ -2ನಲ್ಲಿ ತಮನ್ನಾ ರೆಡಿ ರೆಡಿ ಅನ್ನೋ ಸ್ಪೆಷಲ್ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿನಲ್ಲಿ ಮಿಲ್ಕಿಯ ಹಾಟ್ ಕುಣಿತ ಪ್ರಭುದೇವರ ಚಳಿಜ್ವರ ಬಿಡಿಸಿದೆ. ಆ ಮಟ್ಟಕ್ಕೆ ತಮನ್ನಾ ಸ್ಟೆಪ್ಸ್ ಹಾಕಿದ್ದಾರೆ…

ಇತ್ತೀಚೆಗೆ ಸ್ಪೆಷಲ್ ಸಾಂಗ್ ನಲ್ಲಿಯೇ ಹೆಚ್ಚು ಪಾಪ್ಯೂಲರ್ ಆಗ್ತಿರುವ ತಮನ್ನಾ ಇತ್ತೀಚೆಗೆ ಕೆಜಿಎಫ್ ಚಿತ್ರದಲ್ಲಿ ಯಶ್ ಜೊತೆ ಹೆಜ್ಜೆ ಹಾಕಿ ಭಾರೀ ಸದ್ದು ಮಾಡಿದ್ರು. ಹೀಗಾಗಿ ಕನ್ನಡದಲ್ಲೂ ಈಕೆಗೆ ದೊಡ್ಡ ಅಭಿಮಾನಿ ಬಳಗವೇ ಇರೋದ್ರಲ್ಲಿ ಡೌಟೇ ಇಲ್ಲ.

ಒಟ್ಟಿನಲ್ಲಿ ಹಾಟ್ ಅಂಡ್ ಬೋಲ್ಡ್ ಬ್ಯೂಟಿ ತಮನ್ನ ಮತ್ತೊಮ್ಮೆ ತಮ್ಮ ಡ್ಯಾನ್ಸ್ ಮೂಲಕವೇ ಸುದ್ದಿಯಲ್ಲಿದ್ದು ಡ್ಯಾನ್ಸ್ ಕಿಂಗ್ ಕಿಕ್ ಹಿಡಿಸಿದ ತಮನ್ನಾ ಡ್ಯಾನ್ಸ್ ನೋಡಿ ಅಭಿಮಾನಿಗಳು ಸಹ ಫುಲ್ ಖುಷ್ ಆಗಿದ್ದಾರೆ.

ವೈರಲ್ ಆಯ್ತು ನಿರ್ಮಾಪಕ ಕೆ.ಮಂಜು ಪುತ್ರನ ವರ್ಕೌಟ್ ವಿಡಿಯೋ…!!!

#tamanna, #dance, #devi-2, #filmnews, #balkaninews #prabhudeva, #filmnews, #kannadasuddigalu

Tags