ಸುದ್ದಿಗಳು

ಸಲ್ಮಾನ್ ಖಾನ್ ಇನ್ನು ಶಿವಾಜಿ..!

'ತಾನಾಜಿ: ಅನ್ಸಂಗ್ ವಾರಿಯರ್'

ಮುಂಬೈ,ಅ.19:  ಬಾಲಿವುಡ್ ನಟ ಅಜಯ್ ದೇವಗನ್ ರ ಕನಸಿನ ಚಿತ್ರ ತೆರೆಗೆ ಬರಲು ರೆಡಿಯಾಗುತ್ತಿದೆ. ಆ ಡ್ರಿಮ್ ಪ್ರಾಜೆಕ್ಟ್ ಸಿನೆಮಾದ ಹೆಸರೇ ‘ತಾನಾಜಿ: ಅನ್ಸಂಗ್ ವಾರಿಯರ್’. ಹೀಗಾಗಿ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತಯಾರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಹೊಸ ಚಲನಚಿತ್ರ ‘ವಿಎಫ್ ಎಕ್ಸ್’ ಸೆಟ್ಟಿನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿಲ್ಲ. ಸ್ಪೆಷಲ್ ಆಗಿ ಈ ಸಿನಿಮಾ ಮೂಡಿ ಬರಲಿದೆಯಂತೆ.

ತಾನಾಜಿಚಿತ್ರ

ಮರಾಠ ಸಾಮ್ರಾಜ್ಯದ ಕಮಾಂಡರ್ ತಾನಾಜಿ ಮಾಲುಸುರ್ರ ಆಧರಿಸಿ ಅಜಯ್ ದೇವಗನ್ ‘ತಾನಾಜಿ’ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಮೊದಲ ಹಂತದ ಶೂಟಿಂಗ್ ನಲ್ಲಿ ಮರಾಠರು ಮತ್ತು ಮುಘಲರ ಸೀಕ್ವೆನ್ಸ್ ಅನ್ನು ಚಿತ್ರೀಕರಿಸಲಾಗುತ್ತಿದೆ.

Image result for tanaji movie

 ಅಜಯ್ ಪಾತ್ರ ಏನು?

ಈ ಚಿತ್ರದಲ್ಲಿ ಅಜಯ್ ಜೊತೆಗೆ ಸೈಫ್ ಅಲಿ ಖಾನ್ ಸಹ ಚಿತ್ರದಲ್ಲಿದ್ದಾರೆ. ಮೂಲಗಳ ಪ್ರಕಾರ ಇವರು ಔರಂಗಜೇಬ್ ನ ಕಮಾಂಡರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ಅಜಯ್ ರ ಪಾತ್ರದ ಶೂಟಿಂಗ್ ಆರಂಭವಾಗಿಲ್ಲ.

ಸೈಫ್ ಕೂಡ ಅಭಿನಯ

‘ಕಲ್ ಹೋ ನಾ ಹೋ’ ನಲ್ಲಿ ಶಾರುಖ್ ಖಾನ್ ಜೊತೆಗೆ ನಟಿಸಿದ ನಂತರ ಸೈಫ್ ಆಲಿ ಖಾನ್ ಒಂದೇ ಚಿತ್ರದಲ್ಲಿ ಎರಡು ನಾಯಕರು ಇದ್ದಂತಹ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ ಅಜಯ್ ದೇವಗನ್ ತನ್ನ ಚಿತ್ರಕ್ಕಾಗಿ ಸ್ನೇಹಿತ ಸೈಫ್ ರ ಮನವೊಲಿಸಿ ಹೊಸ ಚಿತ್ರದಲ್ಲಿ ನಟಿಸುವಂತೆ ಮಾಡಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ತಂಡವು ಇವರ ಪಾತ್ರವನ್ನು ಅತ್ಯಂತ ಶಕ್ತಿಶಾಲಿಯಾಗಿ ರೂಪಿಸಿದೆ.

Image result for saif ali khan

ಸಲ್ಮಾನ್ ಖಾನ್ ಛತ್ರಪತಿ ಶಿವಾಜಿ

ಇನ್ನು ಕುತೂಹಲಕಾರಿ ಅಂಶವೆಂದರೆ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಛತ್ರಪತಿ ಶಿವಾಜಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿದೆ. ಅಜಯ್ ಜೊತೆಗಿನ ಆಳವಾದ ಸ್ನೇಹದಿಂದಾಗಿ ಸಲ್ಮಾನ್ ಖಾನ್ ಈ ಚಿತ್ರದಲ್ಲಿ ನಟಿಸಲು  ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಚಿತ್ರವು ಬ್ಲಾಕ್ ಬಸ್ಟರ್ ಎನ್ನುವುದು ತಜ್ಞರ ಅಭಿಪ್ರಾಯ. ಸದ್ಯ ಸಲ್ಮಾನ್ ಖಾನ್ ‘ಭಾರತ್ ‘ ಮತ್ತು ಬಿಗ್ ಬಾಸ್ ಶೋನಲ್ಲಿ ಬ್ಯುಸಿಯಾಗಿದ್ದಾರೆ‌.

Image result for salmankhan

 

Tags