ಸುದ್ದಿಗಳು

ಟೆರರಿಸ್ಟ್ ರಾಗಿಣಿಯ ಮತ್ತೊಂದು ಮುಖ

ಇದೀಗ ಹೊಸ ರೀತಿಯಲ್ಲಿ ಕಾಣಿಸಿಕೊಂಡಿರುವ ‘ದಿ ಟೆರರಿಸ್ಟ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ತುಪ್ಪದ ಬೆಡಗಿ ರಾಗಿಣಿ, ಇದೀಗ ಪಿ.ಸಿ.ಶೇಖರ್ ಅವರ ‘ದಿ ಟೆರರಿಸ್ಟ್’ ಚಿತ್ರದಲ್ಲಿ ರೇಷ್ಮಾ ಎಂಬ ಮುಸ್ಲಿಂ ಹುಡುಗಿಯಾಗಿ ನಟಿಸುತ್ತಿದ್ದಾರೆ.

ಬೆಂಗಳೂರು, ಜು. 31: ಇಷ್ಟು ದಿನ ನಟಿ ರಾಗಿಣಿಯವರನ್ನು ಮಾದಕವಾಗಿ ನೋಡಿದ್ದೀರಿ. ಇದರೊಂದಿಗೆ ಅವರು ‘ಕಿಚ್ಚು’ ಚಿತ್ರದ ಮೂಲಕ ಅವರು ಹೊಸದೊಂದು ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರಂತೆಯೇ ಇದೀಗ ಹೊಸ ರೀತಿಯಲ್ಲಿ ಕಾಣಿಸಿಕೊಂಡಿರುವ ‘ದಿ ಟೆರರಿಸ್ಟ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ನಾಯಕಿ ಪ್ರಧಾನ ಚಿತ್ರ

ಹೌದು, ನಿರ್ದೇಶಕ ಪಿ.ಸಿ ಶೇಖರ್ ಅವರು ತಮ್ಮ ಹೊಸ ಚಿತ್ರಕ್ಕೆ ‘ದಿ ಟೆರರಿಸ್ಟ್’ ಎಂದು ಹೆಸರಿಟ್ಟಿದ್ದಾರೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು ನಟಿ ರಾಗಿಣಿಯವರು ರೇಷ್ಮಾ ಎಂಬ ಮುಸ್ಲಿಂ ನಾಯಕಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಮೊದಲ ನೋಟಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿವೆ. ಇವುಗಳಲ್ಲಿ ರಾಗಿಣಿ ಬುರ್ಖಾ ತೊಟ್ಟು, ತಲೆಗೆ ಸ್ಕಾರ್ಫ್ ಕಟ್ಟಿಕೊಂಡು ಮುಸ್ಲಿಂ ಯುವತಿಯಂತೆಯೇ ಕಾಣಿಸಿಕೊಂಡಿದ್ದಾರೆ.

ಬಯೋತ್ಪಾದನೆಯ ಚಿತ್ರ

ಬೆಂಗಳೂರಿನಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಸರಣಿ ಬಾಂಬ್ ಸ್ಪೋಟಕವಾದಾಗ ಆಗ ಅಲ್ಲಿ ನಡೆಯುವ ನಡೆಯುವ ಘಟನೆಗಳ ಸುತ್ತ ಈ ಚಿತ್ರ ಸಾಗಲಿದೆಯಂತೆ. ಚಿತ್ರದಲ್ಲಿ ರಾಗಿಣಿ ಒಂದೇ ತರಹದಲ್ಲಿ ಕಾಣಿಸಿಕೊಂಡಿದ್ದಾರಂತೆ. ಇನ್ನು ಬೇರೆ ಬೇರೆ ಚಿತ್ರಗಳಲ್ಲಿ ಜಾಸ್ತಿ ಮಾತನಾಡುವ ಪಾತ್ರಗಳಲ್ಲಿಯೇ ಕಾಣಿಸಿಕೊಳ‍್ಳುತ್ತಿರುವ ರಾಗಿಣಿ, ಈ ಚಿತ್ರದಲ್ಲಿ ಜಾಸ್ತಿ ಮಾತಿಲ್ಲದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಮನುಷ್ಯತ್ವದ ಬೆಲೆ ಮತ್ತು ಶಾಂತಿಗಾಗಿ ಏನೆಲ್ಲಾ ಮಾಡಬೇಕಾಗುತ್ತದೆ ಎಂಬುದನ್ನು ಇಲ್ಲಿ ಕಟ್ಟಿ ಕೊಟ್ಟಿದ್ದಾರಂತೆ ನಿರ್ದೇಶಕರು.

ಸಾಕಷ್ಟು ಅಧ್ಯಯನ

ನಿರ್ದೇಶಕ ಪಿ.ಸಿ. ಶೇಖರ್ ಮತ್ತು ನಟಿ ರಾಗಿಣಿ ದ್ವಿವೇದಿ ಅವರುಗಳು ಇದೇ ಮೊದಲ ಬಾರಿಗೆ ಒಟ್ಟಾಗಿ ಮಾಡುತ್ತಿರುವ ‘ದಿ ಟೆರರಿಸ್ಟ್’ ಚಿತ್ರವು ತನ್ನ ಶೀರ್ಷಿಕೆಯ ಕಾರಣದಿಂದಲೇ ಸಾಕಷ್ಟು ಸುದ್ದಿ ಮಾಡುತ್ತಿದೆ. ಸಾಕಷ್ಟು ಅಧ್ಯಯನ ನಡೆಸಿ, ಕಥೆ ಸಿದ್ಧಪಡಿಸಿಕೊಂಡಿದ್ದ ನಿರ್ದೇಶಕ ಪಿ.ಸಿ ಶೇಖರ್ ಅವರು, ಈಗಾಗಲೇ ಚಿತ್ರೀಕರಣ ಮುಗಿಸಿ ಮುಂದಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಾಗಿಣಿ ಅವರ ಲುಕ್ ಹೇಗಿರಲಿದೆ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು. ಅದಕ್ಕೀಗ ತೆರೆ ಬಿದ್ದಿದೆ. ‘ರೆಬೆಲ್ ಸ್ಟಾರ್’ ಅಂಬರೀಷ್ ಅವರು ‘ದಿ ಟೆರರಿಸ್ಟ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

ಇನ್ನೆರಡು ತಿಂಗಳಲ್ಲಿ ಚಿತ್ರ ಬಿಡುಗಡೆ

ಭಯೋತ್ಪಾದನೆಯಂಥ ಚಟುವಟಿಕೆಗಳು ಅಬ್ಬರ ಇಲ್ಲದೆ ಭೂಗತವಾಗಿ ನಡೆಯುತ್ತವೆ. ಅಷ್ಟೇ ಸೂಕ್ಷ್ಮವಾಗಿ ಈ ಚಿತ್ರದ ಕಥೆ ಸಾಗಲಿದೆ. ಈವರೆಗೂ ಕಾಣಿಸಿಕೊಳ್ಳದ ರೀತಿಯಲ್ಲಿ ರಾಗಿಣಿ ಪಾತ್ರ ಮೂಡಿ ಬಂದಿದೆ. ಹಾಗೂ ಚಿತ್ರದ ಚಿತ್ರೀಕರಣವು ಬೆಂಗಳೂರಿನಲ್ಲೇ ಸಂಪೂರ್ಣವಾಗಿ ನಡೆದಿದೆ. ‘ಒಂದೇ ದಿನದಲ್ಲಿ ಅಂದರೆ, ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಯುವ ಕಥೆಯಾದ್ದರಿಂದ ಇಡೀ ಚಿತ್ರದಲ್ಲಿ ರಾಗಿಣಿ ಒಂದೇ ಕಾಸ್ಟೂಮ್ ನಲ್ಲಿಕಾಣಿಸಿಕೊಳ್ಳಲಿದ್ದಾರೆ. ಟೆರರಿಸಂ ಎಂಬುದು ಪ್ರತಿ ದಿನ ನಮಗೆ ಅರಿವಿಗೆ ಬರುತ್ತಿರುವ ವಿಷಯ. ಅದನ್ನು ಸೆಟ್ ಹಾಕಿ ಚಿತ್ರಿಸುವುದಕ್ಕಿಂತ ನೈಜವಾಗಿ ತೋರಿಸಬೇಕೆಂಬುದು ಎಂಬುದು ನಮ್ಮ ಉದ್ದೇಶ. ಚಿತ್ರವು ತುಂಬಾ ಚೆನ್ನಾಗಿ ಮೂಡಿ ಬಂದಿದೆ’ ಎನ್ನುತ್ತಾರೆ ನಿರ್ದೇಶಕರು.

 

@ sunil Javali

Tags

Related Articles

Leave a Reply

Your email address will not be published. Required fields are marked *