ಸುದ್ದಿಗಳು

ಮಿಲ್ಕಿ ಬ್ಯೂಟಿ ತಮನ್ನಾ ಶೀಘ್ರದಲ್ಲೇ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಂತೆ.!

ಹೈದರಾಬಾದ್,ಸೆ.10: ನಾನು ಶೀಘ್ರದಲ್ಲೇ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಉತ್ತಮ ಕಥೆಗಾಗಿ ಕಾಯುತ್ತಿದ್ದೇನೆ. ಹೀಗೆಂದು ಮಿಲ್ಕಿ ಬ್ಯೂಟಿ ತಮನ್ನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕನ್ನಡದ ಬಗ್ಗೆ ತಮಗೆ ಒಲವಿದ್ದು, ಕನ್ನಡ ಸಿನಿಮಾದಲ್ಲಿ ನಟಿಸಬೇಕು ಎಂಬುದು ನನ್ನ ಬಹುದಿನದ ಕನಸು. ಹೀಗಾಗಿ ಉತ್ತಮ ಚಿತ್ರಕಥೆಗಾಗಿ ಎದುರು ನೋಡಿತ್ತಿದ್ದೇನೆ ಎಂದಿದ್ದಾರೆ ತಮನ್ನಾ.

ಕನ್ನಡದಲ್ಲಿ ನಟಿಸುವೆ

ತಮನ್ನಾ ಬಾಟಿಯಾ ಈಗಾಗಲೇ ತಮಿಳು, ತೆಲುಗು, ಹಿಂದಿ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು, ಬಾಹುಬಲಿ ಚಿತ್ರದ ಮೂಲಕ ಜಾಗತಿಕವಾಗಿ ಗುರುತಿಸಿಕೊಂಡರು. ಜಾಗ್ವಾರ್, ಯಶ್ ಅಭಿನಯದ ಕೆಜಿಎಫ್ ನಲ್ಲಿ ಸ್ಪೇಷಲ್ ಎಂಟ್ರಿ ಕೊಟ್ಟು ಕನ್ನಡ ಚಿತ್ರಪ್ರೇಮಿಗಳ ಹೃದಯದಲ್ಲಿ ಕಿಚ್ಚು ಹಚ್ಚಿದ್ದ ತಮನ್ನಾ ಬಾಟಿಯಾ, ಜಾಹಿರಾತು ಒಂದರಲ್ಲಿ ನಟ ಪುನೀತ್ ರಾಜ್ ಕುಮಾರ್ ಜೊತೆಗೆ ತೆರೆ ಹಂಚಿಕೊಂಡಿದ್ದರು.

Related image

ಪ್ರಶಾಂತ್ ನೀಲ್ ನಿರ್ದೇಶದನ ಕೆಜಿಎಫ್ ನಲ್ಲಿ ನಟಿಸಿರುವ ಅನುಭವ ಹಂಚಿಕೊಂಡಿರುವ ತಮನ್ನಾ, ಯಶ್ ಹಾಗೂ ಇಡೀ ಚಿತ್ರತಂಡದೊಂದಿನ ಅನುಭವ ಖುಷಿಕೊಟ್ಟಿದೆ. ಅವರು ನನಗೆ ಕೊಟ್ಟ ಪ್ರೀತಿ ಗೌರವದಿಂದಾಗಿ, ನಾನು ಯಾಕೆ ಕನ್ನಡದಲ್ಲಿ ನಾಯಕಿ ಆಗಿ ನಟಿಸಿಲ್ಲ ಎಂಬ ಪ್ರಶ್ನೆ ನನನ್ನಲ್ಲೇ ಮೂಡುವಂತೆ ಮಾಡಿತು. ಪುನೀತ್ ರಾಜ್ ಕುಮಾರ್ ಎಂದರೆ ತಮನ್ನಾಗೆ ಇಷ್ಟವಂತೆ. ಹೀಗಾಗಿ ಪುನೀತ್ ರಾಜ್ ಕುಮಾರ್ ಜೊತೆಗೆ ತೆರೆ ಹಂಚಿಕೊಳ್ಳಲು ಕಾತರದಿಂದ ಕಾಯುತ್ತಿರುವ ನಾನು, ಉತ್ತಮ ಕಥೆಗಾಗಿ ಎದುರು ನೋಡುತ್ತಿರುವುದಾಗಿಹೇಳಿಕೊಂಡಿದ್ದಾರೆ.

 

ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ, ತಮನ್ನಾ ವೃತ್ತಿಬದುಕನ್ನುಬದಲಿಸಿದ್ದು ಬಾಹುಬಲಿ ಚಿತ್ರ. ಚಿತ್ರದಲ್ಲಿನ ಆಕೆಯ ಪಾತ್ರ, ತಮನ್ನಾ ಅವರನ್ನು ಬೇರೊಂದು ಆಂಗಲ್ ನಲ್ಲೂ ಜನ ನೋಡುವಂತಾಯಿತು. ಪಾತ್ರದಲ್ಲಿನ ತೂಕ ಆಕೆಯ ನಟನಾ ಜೀವನಕ್ಕೆ ಹೊಸ ಟರ್ನ್ ತಂದುಕೊಟ್ಟಿತು.

 

Tags