ಸುದ್ದಿಗಳು

ಆತ್ಮೀಯ ಗುರುಗಳನ್ನು ಸ್ಮರಿಸಿಕೊಂಡ ಜಗ್ಗೇಶ್ ಮತ್ತು ದುನಿಯಾ ವಿಜಯ್

ಇಂದು ಸೆಪ್ಟೆಂಬರ್ 5 , ಶಿಕ್ಷಕರ ದಿನಾಚರಣೆ

“ನನಗೆ ಕನ್ನಡ ಕಲಿಸಿದ ಶಿಕ್ಷಕರು ಹೆಚ್.ಬಿ.ಕೃಷ್ಣಮೂರ್ತಿಗಳು.. ತಂದೆ ತಾಯಿ ನಂತರದ ಸ್ಥಾನ ಆದರ್ಶ ಗುರುಗಳಿಗೆ ನೀಡಲಾಗಿದೆ. ಗುರುವಿನಲ್ಲಿ ತ್ರಿಮೂರ್ತಿಗಳ ಕಾಣಬಹುದು’ ಎಂದು ಜಗ್ಗೇಶ್ ರವರು ಹೇಳುತ್ತಾರೆ.

ಬೆಂಗಳೂರು, ಸ. 05 : ಇಂದು ಸೆಪ್ಟೆಂಬರ್ 5, ಶಿಕ್ಷಕರ ದಿನಾಚರಣೆ. ಸಮಾಜಕ್ಕೆ ಉತ್ತಮ ಪ್ರಜೆಯನ್ನು ನೀಡುವಲ್ಲಿ ಗುರುಗಳ ಪಾತ್ರ ಪ್ರಮುಖವಾದುದ್ದು. ಇದೀಗ ಇಂತಹ ಗುರುಗಳ ನೆನಪನ್ನು ಮಾಡಿಕೊಂಡಿದ್ದಾರೆ ನವರಸ ನಾಯಕ ಜಗ್ಗೇಶ್.

ಗುರುಗಳಲ್ಲಿ ತ್ರಿಮೂರ್ತಿಗಳನ್ನು ಕಂಡೆ
ನವರಸನಾಯಕ ಜಗ್ಗೇಶ್ ಅದ್ಬುತವಾದ ವಾಕ್ಯಗಳಲ್ಲಿ ಗುರುಗಳ ಬಗ್ಗೆ ಬಣ್ಣಿಸಿದ್ದಾರೆ. “ನನಗೆ ಕನ್ನಡ ಕಲಿಸಿದ ಶಿಕ್ಷಕರು ಹೆಚ್.ಬಿ.ಕೃಷ್ಣಮೂರ್ತಿಗಳು.. ತಂದೆ ತಾಯಿ ನಂತರದ ಸ್ಥಾನ ಆದರ್ಶ ಗುರುಗಳಿಗೆ ನೀಡಲಾಗಿದೆ. ಗುರುವಿನಲ್ಲಿ ತ್ರಿಮೂರ್ತಿಗಳ ಕಾಣಬಹುದು.. ಗುರುಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರ.. ಶಿಕ್ಷಕರ ದಿನಾಚರಣೆ ಶುಭಕಾಮನೆಗಳು” ಎಂದು ಟ್ವಿಟ್ ಮಾಡಿದ್ದಾರೆ.

ದೇವರು ಬರೆದ ಹಣೆಬರಹ

ಅದರೊಂದಿಗೆ “ನನ್ನಬಾಲ್ಯದ ಡೆಕನ್ ಶಾಲೆ ನರ್ಸರಿ ಟೀಚರ್ ಇವರು. ಒಂದುವರ್ಷ ಇವರ ಶಾಲೆಯಲ್ಲೆ ನಾನು ಓದಿದ್ದು.ಇವರ ಶಾಲೆಯ ಮುಂದೆ ಅಪ್ಪಅಮ್ಮ ರೇಷನ್ ಡಿಪೋ ಇಟ್ಟಿದ್ದರು..ನನ್ನ ಗಮನಿಸಲು ಸುಲಭ ಎಂದು ಇವರ ಶಾಲೆಗೆ ಸೇರಿಸಿದ್ದರು! ಆಗ ಪರಿಮಳ ಪಾಪು ಸ್ಕೂಲ್ ಆಯ ಇವಳ ಎತ್ತಿಕೊಂಡು ಓಡಾಡುತ್ತಿದ್ದರು..ಮುಂದೆ ಇವಳು ನನ್ನ ಧರ್ಮಪತ್ನಿ..ದೇವರು ಬರೆದ ಅರಿಯದ ಹಣೆಬರಹ” ಎಂದು ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ.

ದುನಿಯಾ ವಿಜಯ್

‘ಬದುಕಿನುದ್ದಕ್ಕೂ ನನ್ನ ಕಷ್ಟ ಸುಖಗಳಲ್ಲಿ ಜೊತೆಯಾಗಿ ಕೈ ಹಿಡಿದು ನಡೆಸುತ್ತಿರುವ ನಮ್ಮಪ್ಪ ಅಮ್ಮನೇ ನನ್ನ ಮೊದಲ ಗುರುಗಳು.! ತಮ್ಮ ಮಕ್ಕಳಿಗೆ ದಾರಿ ತಪ್ಪದಂತೆ ಎಚ್ಚರಿಸಿ, ಜಗತ್ತಿನ ಅರಿವು ಮೂಡಿಸಿ , ಜ್ಞಾನ ತುಂಬುತ್ತಿರುವ ಪ್ರತಿಯೊಬ್ಬ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು’ ಎಂದು ದುನಿಯಾ ವಿಜಯ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Tags