ಸುದ್ದಿಗಳು

ಬುಡುಬುಡುಕೆ ಜನಾಂಗದವರಿಂದ ‘ತಾರಕಾಸುರ’ ಚಿತ್ರದ ಬಿಡುಗಡೆಗೆ ತಡೆ..!?!

ಈ ವಾರ ತೆರೆಗೆ ಬರುತ್ತಿರುವ ‘ತಾರಕಾಸುರ’

ಬೆಂಗಳೂರು, ನ.21: ‘ರಥಾವರ’ ಚಿತ್ರದ ನಂತರ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ತಾರಕಾಸುರ’.. ಇನ್ನೇನು ಚಿತ್ರದ ಬಿಡುಗಡೆಗೆ ಬರೀ ಎರಡೇ ದಿನಗಳು ಬಾಕಿಯಿರುವಾಗಲೇ ಚಿತ್ರತಂಡಕ್ಕೊಂದು ಆತಂಕ ಎದುರಾಗಿದೆ.

ಚಿತ್ರದ ಕಥಾಹಂದರ ಕುರಿತಂತೆ

ಈ ಚಿತ್ರದಲ್ಲಿ ನಿರ್ದೇಶಕರು ಬುಡುಬುಡುಕೆ ಜನಾಂಗದ ಕುರಿತಂತೆ ತೋರಿಸಿದ್ದಾರೆ. ಹೀಗಾಗಿ . ಬುಡುಬುಡುಕೆ ಗೋಂದಳಿ ಸಮಾಜದವರು ಈ ಚಿತ್ರದ ವಿರೋಧ ವ್ಯಕ್ತಪಡಿಸಿದ್ದಾರೆ. ಕಾರಣವಿಷ್ಟೇ.. ಈ ಸಿನಿಮಾವನ್ನು ಮೊದಲಿಗೆ ನಮಗೆ ತೋರಿಸಿ ಎಂದು ಸಂಘದ ಅಧ್ಯಕ್ಷ ಕರಿಯಪ್ಪ ಹೇಳಿದ್ದಾರೆ.

ಹೀಗಾಗಿ ಬುಡುಬುಡುಕೆ ಶಾಸ್ತ್ರ ಹೇಳುವ ವ್ಯಕ್ತಿಗೆ ಸಂಬಂಧಪಟ್ಟ ಸಿನಿಮಾ ಇದಾಗಿದ್ದರಿಂದ, ಬಿಡುಗಡೆಗೆ ತೊಂದರೆ ಎದುರಾಗಿದೆ. ಸಿನಿಮಾ ತೋರಿಸದೇ ಹೋದಲ್ಲಿ ಕೋರ್ಟ್ ಮೆಟ್ಟಿಲೇರಲು ಬುಡುಬುಡುಕೆ ಗೊಂದಳಿ ಸಮಾಜ ನಿರ್ಧಾರ ಮಾಡಿದೆ. ಚಿತ್ರತಂಡ ಈ ಸಮಸ್ಯೆಯನ್ನು ಬಗೆಹರಿಸಿಕೊಂಡರೆ, ಈ ವಾರ ಚಿತ್ರ ತೆರೆಗೆ ಬರಲಿದೆ.

ಚಿತ್ರದ ಬಗ್ಗೆ

ಈಗಾಗಲೇ ‘ತಾರಕಾಸುರ’ ತನ್ನ ವಿಭಿನ್ನ ಪೋಸ್ಟರ್, ಹಾಡುಗಳು ಮತ್ತು ಟ್ರೈಲರ್ ನಿಂದ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದ ಮೂಲಕ ವೈಭವ್ ನಾಯಕನಟರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಮಾನ್ವಿತಾ ಹರೀಶ್ ನಾಯಕಿಯಾಗಿದ್ದಾರೆ. ಉಳಿದಂತೆ ಹಾಲಿವುಡ್ ನಟ ಡ್ಯಾನಿ ಸಫಾನಿ, ಕರಿಸುಬ್ಬು, ಎಂ ಕೆ ಮಠ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.

Tags

Related Articles