ಸುದ್ದಿಗಳು

ತೆಲುಗು ಚಿತ್ರಗಳಿಗೆ ಇಂಗ್ಲೀಷ್ ಟೈಟಲ್ ಇಡೋದು ಯಾಕೆ ಗೊತ್ತೆ…?

ಹೈದ್ರಾಬಾದ್, ಫೆ.11:

ಟಾಲಿವುಡ್ ನಟರು ಹಾಗೂ ಚಿತ್ರ ನಿರ್ಮಾಪಕರು ತಮ್ಮ ಸ್ಟೈಲೀಶ್ ಹಾಗೂ ಪವರ್ ಫುಲ್ ಟೈಟಲ್ ನಿಂದಲೇ ಹೆಚ್ಚು ಗಮನ ಸೆಳೆಯುತ್ತಾರೆ. ಇದೇ ಕಾರಣಕ್ಕೆ ಚಿತ್ರ ನಿರ್ಮಾಪಕರು ಸ್ಟೈಲೀಶ್ ಹಾಗೂ ಪವರ್ ಫುಲ್ ಟೈಟಲ್ ಗಳೊಂದಿಗೆ ಮುಂದೆ ಬರುತ್ತಾರೆ. ಉದಾಹರಣೆಗೆ, ‘ಎಂ ಸಿಎಂ’, ‘ಎಂ ಎಲ್ ಎ’, ‘ಕೆಜಿಎಫ್’. ‘ಆರ್ ಎಕ್ಸ್ 100’, ‘ಎಫ್ 2′, ’24 ಕಿಸ್ಸಸ್’, ‘ಎಬಿಸಿಡಿ’ ಮತ್ತು ‘ಕೆಎಸ್ 100’ ಚಿತ್ರಗಳ ಟೈಟಲ್ ಗಳು ಸಿಕ್ಕಾಪಟ್ಟ ಗಮನ ಸೆಳೆದವು. ನಿರ್ದೇಶಕ ಅನಿಲ್ ರವಿಪುಡಿ ವೆಂಕಟೇಶ್ ಹಾಗೂ ವರುಣ್ ತೇಜಾ ನಟನೆಯ ‘ಎಫ್ 2’ ಚಿತ್ರದಿಂದಾಗಿ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸಂಕ್ರಾಂತಿ ಸಂದರ್ಭದಲ್ಲಿ ಬಿಡುಗಡೆಯಾದ ಚಿತ್ರದ ಬಗ್ಗೆ ಪ್ರೇಕ್ಷಕ ಖುಷಿಯಾಗಿದ್ದು, ಚಿತ್ರ ವಿದೇಶದಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.  ಚಿತ್ರದ ಟೈಟಲ್ ಬಗ್ಗೆ ಅನಿಲ್ ರವಿಪುಡಿ ಹೇಳುವುದು ಹೀಗೆ….

ಚಿತ್ರದ ಟೈಟಲ್ ಟ್ರೇಂಡ್ ಬಗ್ಗೆ ನಿರ್ದೇಶಕರ ಮಾತು

ಆರಂಭದಲ್ಲಿ ನಾನು ಚಿತ್ರಕ್ಕೆ ‘ಎಫ್ 2’ ಎಂದು ಹೆಸರಿಟ್ಟಾಗ ಜನರಿಗೆ ಅದರ ಅರ್ಥವೇ ತಿಳಿಯಲಿಲ್ಲ. ಹೀಗಾಗಿ ನಾವು ಟೈಟಲ್ ಅನ್ನು ಕ್ಲಿಯರ್ ಮಾಡಿದೆವು. ಫನ್ ಆಂಡ್ ಪ್ರಸ್ಟ್ರೇಷನ್ ಎಂದು ಹೆಸರಿಟ್ಟ ಮೇಲೆ ಜನರಿಗೆ ಟೈಟಲ್ ಅರ್ಥವಾದರೂ, ಸಿನಿಮಾ ನೋಡಿದ ಬಳಿಕ ಅವರಿಗೆ ಚಿತ್ರದ ಟೈಟಲ್ ಬಗ್ಗೆ ನಿಜವಾದ ಅರ್ಥ ಹಾಗೂ ಅದರೊಳಗಿನ ಮರ್ಮ ತಿಳಿಯಿತು.  ನೀವು ಸಿನಿಮಾಕ್ಕೆ ಕಾವ್ಯತ್ಮಕವಾದ ಹೆಸರಿಟ್ಟರೆ ಉದಾಹರಣೆಗೆ

‘ಸೀತಮ್ಮ ವಕಿಟ್ಲೋ ಸಿರಿಮಲ್ಲೆ ಚೆಟ್ಟು’  ಎಂಬ ಹೆಸರು ಸಹಜವಾಗಿಯೇ ಪ್ರೇಕ್ಷಕರನ್ನು ಸೆಳೆಯುತ್ತದೆ. ಆದರೆ ನಾನು ‘ಎಫ್ 2’ ಎಂಬ ಹೆಸರನ್ನು ಆಯ್ಕೆ ಮಾಡಿದ್ದು, ಜನ ಕೊಂಚ ಟೈಟಲ್ ಬಗ್ಗೆ ಯೋಚಿಸಲಿ ಎಂಬುದು ನನ್ನ ಉದ್ದೇಶವಾಗಿತ್ತು ಎಂದಿದ್ದಾರೆ ರವಿ. ಅಂದಹಾಗೆ ರವಿ ಈ ಹಿಂದೆ ‘ಪಟಾಸ್’, ‘ಸುಪ್ರೀಂ’ ಮತ್ತು ‘ರಾಜಾ ದಿ ಗ್ರೇಟ್’ ಚಿತ್ರವನ್ನು ಮಾಡಿದ್ದರು.‘ಆರ್ ಎಕ್ಸ್ 100’ ಚಿತ್ರದ ಮೂಲಕ ಗಮನ  ಸೆಳೆದ ಅಜಯ್ ಭೂಪತಿ ಹೇಳುವಂತೆ. ಟೈಟಲ್ ಗೆ ಸರ್ಕಾರ ಡಿಸ್ಕೌಂಟ್ ನೀಡಿದರೆ ಹಲವು ಮಂದಿ ತೆಲುಗು ಟೈಟಲ್ ಗೆ ಅಂಟಿಕೊಳ್ಳುತ್ತಾರೆ. ಇತರ ಸಿನಿಮಾ ರಂಗ ಕೂಡ ಇದೀಗ ನಮ್ಮ ಚಿತ್ರರಂಗವನ್ನು ನೋಡಿ,ತಮ್ಮದೇ ಆದ ಟೈಟಲ್ ಅನ್ನು ಆಯ್ಕೆ ಮಾಡಲು ಮುಂದಾಗುತ್ತಿರುವುದು ಸಂತೋಷದ ವಿಚಾರ ಎಂದಿದ್ದಾರೆ ಅವರು.

ಅಜಯ್ ತಮ್ಮ ಮುಂದಿನ ಚಿತ್ರಕ್ಕೆ ಮಹಾ ಸಮುದ್ರಂ ಎಂದು ಹೆಸರಿಟ್ಟಿದ್ದು, ನನ್ನ ಚಿತ್ರಕತೆಗೆ ಟೈಟಲ್ ಪಕ್ಕಾ ಸೂಕ್ತವಾಗಿದೆ. ಈ ಶೀರ್ಷಿಕೆ ಯುವ ಪ್ರೇಕ್ಷಕರನ್ನು ಸೆಳೆಯುತ್ತದೆ ಎಂಬುದು ನನಗೆ ಪಕ್ಕಾ ಆಗಿದೆ. ಅಲ್ಲದೆ ಈ ಟೈಟಲ್ ಅನ್ನು ಚಿತ್ರ ಬೇರೆ ಭಾಷೆಗೆ ಡಬ್ ಆಗುವಾಗ ಬದಲಾಯಿಸುವ ಅಗತ್ಯವೂ ಇಲ್ಲ ಎಂದವರು ಹೇಳುತ್ತಾರೆ.

ಕ್ಲಾಸಿಕ್ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿರುವ ಶೇಖರ್ ಕೆಮುಲಾ ತಮ್ಮ ಚಿತ್ರಗಳ ಟೈಟಲ್ ಗೆ ಇಂಗ್ಲೀಷ್ ಪದಗಳನ್ನು ಬಳಸುತ್ತಾರೆ. ‘ಹ್ಯಾಪಿ ಡೇಸ್’ ಮತ್ತು ‘ಲೈಫ್ ಇಸ್ ಬ್ಯೂಟಿಫುಲ್’ ಎಂಬ ಹೆಸರುಗಳು ಇದಕ್ಕೆ ಉದಾಹರಣೆಯಾದರೆ. ಪುರಿ ಜಗನ್ನಾಥ್ ಕೂಡ ಟ್ರೇಂಡಿ ಟೈಟಲ್ ಗಳನ್ನಿಡುತ್ತಾರೆ. ಅವರು ತಮ್ಮ ಚಿತ್ರಗಳಿಗೆ ‘ಇಡಿಯೆಟ್’, ‘ಬುಸಿನೆಸ್ ಮ್ಯಾನ್’, ‘ಲೋಫರ್’, ‘ಸೂಪರ್’ ಮತ್ತು ‘ಹಾರ್ಟ್ ಅಟ್ಯಾಕ್’ ಮೊದಲಾದ ಶೀರ್ಷಿಕೆಯಟ್ಟಿದ್ದರು. ಒಟ್ಟಾರೆ ಚಿತ್ರದ ಶೀರ್ಷಿಕೆಗಳಿಗೆ ಕೆಲವರು ಎಲ್ಲಾ ಭಾಷೆಗಳ ಪ್ರೇಕ್ಷಕರಿಗೆ ಅರ್ಥವಾಗುವಂತೆ  ಇಂಗ್ಲೀಷ್ ಪದಗಳನ್ನು ಬಳಸಿದರೆ ಮತ್ತೆ ಕೆಲವರು ತೆಲುಗು ಪದಗಳನ್ನೇ ಬಳಸಿ, ಜನರು ಟೈಟಲ್ ಬಗ್ಗೆ ತಲೆಕೆಡಿಸುವಂತೆ ಮಾಡುತ್ತಾರೆ. ಇದೆಲ್ಲಾ ಪ್ರೇಕ್ಷಕರನ್ನು ಸೆಳೆಯುವ ಒಂದು ತಂತ್ರ ಎನ್ನುವುದು ಕೆಲವು ನಿರ್ದೇಶಕರ ಅಭಿಪ್ರಾಯ.

ಭತ್ತದ ಪೈರಿನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನ..!!!

#telugumovies #balkaninews #tollywood #telugumoviesenglishtitles #f2 #supreme #heartattack #businessman #englishtitlestelugumovies

Tags