ಸುದ್ದಿಗಳು

ಕನ್ನಡ ಚಿತ್ರದಲ್ಲಿ ನಟಿಸಲು ಬಂದ ಮತ್ತೊಬ್ಬ ‘ತಮಿಳು’ ನಟ…!!!

ಕನ್ನಡದ ಕಲಾವಿದರು ಪರಭಾಷೆಗಳಿಗೆ ಹೋಗುತ್ತಿರುವಂತೆಯೇ ಅಲ್ಲಿನವರೂ ಸಹ ಇಲ್ಲಿಗೆ ಬರುತ್ತಿದ್ದಾರೆ. ಅಂತವರ ಸಾಲಿನಲ್ಲಿ ಇದೀಗ ತಮಿಳಿನ ನಟ ಭರತ್ ಸೇರ್ಪಡೆಗೊಂಡಿದ್ದಾರೆ.

ಬೆಂಗಳೂರು, ಆ.06: ಪರಭಾಷಾ ಕಲಾವಿದರು ಇದೀಗ ಚಂದನವನಕ್ಕೆ ಬರುತ್ತಿದ್ದಾರೆ.ಇದೀಗ ‘ಬಾಯ್ಸ್’ ಹಾಗೂ ‘ಕಾದಲ್’ ಚಿತ್ರದ ನಟ ಭರತ್  ‘ಅಖಿಲ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಕೆಲವು ತಿಂಗಳ ಹಿಂದೆ ತೆರೆ ಕಂಡಿದ್ದ ‘ರಾಜರಥ’ ಚಿತ್ರದಲ್ಲಿ ತಮಿಳು ನಟ ‘ಆರ್ಯ’ ಅಭಿನಯಿಸಿದ್ದರು.

ಸೂರಜ್ ಕುಮಾರ್ ಚೊಚ್ಚಲ ಚಿತ್ರ ‘ಅಖಿಲ್’

‘ಅಖಿಲ್’ ಚಿತ್ರದ ಮೂಲಕ ನಟ ರಾಮ್ ಕುಮಾರ್ ಅವರ ಸುಪುತ್ರ ಸೂರಜ್ ರಾಮ್ ಕುಮಾರ್ ಅವರು ಚಿತ್ರರಂಗಕ್ಕೆ ನಾಯಕನಟರಾಗಿ ಪ್ರಪ್ರಥಮ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರವನ್ನು ಅನೂಪ್ ಆಂಟೋನಿ ಎಂಬುವರು ನಿರ್ದೇಶಿಸುತ್ತಿದ್ದಾರೆ. ಇವರು ಈ ಹಿಂದೆ ‘ಕಥಾವಿಚಿತ್ರ’ ಚಿತ್ರವನ್ನು ನಿರ್ದೇಶಿಸಿದ್ದರು. ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಾನ್ವಿ ಅವರು ಹೊಸ ರೀತಿಯ ಪಾತ್ರವನ್ನು ಮಾಡುತ್ತಿದ್ದು, ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಯುವ ಜನಾಂಗದ ಕಥೆ

ಕೆ.ವಿ.ಎಸ್ ಸಿನಿ ಪ್ರೋ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ‘ಅಖಿಲ್’ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದ್ದು, ಇದೊಂದು ಇಂದಿನ ಜನಾಂಗದ ಕಥೆಯನ್ನು ಒಳಗೊಂಡಿರುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದು ಅಭಿಲಾಶ್ ಕಲಾತಿ ಅವರ ಛಾಯಾಗ್ರಹಣವಿರಲಿದೆ.

Tags