ಸುದ್ದಿಗಳು

ಶಿಕ್ಷಕರ ದಿನಾಚರಣೆಯ ಶುಭಾಶಯದ ಜೊತೆಗೆ ತಮ್ಮ ವಿಷಾದ ವ್ಯಕ್ತಪಡಿಸಿದ ಮೇಷ್ಟ್ರು..

”ಒಬ್ಬನೇ ಒಬ್ಬನಿಂದ ಮಾತ್ರ ನಮ್ಮ ಬದುಕು ರೂಪಗೊಳ್ಳುವುದಿಲ್ಲ”

ಆ ದೃಷ್ಟಿಯಿಂದ ಗುರುವನ್ನು ಸರಳೀಕರಿಸುವುದು ಕಷ್ಟ. ಎಲ್ಲಾ ಅರಿವು, ಎಲ್ಲಾ ಕಲಿಕೆಯು ಗುರುವಿಗೆ ಸಮಾನ.

Image result for nagathi halli chandrashekar

 ಮಂಡ್ಯ,ಸೆ.05: ಸ್ಯಾಂಡಲ್​​​ವುಡ್​ನ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್​ ಇಂದು ಶಿಕ್ಷಕರ ದಿನಾಚರಣೆಯ ಶುಭಾಯಗಳನ್ನು ತಿಳಿಸಿದ್ದಾರೆ.

ಮನದಾಳದ ಮಾತು..

ವಿಡಿಯೋದಲ್ಲಿ ಶಿಕ್ಷಣ ಹಾಗೂ ಶಿಕ್ಷಕರ ಬಗ್ಗೆ ಚಂದ್ರಶೇಖರ್, ಈ ರೀತಿಯಾಗಿ ಮಾತನಾಡಿದ್ದಾರೆ.​​”ಒಬ್ಬನೇ ಒಬ್ಬನಿಂದ ಮಾತ್ರ ನಮ್ಮ ಬದುಕು ರೂಪಗೊಳ್ಳುವುದಿಲ್ಲ. ಪ್ರಾರ್ಥಮಿಕ ಹಂತದಿಂದ ಕೊನೆಯ ವಿದ್ಯಾಭ್ಯಾಸ ವರೆಗೂ ಮಾತ್ರ ಕಲಿಸಿದಂತವರು ಮಾತ್ರ ನಮ್ಮ ಗುರುಗಳು ಅಂತ ಹೇಳುವುದೂ ಕೂಡ ತುಂಬಾ ಸರಳೀಕರಣವಾಗುತ್ತೆ. ಈಗ ನಾನು ಸಾಹಿತ್ಯ, ಸಿನಿಮಾ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುವಾಗ ನಮಗೆ ಗೊತ್ತಿಲ್ಲದೇ ನಮ್ಮನ್ನು ರೂಪಿಸಿದಂತಹ ಅನೇಕ ಪುಸ್ತಗಳಿವೆ, ಅನೇಕ ವ್ಯಕ್ತಿಗಳಿದ್ದಾರೆ, ಅನೇಕ ಅನೇಕ ಅನುಭವವಗಳಿವೆ, ಅನೇಕ ಪ್ರವಾಸಗಳಿವೆ. ಆ ದೃಷ್ಟಿಯಿಂದ ಗುರುವನ್ನು ಸರಳೀಕರಿಸುವುದು ಕಷ್ಟ. ಎಲ್ಲಾ ಅರಿವು, ಎಲ್ಲಾ ಕಲಿಕೆಯು ಗುರುವಿಗೆ ಸಮಾನ. ಈಗ ಕಲಿಯುವುದು ಮತ್ತು ಕಲಿಸುವುದು ವ್ಯವಹಾರವಾಗಿ ಹೋಗಿದೆ. ಯಾರಿಗಾದರೂ ಏನಾದರೂ ಮಾಹಿತಿ ಬೇಕಾ? ಗೂಗಲ್ ಗೆ ಹೋಗಿ, ವಿಕಿಪೀಡಿಯಕ್ಕೆ ಹೋಗಿ ಅನ್ನುವಷ್ಟರ ಮಟ್ಟಿಗೆ ನಾವು ಅರಿವನ್ನು ಒಂದು ಮಾಹಿತಿಗೆ ಸೀಮಿತಗೊಳ್ಳಿಸಿದ್ದೇವೆ”.  ಎಂದು ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.

Tags