ಸುದ್ದಿಗಳು

ಮೊಘಲ್ ಸಾಮ್ರಾಜ್ಯದಲ್ಲಿ ಬಿಟೌನ್ ಅಗ್ರಜರು!

ಮುಂಬೈ, ಆ.11: ಬಿಟೌನ್ ನಲ್ಲೊಂದು ಮಲ್ಟಿ ಸ್ಟಾರರ್ ಸಿನೆಮಾವೊಂದು ಸೆಟ್ಟೇರುತ್ತಿದೆ. ಹೌದು, ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ನೂತನ ಐತಿಹಾಸಿಕ ಕಥೆಯೊಂದಿಗೆ ಚಿತ್ರ ರಚಿಸಲು ತಯಾರಿ ನಡೆಸುತ್ತಿದ್ದಾರೆ. ‘ತಖ್ತ್’ ಎನ್ನುವ ಶೀರ್ಷಿಕೆ ಅಡಿಯಲ್ಲಿ ತೆರೆ ಕಾಣಲಿರುವ ಈ ಚಿತ್ರದಲ್ಲಿ ಬಾಲಿವುಡ್ ಯಾಂಗ್ರಿ ಯಂಗ್ ಮ್ಯಾನ್ ರಣವೀರ್ ಸಿಂಗ್, ಆಲಿಯಾ ಭಟ್ ಮತ್ತು ಮೋಹಕ ನಟಿ ಕರೀನಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿಮೂಲಗಳು ತಿಳಿಸಿವೆ.

ಎರಡು ವರ್ಷಗಳ ನಂತರ ಕರಣ್

‘ಯೇ ದಿಲ್ ಹೈ ಮುಷ್ಕಿಲ್’ ಸಿನೆಮಾ ಬಿಡುಗಡೆಯಾಗಿ ಎರಡು ವರ್ಷಗಳು ಕಳೆದಿದ್ದರೂ, ಕರಣ್ ಮಾತ್ರ ಹೊಸ ಸಿನೆಮಾದ ಬಗ್ಗೆ ಬಾಯಿಬಿಡುತ್ತಿರಲಿಲ್ಲ. ಜೊತೆಗೆ ರಣವೀರ್ ಸಿಂಗ್ ತಮ್ಮ ಸಿನಿಮಾದ ನಾಯಕನಾಗಬೇಕು ಎಂದು ತೀರ್ಮಾನಿಸಿದ್ದ ಕರಣ್ ಗೆ, ರಣವೀರ್ ಕೈಗೆ ಸಿಗುತ್ತಿರಲಿಲ್ಲ. ಇದೀಗ ಕರಣ್ ನೂತನ ಚಿತ್ರದ ಕುರಿತು ಮಾತನಾಡುತ್ತಿದ್ದಾರೆ.

ತಾರಾಬಳಗ

ಕರಣ್ ಅವರ ನೂತನ ಚಿತ್ರ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ಸ್ ಅಡಿಯಲ್ಲಿ ಮೂಡಿಬರಲಿದ್ದು, ಮುಖ್ಯಭೂಮಿಕೆಯಲ್ಲಿ ರಣವೀರ್ ಸಿಂಗ್, ಆಲಿಯಾ ಭಟ್, ಕರೀನಾ ಕಪೂರ್, ಭೂಮಿ ಫಡ್ನೇಕರ್, ಅನಿಲ್ ಕಪೂರ್, ಜಾಹ್ನವಿ ಕಪೂರ್ ನಟಿಸುವುದು ಖಚಿತವಾಗಿದೆ ಎಂದು ಕರಣ್ ತಿಳಿಸಿದ್ದಾರೆ.

ವೈಭವೋಪೇತ ಸಿನೆಮಾ

ಸಂಜಯ್ ಲೀಲಾ ಬನ್ಸಾಲಿ ಅವರು ಐತಿಹಾಸಿಕ ಕಥೆಗಳನ್ನು ವೈಭವೋಪೇತ ಸಿನೆಮಾಗಳಾಗಿ ಪ್ರೇಕ್ಷಕರಿಗೆ ಉಣಬಡಿಸಿದ ಬಳಿಕ, ಕರಣ್ ಜೋಹರ್ ಈಗ ತಮ್ಮ ನಿರ್ದೇಶನದಲ್ಲಿ ಮೊಘಲ್ ಸಾಮ್ರಾಜ್ಯದಲ್ಲಿ ಸಹೋದರರಿಬ್ಬರ ನಡುವೆ ನಡೆದ ಕಥೆಯನ್ನು ವೈಭವೀಕರಿಸಿ ತೋರಿಸಲು ಭರ್ಜರಿ ಸಿದ್ದತೆ ನಡೆಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

Tags