ಸುದ್ದಿಗಳು

ತಾಪ್ಸಿ ಪೊನ್ನು ಕನ್ನಡಕ್ಕೆ…!!!

ಚಂದನವನಕ್ಕೆ ಮತ್ತೊಬ್ಬ ಪ್ರತಿಭಾವಂತ ಪರಭಾಷಾ ನಟಿ

ಬೆಂಗಳೂರು, ಸ.11: ಕನ್ನಡದ ನಟಿಯರು ಪರಭಾಷಾ ಕಡೆಗೆ ಹೋಗುವುದನ್ನು ನೋಡಿದ್ದೀವಿ. ಅದರಂತೆ ಬೇರೆ ಭಾಷೆಯ ನಟಿಯರು ಕನ್ನಡಕ್ಕೆ ಬರುವುದನ್ನು ನೋಡುತ್ತಿದ್ದೇವೆ. ಈಗಾಗಲೇ ಸ್ನೇಹ, ಶ್ರೀಯಾ ಶರಣ್, ತ್ರಿಶಾ ಕೃಷ್ಣನ್, ಜೆಲಿನಿಯಾ.. ಸೇರಿದಂತೆ ಅನೇಕರು ಕನ್ನಡದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರಲ್ಲಿ ಹೊಸ ಸೇರ್ಪಡೆ ತಾಪ್ಸಿ ಪೊನ್ನು

ಕನ್ನಡದ ಚಿತ್ರಗಳಲ್ಲಿ ತಾಪ್ಸಿ

ಎಲ್ಲವೂ ಅಂದುಕೊಂಡಂತಾಗಿದ್ದರೆ ಈಗಾಗಲೇ ಅವರು ಕನ್ನಡದ ಚಿತ್ರಗಳಲ್ಲಿ ಅಭಿನಯಿಸಬೇಕಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅವರ ಪ್ರವೇಶ ತಡವಾಗಿತ್ತು. ಆದರೆ ಇದೀಗ ಅವರು ಕನ್ನಡದ ಚಿತ್ರದಲ್ಲಿ ನಟಿಸಲು ಅತೀ ಶೀಘ್ರದಲ್ಲಿಯೇ ಬೆಂಗಳೂರಿಗೆ ಬರಲಿದ್ದಾರೆ.

ಎಲ್ಲಾ ಭಾಷೆಯ ಚಿತ್ರದಲ್ಲೂ ನಟಿಸುವೆ

“ನಾನು ಈಗಾಗಲೇ ಬಾಲಿವುಡ್, ಟಾಲಿವುಡ್ ಸೇರಿದಂತೆ ದಕ್ಷಿನ ಭಾರತೀಯ ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದೇನೆ. ಕೇವಲ ನನ್ನ ಪ್ರತಿಭೆ ಸೀಮಿತವಾಗಬಾರದು. ಹೀಗಾಗಿ ಕನ್ನಡ ಚಿತ್ರಗಳಲ್ಲಿಯೂ ಅಭಿನಯಿಸುತ್ತೇನೆ” ಎಂದು ತಾಪ್ಸಿ ಹೇಳುತ್ತಾರೆ.
“ಈಗಾಗಲೇ ಕನ್ನಡದಿಂದ ಅವಕಾಶಗಳು ಸಿಗುತ್ತಿವೆ. ಖಂಡಿತ ಚಂದನವನದ ಚಿತ್ರಗಳಲ್ಲಿ ನಟಿಸುತ್ತೇನೆ’’ ಎಂದು ತಾಪ್ಸಿ ಹೇಳುತ್ತಾರೆ. ಇವರು ಈಗಾಗಲೇ ತಮಿಳು, ತೆಲುಗು ಚಿತ್ರಗಳಲ್ಲಿ ವೃತ್ತಿ ಜೀವನ ಆರಂಭಿಸಿ ಈಗ ಬಾಲಿವುಡ್ ನಲ್ಲಿ ನೆಲೆ ನಿಂತಿದ್ದಾರೆ.

ಸದ್ಯ, ಬಿಟೌನ್ ನಲ್ಲಿ ಭಾರಿ ಬೇಡಿಕೆಯಲ್ಲಿರುವ ತಾಪ್ಸಿ, ಅನುರಾಗ್ ಕಶ್ಯಪ್ ಅವರ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ವಿಕ್ಕಿ ಕೌಶಲ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಸೆಪ್ಟಂಬರ್ 14 ರಂದು ಈ ಸಿನಿಮಾ ತೆರೆಕಾಣುತ್ತಿದೆ.

Tags