ಸುದ್ದಿಗಳು

ತೆಲುಗಿನ ‘ಮಹರ್ಷಿ’ ಚಿತ್ರಕ್ಕೆ ಕನ್ನಡದ ‘ಬಂಗಾರದ ಮನುಷ್ಯ’, ‘ಕಾಮನ ಬಿಲ್ಲು’ ಸೇರಿದಂತೆ ಅನೇಕ ಚಿತ್ರಗಳು ಸ್ಪೂರ್ತಿ : ಒಳ್ಳೆ ಹುಡುಗ ಪ್ರಥಮ್

ಬೆಂಗಳೂರು.ಮೇ,15: ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ 25 ನೇ ಸಿನಿಮಾ ‘ಮಹರ್ಷಿ’ ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಿದೆ. ಚಿತ್ರದಲ್ಲಿ ನಾಯಕ ಓರ್ವ ಕಾರ್ಪೋರೆಟ್ ಕಂಪನಿಯ ಸಿ.ಇ.ಒ ಆಗಿದ್ದು, ನಂತರದಲ್ಲಿ ರೈತನಾಗಿ ಬದಲಾಗುತ್ತಾನೆ.

ಇದೀಗ ಈ ಚಿತ್ರದ ಕುರಿತಂತೆ ನಟ, ನಿರ್ದೇಶಕ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹೀಗೆ ಹೇಳಿದ್ದಾರೆ, ‘ಬಂಗಾರದ ಮನುಷ್ಯ, ಮಾತಾಡ್ ಮಾತಾಡು ಮಲ್ಲಿಗೆ, ಕಾಮನಬಿಲ್ಲು ಚಿತ್ರಗಳ ಸ್ಪೂರ್ತಿ, ದೃಶ್ಯ ಹೋಲಿಕೆ,ಅಥವಾ ರಿಮೇಕ್ ಆದ ‘ಮಹರ್ಷಿ’ ಸಿನಿಮಾ ನೋಡಿದ್ಮೇಲೆ ಅನ್ಸಿದ್ದು,ತುಂಬಾ ಒಳ್ಳೊಳ್ಳೆ ಕನ್ನಡ ಸಿನಿಮಾಗಳನ್ನು ನಾವ್ ನೋಡುವುದು ಕಡಿಮೆ. ಬೇರೆ ಭಾಷಿಗರು ನೋಡಿ, ಸ್ಪೂರ್ತಿ ಪಡೆದು ಅವ್ರಿಗೆ ಬೇಕಾದಂತೆ ಮಾಡಿ ಸಿನಿಮಾ ಗೆಲ್ತಾರೆ.! ಒಳ್ಳೇದೆಲ್ಲ ನಮ್ಮಲೇ ಇದೆ…ಗುರುತಿಸುವ ಮನಸ್ಸುಗಳು ಬೇಕಷ್ಟೇ!!! ಮಯೂರ ಬಾಹುಬಲಿ ಆಗಿದ್ದಕ್ಕಿಂತ ಉದಾಹರಣೆ ಬೇಕಿಲ್ಲ! ಕನ್ನಡ ಚಿತ್ರಗಳಿಗೆ ನಿಮ್ಮ ಸಹಕಾರವಿರಲಿ’

ಹೌದು,ಟಾಲಿವುಡ್ ನ ‘ಮಹರ್ಷಿ’ ಚಿತ್ರವು ವಾಸ್ತವತೆಯ ಪ್ರತಿಬಿಂಬದಂತಿದ್ದು, ಪ್ರೇಕ್ಷರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಅದರಲ್ಲೂ ರೈತರ ಹಿತಾಸಕ್ತಿ ಕಾಪಾಡುವಂತಹ ಒನ್ ಲೈನ್ ಸ್ಟೋರಿ ಚಿತ್ರಕ್ಕೆ ಗಟ್ಟಿತನ ನೀಡಿದ್ದು,ಎಲ್ಲೆಡೆ ಬದಲಾವಣೆಗೆ ಮುನ್ನುಡಿ ಬರೆಯುತ್ತಿದೆ.ಈ ಚಿತ್ರವೀಗ ಸಾಮಾಜಿಕ ಜಾಗೃತಿ ಮೂಡಿಸುತ್ತಿದೆ.

ಈ ಹಿಂದೆ ಡಾ ರಾಜ್ ಕುಮಾರ್ ನಟನೆಯ ‘ಬಂಗಾರದ ಮನುಷ್ಯ’ ಸಿನಿಮಾ ಕೂಡ ಇದೇ ರೀತಿಯ ಬದಲಾವಣೆ ಮೂಡಿಸಿತ್ತು. ಸಿನಿಮಾದಲ್ಲಿ ನಾಯಕ ಎಲ್ಲವನ್ನು ಬಿಟ್ಟು ಬೇಸಾಯ ಮಾಡುತ್ತಾನೆ. ಅದೇ ರೀತಿ ಅಂದು ದೊಡ್ಡ ದೊಡ್ಡ ಕೆಲಸದಲ್ಲಿ ಇದ್ದ ವ್ಯಕ್ತಿಗಳು ಅದನ್ನು ಬಿಟ್ಟು ಹಳ್ಳಿಗೆ ಬಂದು ವ್ಯವಸಾಯ ಮಾಡಿದ್ದರು. ‘ಬಂಗಾರದ ಮನುಷ್ಯ’ ಒಂದು ದೊಡ್ಡ ಬದಲಾವಣೆಗೆ ಸಾಕ್ಷಿಯಾಗಿತ್ತು.

‘ಸಲಗ’ ಮೂಲಕ ನಿರ್ದೇಶಕರಾಗುತ್ತಿರುವ ದುನಿಯಾ ವಿಜಯ್ ರಿಗೆ ಕಿಚ್ಚ ಸುದೀಪ್ ಸಲಹೆ

#telugu, #maharshi, #movie, #balkaninews #filmnews, #kannadasuddigalu, #bangaradamanushya, #ollehudgapratham

Tags