ಸುದ್ದಿಗಳು

ತಾಯಿಯ ಪಾತ್ರದಲ್ಲಿ ಸಕ್ರಿಯರಾದ ಹಿರಿಯ ನಟಿ ತಾರಾ

ಹಿರಿಯ ನಟಿ ತಾರಾ ಈಗಾಗಲೇ ನಾಯಕಿಯಾಗಿ, ಸ್ನೇಹಿತೆಯಾಗಿ, ಗೃಹಿಣಿಯಾಗಿ.. ಹೀಗೆ ಅನೇಕ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ತಾಯಿಯ ಪಾತ್ರದಲ್ಲಿ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಅಂದ ಹಾಗೆ ತಾರಾ ಈಗಾಗಲೇ ‘ಹಸಿನಾ’, ‘ಹೆಬ್ಬೆಟ್ ರಾಮಕ್ಕ’, ‘ಸಾವಿತ್ರಿ ಬಾಯಿ ಪುಲೆ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಮನ ಮೋಡಿ ಮಾಡುವ ಪಾತ್ರದಲ್ಲಿ ನಟಿಸಿದ್ದಾರೆ. ಆದರೂ ಅವರಿಗೆ ಇತ್ತಿಚೆಗಿನ ದಿನಗಳಲ್ಲಿ ತಾಯಿಯ ಪಾತ್ರಗಳೇ ಅವರನ್ನು ಅರಸಿ ಬರುತ್ತಿವೆ.

ಈ ವಾರ ತೆರೆ ಕಾಣುತ್ತಿರುವ ‘ಆದಿ ಲಕ್ಷ್ಮಿ ಪುರಾಣ’ ಮತ್ತು ಚಿರು ಸರ್ಜಾ ನಟನೆಯ ‘ಸಿಂಗ’ ಚಿತ್ರಗಳಲ್ಲಿ ಅಮ್ಮನಾಗಿ ತಾರಾ ನಟಿಸಿದ್ದಾರೆ. ಅಲ್ಲದೇ ಸೃಜನ್ ಲೋಕೇಶ್ ರೊಂದಿಗೆ ಎನ್.ಆರ್.ಐ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.‘ನಾಯಕಿಯಾಗಿ ನಟಿಸಬೇಕು ಎಂಬ ಹಂಬಲವಿಲ್ಲ ನನಗೆ. ನನ್ನ ಪಾತ್ರ ಪ್ರೇಕ್ಷಕರ ಮನಸ್ಸನ್ನು ಗೆಲ್ಲಬೇಕು. ಆ ನಿಟ್ಟಿನಲ್ಲಿ ಬೇರೆ ಬೇರೆ ಪಾತ್ರಗಳು ಸಿಕ್ಕರೇ ಅನುಕೂಲವಾಗುತ್ತದೆ. ಹೀಗಾಗಿ ವೈವಿಧ್ಯಮಯ ಪಾತ್ರಗಳು ಚಿತ್ರರಂಗದಲ್ಲಿ ನನ್ನನ್ನು ಉಳಿಯುವಂತೆ ಮಾಡಿವೆ’ ಎಂದಿದ್ದಾರೆ ತಾರಾ.

ಸದ್ಯ ತಾರಾ ಧ್ರುವ ಸರ್ಜಾ ನಟನೆಯ ‘ಪೊಗರು’, ಹೊಸಬರ ‘ಪಾರ್ವತಮ್ಮನ ಮಗ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಎಲ್ಲಾ ನಾಯಕನಟರೊಂದಿಗೆ ಅಮ್ಮನಾಗಿ ಕಾಣಿಸಿಕೊಂಡಿರುವ ಅವರಿಗೆ ಬೇರೆ ಪಾತ್ರಗಳು ಸಿಗುತ್ತಿವೆ ಎನ್ನುತ್ತಾರೆ.

ಭಯಾನಕತೆ, ಕೌತುಕತೆಯನ್ನೊಳಗೊಂಡ ‘ರಾಕ್ಷಸುಡು’ ಟ್ರೇಲರ್ ರಿಲೀಸ್

#tara #busy #in #mother #role #balkaninews #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies

Tags