ಸುದ್ದಿಗಳು

ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ರಕ್ಷಿತ್ ಶೆಟ್ಟಿ

ಹೇಮಂತ್ ರಾವ್ ನಿರ್ದೇಶನದ ‘ತೆನಾಲಿ’ ಚಿತ್ರದಲ್ಲಿ ಸಿಂಪಲ್ ಸ್ಟಾರ್

ಬೆಂಗಳೂರು, ಸ.14: ನಟಿ ರಶ್ಮಿಕಾ ಮಂದಣ್ಣ ಬ್ರೇಕ್ ಅಪ್ ವಿಚಾರವಾಗಿ ಸುದ್ದಿಯಲ್ಲಿದ್ದ ನಟ ರಕ್ಷಿತ್ ಶೆಟ್ಟಿ ಇದೀಗ ಎಲ್ಲವನ್ನೂ ಮರೆತು ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಹೌದು, ಈ ಹಿಂದೆ ಸೂಪರ್ ಹಿಟ್ ಆಗಿದ್ದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರತಂಡ ಮತ್ತೆ ಒಂದಾಗಿದೆ.

ತೆನಾಲಿಯಾದ ರಕ್ಷಿತ್ ಶೆಟ್ಟಿ

ನಿರ್ದೇಶಕ ಹೇಮಂತ್ ರಾವ್, ನಟ ರಕ್ಷಿತ್ ಶೆಟ್ಟಿ ಹಾಗೂ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್, ಈ ಮೂರು ಜೋಡಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ನಂತರ ‘ತೆನಾಲಿ’ ಮೂಲಕ ಒಂದಾಗುತ್ತಿದೆ.

ಬ್ರಿಟಿಷ್ ಕಾಲದ ಯುವಕ

ಸದ್ಯ ‘ಕವಲು ದಾರಿ’ ಚಿತ್ರವನ್ನು ಮಾಡುತ್ತಿರುವ ನಿರ್ದೇಶಕ ಹೇಮಂತ್ ರಾವ್ ‘ತೆನಾಲಿ’ ಬಗ್ಗೆ ಮಾತನಾಡಿದ್ದಾರೆ. ‘ತೆನಾಲಿ‘ಯಲ್ಲಿ ರಕ್ಷಿತ್ ಹೊಸದೊಂದು ಗೆಟಪ್ ನಲ್ಲಿ ನೋಡಲು ಸಿಗಲ್ಲಿದ್ದಾರೆ.. ಇಷ್ಟು ದಿನ ಗಡ್ಡ ಬಿಟ್ಟು ರಗಡ್ ಆಗಿದ್ದ ರಕ್ಷಿತ್ , ಈಗ ಗಡ್ಡಕ್ಕೆ ಗುಡ್ ಬಾಯ್ ಹೇಳಿ, ಕ್ಲೀನ್ ಶೇವ್ ಜೊತೆಗೆ ಬ್ರಿಟಿಷ್ ಕಾಲದ ಯುವಕನಾಗಿದ್ದಾರೆ.

ಚಿತ್ರ ಯಾವಾಗ..?

ಸದ್ಯ ಹೇಮಂತ್ ರಾವ್ ಅವರು ‘ಕವಲು ದಾರಿ’ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ ರಕ್ಷಿತ್ ಶೆಟ್ಟಿ ಅವರು ‘ಅವನೇ ಶ್ರೀಮನ್ನಾರಾಯಣ’ ಹಾಗೂ ‘777 ಚಾರ್ಲಿ’ ಚಿತ್ರಗಳ ಚಿತ್ರೀಕರಣದಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರೂ ತಮ್ಮ ಕೆಲಸ ಮುಗಿಸಿದ ನಂತರ ಅಂದರೆ ಮುಂದಿನ ವರ್ಷದ ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

Tags

Related Articles