ಸುದ್ದಿಗಳು

ತಾಯಿಗೆ ಮೆಸೇಜ್ ಮಾಡಿ ತಮಿಳು ನಟಿ ಆತ್ಮಹತ್ಯೆ…!!!

ಚೆನೈ, ಫೆ.16:

ಪ್ರೀತಿ ಮಾಡಿ ಮೋಸ ಹೋದವರು ಪ್ರಪಂಚದಲ್ಲಿ ಅನೇಕ ಮಂದಿ ಇದ್ದಾರೆ. ಕೆಲವೊಂದಿಷ್ಟು ಮಂದಿ ಪ್ರೀತಿ ಸೋತು ಜೀವನದಲ್ಲಿ ಗೆದ್ದರೆ ಇನ್ನೊಂದಿಷ್ಟು ಮಂದಿ ಪ್ರೀತಿಯಲ್ಲಿ ಸೋತು ಜೀವನದಲ್ಲೂ ಸೋತಿದ್ದಾರೆ. ಈ ಪ್ರೀತಿಯ ಮಾಯೆ ಸೆಲಿಬ್ರಿಟಿಗಳನ್ನು ಬಿಟ್ಟಿಲ್ಲ ಅನ್ನೋದಿಕ್ಕೆ ಹಲವಾರು ಉದಾಹರಣೆಗಳು ಇವೆ. ಹೀಗೆ ಪ್ರೀತಿಯಲ್ಲಿ ಸೋತು  ಜೀವನದಲ್ಲಿಯೋ ಸೋತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನಟಿಯೊಬ್ಬರು.

ತಮಿಳು ನಟಿ ಸಾವು

ತಮಿಳಿನ ಖ್ಯಾತ ನಟಿ ಯಶಿಕಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈ ನಟಿ ತನ್ನ ತಾಯಿಗೆ ಮೆಸೇಜ್ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಚೆನ್ನೈನಲ್ಲಿರುವ ಪೆರಾವಲೂರ್ ನಲ್ಲಿ ನಡೆದಿದೆ. ಇನ್ನು ಈ ನಟಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಯಶಿಕಾ ಅವರ ಮೂಲ ಹೆಸರು ಮೇರಿ ಶೀಲಾ ಜೀಬ್ರಾನಿ ಅಂತೆ. ಈ ನಟಿ ವದಪಾಲಾನಿಯ ಹಾಸ್ಟೆಲ್‍ವೊಂದರಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈ ನಟಿ ಮೋಹನ್ ಬಾಬು ಅಲಿಯಾಸ್ ಅರವಿಂದ್‍ ನನ್ನು ಪ್ರೀತಿಸುತ್ತಿದ್ದರಂತೆ.

ಮದುವೆ ನಿರಾಕರಣೆ ನಟಿ ಆತ್ಮಹತ್ಯೆ

ಇನ್ನು ಈ ನಟಿ ಮೋಹನ್  ಪೇರವಲೂರ್ ನ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಲಿವಿಂಗ್ ಟುಗೆದರ್ ನಲ್ಲಿ ಇದ್ದರಂತೆ. ಇತ್ತೀಚೆಗೆ ಇವರಿಬ್ಬರ ನಡುವೆ ಜಗಳವಾಗಿ ಮೋಹನ್ ಮನೆ ಬಿಟ್ಟು ಹೋಗಿದ್ದನಂತೆ. ಇನ್ನು ಈತ ಮದುವೆಯಾಗಲು ನಿರಾಕರಿಸಿದ್ದರಂತೆ. ಈ ಹಿನ್ನೆಲೆಯಲ್ಲಿ ನಟಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಈ ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫ್ಯಾನ್ಸಿ ಬಳೆಯ ಹವಾದಲ್ಲಿ ಗಾಜಿನ ಬಳೆ ಮರೆಯಾಯಿತೇ??

#kollywood #tamilmovies #tamilactressyashika #yashikamovies #balkaninews

Tags

Related Articles