ಸುದ್ದಿಗಳು

ಯಶಸ್ವಿ 50 ನೇ ದಿನಗಳನ್ನು ಪೂರೈಸಿದ ‘ತಾರಕಾಸುರ’

‘ರಥಾವರ’ ನಿರ್ದೇಶಕರ ಮತ್ತೊಂದು ಸೂಪರ್ ಹಿಟ್ ಸಿನಿಮಾ

ಬೆಂಗಳೂರು.ಜ.12: ‘ರಥಾವರ’ ಚಿತ್ರದ ನಂತರ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ತಾರಕಾಸುರ’ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸದ್ಯ ಎಂಟನೆಯ ವಾರಕ್ಕೆ ಕಾಲಿಟ್ಟಿರುವ ಈ ಚಿತ್ರವು ಇದೀಗ 50 ದಿನವನ್ನು ಪೂರೈಸಿ, 75 ನೇ ದಿನದತ್ತ ಮುನ್ನುಗ್ಗುತ್ತಿದೆ.

ಯಶಸ್ವಿ 50 ನೇ ದಿನ

ಕಳೆದ ವರ್ಷ ನವೆಂಬರ್ 23 ರಂದು ಬಿಡುಗಡೆಯಾಗಿದ್ದ ‘ತಾರಕಾಸುರ’ ಸಿನಿಮಾ ಈಗ 50 ದಿನಗಳನ್ನು ಪೂರೈಸಿದೆ. ಮೊದಲ ದಿನದಿಂದ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಹೆಚ್ಚು ಜನರು ಸಿನಿಮಾ ನೋಡುವ ಹಾಗೆ ಮಾಡಿತ್ತು. ಒಂದು ಕಡೆ ಪ್ರೇಕ್ಷಕ ಮತ್ತೊಂದು ಕಡೆ ವಿಮರ್ಶಕ ಇಬ್ಬರಿಗೂ ಸಿನಿಮಾ ತೃಪ್ತಿ ನೀಡಿತ್ತು.ಹೀಗಾಗಿ ಚಿತ್ರತಂಡದದವರು ಖುಷಿಯಾಗಿದ್ದಾರೆ.

ಕಥಾಹಂದರ

ಚಿತ್ರದಲ್ಲಿ ಬುಡ್ ಬುಡುಕೆ ಜನಾಂಗದವರ ಚರಿತ್ರೆಯನ್ನೆಲ್ಲಾ ಅಮೂಲಾಗ್ರವಾಗಿ ಶೋಧಿಸಿ, ಅಳಿದು ಹೋಗುತ್ತಿರುವ ಜಾನಪದ ಕಲೆಯನ್ನು ಸಾಧ‍್ಯಂತವಾಗಿ ವಿವರಿಸಿದ ಚಿತ್ರವೇ ‘ತಾರಕಾಸುರ’. ಚಿತ್ರದಲ್ಲಿ ವೈಭವ್, ಮಾನ್ವಿತಾ ಹರೀಶ್, ಸಾಧುಕೋಕಿಲ, ಎಂಕೆ ಮಠ್, ಡ್ಯಾನಿ ಸಫಾನಿ ಹಾಗೂ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

ಗಮನ ಸೆಳೆದ ನವನಟ ವೈಭವ್

ಚಿತ್ರದ ನಾಯಕ ವೈಭವ್ ಇದೇ ಮೊದಲ ಬಾರಿಗೆ ನಟಿಸಿದ್ದರೂ ಸಹ ಗಮನ ಸೆಳೆದಿದ್ದಾರೆ. ಇಲ್ಲಿ ಅವರದ್ದು ಮೂರು ಬಗೆಯ ಪಾತ್ರವಿದ್ದು, ಆ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಇನ್ನು ನಿರ್ಮಾಪಕ ನರಸಿಂಹಲು ತಮ್ಮ ಮಗನಿಗಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದು, ಅವರೂ ಸಂತಸದಲ್ಲಿದ್ದಾರೆ.

#tarakasura #balakninews #filmnews, #kannadasuddigalu

Tags