ಸುದ್ದಿಗಳು

ಲಿಪ್ ಲಾಕ್ ದೃಶ್ಯಕ್ಕೆ ಒಲ್ಲೆ ಎಂದು ಚಿತ್ರವನ್ನೇ ಕೈ ಬಿಟ್ಟ ನಟಿ!!

ಬಾಲಿವುಡ್ ಅರ್ಜುನ್ ರೆಡ್ಡಿಗೆ ನಾಯಕಿ ಇನ್ಯಾರು?

ಮುಂಬೈ,ಸೆ.11: ತೆಲುಗು ಚಿತ್ರರಂಗದಲ್ಲಿ ‘ಅರ್ಜುನ್ ರೆಡ್ಡಿ’ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿತ್ತು. ವಿಜಯ್ ದೇವರಕೊಂಡನಿಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರ. ತೆಲುಗು ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿನಿಮಾಗಳಲ್ಲಿ ಒಂದು.. ಈ ಸಿನಿಮಾ ಇದೀಗ ಹಿಂದಿಯಲ್ಲಿ ಕೂಡಾ ರೀಮೇಕ್ ಆಗುತ್ತಿದೆ.

ಚಿತ್ರ ಕೈ ಬಿಡಲು ಕಾರಣವೇನು?

ತೆಲುಗಿನಲ್ಲಿ ವಿಜಯ್ ದೇವರಕೊಂಡ ಮಾಡಿದ ಪಾತ್ರವನ್ನು ಹಿಂದಿಯಲ್ಲಿ ಶಾಹಿದ್ ಕಪೂರ್ ಮಾಡುತ್ತಿದ್ದಾರೆ ಸಿನಿಮಾ ಹಕ್ಕು ಈಗಾಗಲೇ ಹಿಂದಿಗೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದೆ ಸಂದೀಪ್ ರೆಡ್ಡಿ ವೆಂಗ ಅವರೇ ಹಿಂದಿ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ತಾರಾ ಸುತಾರಿಯಾ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಚಿತ್ರತಂಡ ಹೇಳಿತ್ತು. ಆದರೆ ಈಗ ತಾರಾ ಈ ಪ್ರಾಜೆಕ್ಟ್​​​ನಿಂದ ಹೊರಬಂದಿದ್ದಾರೆಯಂತೆ . ಇಷ್ಟಕ್ಕೂ ತಾರಾ ಚಿತ್ರ ಕೈ ಬಿಡಲು ಕಾರಣವೇನು? ಮುಂದೆ ಓದಿ..

Image result for tara sutaria hot photos

ಲಿಪ್ ಲಾಕ್ ಬೇಡ

ತಾರಾ ಈ ಪ್ರಾಜೆಕ್ಟ್​​ನಿಂದ ಹೊರಹೋಗಲು ಚಿತ್ರದ ಲಿಪ್​ಲಾಕ್ ದೃಶ್ಯ ಕಾರಣವಂತೆ. ಲಿಪ್ ಲಾಕ್ ದೃಶ್ಯ ಗಳಲ್ಲಿ ತಾರಾಗೆ ನಟಿಸಲು ಆಸಕ್ತಿಯಿಲ್ಲದ್ದರಿಂದ ಚಿತ್ರದಿಂದ ಹೊರ ಉಳಿದಿದ್ದಾರೆ ಎನ್ನಲಾಗಿದೆ. ಹಾಗಾದರೆ ಇನ್ನು ಶಾಲಿನಿ ಪಾಂಡೆ ನಿಭಾಯಿಸಿದ ಪಾತ್ರಕ್ಕೆ ಯಾವ ನಟಿ ಬರುತ್ತಾರೋ ಕಾದು ನೋಡಬೇಕು.

Tags