ಸುದ್ದಿಗಳು

ಕಿರುತೆರೆ ನಟಿ ಆತ್ಮಹತ್ಯೆಗೆ ಯತ್ನ

ಖಿನ್ನತೆಯಿಂದ ಬಳಲುತ್ತಿದ್ದ ಕಿರುತೆರೆ ನಟಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬೆಂಗಳೂರು, ಸೆ.21: ಖಿನ್ನತೆ ಅನ್ನುವುದು ಯಾವ ಮನುಷ್ಯನನ್ನೂ ಬಿಟ್ಟಿಲ್ಲ. ಒಂದು ಬಾರಿ ಈ ಖಿನ್ನತೆ ಮನಸ್ಸಿಗೆ ಬಂತು ಅಂದರೆ ಸಾಕು ಅದರಿಂದ ಹೊರ ಬರುವುದು ತುಂಬಾ ಕಷ್ಟ. ಇದಕ್ಕೆ ಸಿನಿಮಾ ರಂಗವೂ ಹೊರತಾಗಿಲ್ಲ. ಈಗಾಗಲೇ ಅದೆಷ್ಟೊ ಸಿನಿಮಾ ಮಂದಿ ಈ ಮಾನಸಿಕ ಖಿನ್ನತೆಯಿಂದ ಬಳಲಿದ್ದಾರೆ, ಅಷ್ಟೆ ಅಲ್ಲ ಅದರಿಂದ ಹೊರ ಬರುವ ಪ್ರಯತ್ನ ಕೂಡ ಮಾಡಿದ್ದಾರೆ.

ಚೇತರಿಕೆ ಹಂತದಲ್ಲಿ ನಿಲಾನಿ

ಇದೀಗ ತಮಿಳಿನ ಕಿರುತೆರೆ ನಟಿ ನಿಲಾನಿ ಅವರು ಮಾನಸಿಕ ಖಿನ್ನತೆ, ಸಾರ್ವಜಿಕರ ವಲಯದ ಅಪಮಾನದಿಂದ ಚೆನೈನ ಕೆ.ಆರ್.ನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನು ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆಗೆ ದಾರಿ ತುಳಿಯಲು ಇದೇ ಕಾರಣ

ಇನ್ನು ಇವರ ಆತ್ಮಹತ್ಯೆಗೆ ಕಾರಣವೇ ಮಾನಸಿಕ ಖಿನ್ನತೆ ಅನ್ನುವುದು ಕುಟುಂಬಸ್ಥರ ಮಾತು. ಕೆಲ ದಿನಗಳ ಹಿಂದೆ ಸಹಾಯಕ ನಿರ್ದೇಶಕರೊಬ್ಬರು ನಿಲಾನಿಗೆ ಮದುವೆಯಾಗುವಂತೆ ಒತ್ತಾಯಿಸಿದ್ದರಂತೆ ಅಲ್ಲದೆ ಇವರು ಒಪ್ಪದಿದ್ದಾಗ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಇನ್ನು ಈ ವಿಚಾರವಾಗಿ ನಿಲಾನಿ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ಈ ಘಟನೆ ಆದ ನಂತರ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಗೆ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ನಿಲಾನಿ ವಿರುದ್ಧ ಕೂಡ ಅನೇಕರು ಮಾತನಾಡಿದ್ದರು. ಹಾಗಾಗಿ ಬೇಸತ್ತಿದ್ದ ನಿಲಾನಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎನ್ನಲಾಗಿದೆ.

Tags