ಸುದ್ದಿಗಳು

ನಾನಾ ಸೇರಿದಂತೆ ನಾಲ್ಕು ಜನರ ವಿರುದ್ಧ ಎಫೈಆರ್

೪೦ ಪುಟಗಳ ದೂರು

ಮುಂಬೈ,ಅ.11: ತನುಶ್ರೀ ನಾನಾ ಮೇಲೆ ದೂರು ದಾಖಲಿಸಿದ್ದರು. ಇದೀಗ ನಾನಾ ಸೇರಿದಂತೆ ನಾಲ್ಕು ಜನರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ನಾನಾ ಮೇಲೆ ಎಫ್ ಆರ್

ತನುಶ್ರೀ ದತ್ತಾ ನಾನಾ ಪಾಟೇಕರ್ ಮೇಲೆ ಆರೋಪ ಮಾಡಿದಾಗಿನಿಂದಲೂ ಈ ಆರೋಪ ತಾರಕ್ಕೇರಿರೋದಂತು ಸತ್ಯ. ಈ ವಿಚಾರ ಈಗಾಗಲೇ ಇಡೀ ಬಾಲಿವುಡ್ ತುಂಬೆಲ್ಲಾ ಹರಡಿದೆ. ಇದಾದ ನಂತರ ಹಲವಾರು ನಟಿಯರು ಈ ವಿಚಾರವಾಗಿ ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಲೇ ಇದ್ದಾರೆ. ಹಲವಾರು ನಿರ್ದೇಶಕರು, ಗಾಯಕರು,ನಿರ್ಮಾಕಪರು, ಸಂಭಾಷಣಾಕಾರರು ಹೀಗೆ ಸಾಲು ಸಾಲಾಗಿ ಪ್ರಕರಣಗಳು ಹೊರ ಬುರುತ್ತಿವೆ. ಈ ಬೆನ್ನಲ್ಲೇ ಇದೀಗ ನಾನಾ ಸೇರಿದಂತೆ ನಾಲ್ಕು ಜನರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ನಾಲ್ಕು ಮಂದಿಯ ವಿರುದ್ಧ ದೂರು

ಹೌದು, ನಾನಾ ಪಾಟೇಕರ್ ಸೇರಿದಂತೆ ಕೆಲವೊಂದು ಮಂದಿ ಮೇಲೆ ತನುಶ್ರೀ ದತ್ತಾ ಈಗಾಗಲೇ ದೂರನ್ನು ನೀಡಿದ್ದರು. ನಾನಾ ಕೂಡ ತನುಶ್ರೀ ದತ್ತಾಗೆ ಲೀಗಲ್ ನೋಟೀಸ್ ನೀಡಿದ್ದರು. ಮೊನ್ನೆಯಷ್ಟೇ  ಮಹಿಳಾ ಆಯೋಗ ಕೂಡ ನಾನಾಗೆ ನೋಟೀಸ್ ನೀಡಿತ್ತು. ಇದೀಗ ನಾನಾ ಮೇಲೆ ಎಫ್ ಐ ಆರ್ ದಾಖಲಾಗಿದೆ. ಮಹರಾಷ್ಟ್ರದ ಒಶಿವಾರು ಪೊಲೀಸ್ ಠಾಣೆಯಲ್ಲಿ ನಾನಾ ಪಾಟೇಕರ್, ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ, ನಿರ್ದೇಶಕ ರಾಕೇಶ್ ಸಾರಂಗ್, ನಿರ್ಮಾಪಕ ಸಮಿ ಸಿದ್ದಿಖಿ ಮೇಲೆ ಇದೀಗ ಎಫ್ ಐ ಆರ್ ದಾಖಲಾಗಿದೆ.

Image result for choreographer ganesh acharya

೪೦ ಪುಟಗಳ ದೂರು

ಇನ್ನು ಈ ನಾಲ್ವರ ವಿರುದ್ಧ ಸೆಕ್ಷನ್, ೩೫೪, ೫೦೯ ಅಂದರೆ ಮಹಿಳೆಯನ್ನು ಅವಮಾನ ಮಾಡುವುದು, ಆ ರೀತಿ ಮಾತನಾಡುವುದು, ಮಹಿಳೆಯನ್ನು ದುರುದ್ದೇಶದಿಂದ ಹಿಂಬಾಲಿಸುವುದು. ಹೀಗೆ ೨ ಸೆಕ್ಷನ್‌ಗಳ ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಇನ್ನು ಮಹಿಳಾ ಆಯೋಗದಲ್ಲೂ ೪೦ ಪುಟಗಳ ದೂರು ನೀಡಲಾಗಿದೆ.

Tags