ಸುದ್ದಿಗಳು

ಬೆತ್ತಲೆ ಪ್ರದರ್ಶನಕ್ಕೆ ಕಣ್ಣೀರಿಟ್ಟ ಥಾಂಡೀ ನ್ಯೂಟನ್!

45 ವರ್ಷ ವಯಸ್ಸಿನ  ಹಾಲಿವುಡ್ ನಟಿ ಥಾಂಡೀ ನ್ಯೂಟನ್ ಅವರು HBO ನಲ್ಲಿ ಪ್ರಸಾರವಾಗುವ ಸ್ಕೈ-ಫೈ ಸೀರಿಸ್ ‘ವೆಸ್ಟ್ ವರ್ಲ್ಡ್ ‘ಚಿತ್ರದಲ್ಲಿ ಅವಳ ನಗ್ನ ದೃಶ್ಯಗಳನ್ನು ಚಿತ್ರೀಕರಿಸಿದ ನಂತರ  ಅವರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಹಿರಂಗಪಡಿಸಿದ್ದಾರೆ.ಸುಂದರವಾದ ಭಾವನಾತ್ಮಕ ಕಥೆ ಹೊಂದಿರೋ ವೆಸ್ಟ್ ವರ್ಲ್ಡ್ ಚಿತ್ರದಲ್ಲಿಹೆಚ್ಚಿನ ಭಾಗ  ವೈಜ್ಞಾನಿಕ ಸರಣಿಯಲ್ಲಿ ಮೇವೆ ಪಾತ್ರವನ್ನು ಥಾಂಡೀ ನ್ಯೂಟನ್ ನಿರ್ವಹಿಸುತ್ತಾಳೆ ಎನ್ನುವುದು ವಿಶೇಷ.

ಈ ಕಥೆಯ ಮೊದಲ ಭಾಗದಲ್ಲಿ ಥಾಂಡೀ ನ್ಯೂಟನ್, ವೈಲ್ಡ್ ವೆಸ್ಟ್ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ವೇಶ್ಯಾಗೃಹವನ್ನು ನಡೆಸುತ್ತಿರುತ್ತಾಳೆ ಹಾಗು ಇಲ್ಲಿಗೆ ಬರುವ ಶ್ರೀಮಂತ ವರ್ಗದವರಿಗೆ  ಆತಿಥ್ಯವಹಿಸುತ್ತಿರುವ ಸಂದರ್ಭದಲ್ಲಿ ಜಾಗೃತಿಗೊಳ್ಳುವ ಮುನ್ನ ಥಾಂಡೀ ನ್ಯೂಟನ್ ತನ್ನ ನಗ್ನತೆಯಲ್ಲಿ ದೇಹ ಸೌಂದರ್ಯವನ್ನು ನಿರ್ದೇಶಕರ ಸೂಚನೆಯಂತೆ ಪ್ರದರ್ಶಿಸಿರುವುದು ಚಿತ್ರ ಬಿಡುಗಡೆಯ ನಂತರ ಅವಳ ಸಿನಿಮಾ ಕೆರಿಯರ್ ಗೆ ಪೆಟ್ಟು ನೀಡಿದೆ ಎಂದು ತನ್ನ ಅಳಲು ತೋಡಿಕೊಂಡಿದ್ದಾಳೆ.

ಈ ಮುಂಚೆ ಹಲವಾರು ಸಿನಿಮಾಗಳಲ್ಲಿ ನಗ್ನ ಅಥವಾ ಅರೆನಗ್ನಳಾಗಿ ನಟಿಸಿದ್ದೆ ಆದರೆ ಕಥೆಯ ಮೊದಲಾರ್ದ ಪೂರ್ತಿ ಈ ರೀತಿ ನಟಿಸಿರುವುದು ನನಗೆ ಮುಜುಗರ ಉಂಟು ಮಾಡಿದೆ ಎಂದು ಥಾಂಡೀ ನ್ಯೂಟನ್ ಹೇಳಿಕೊಳ್ಳುವುದರ ಮೂಲಕ ಸಿನಿಮಾದ ಬಗ್ಗೆ ಅಂತಿಮವಾಗಿ ಒಳ್ಳೆಯ ಮಾತನ್ನಾಡಿದ್ದಾರೆ. ಈ ಸಿನಿಮಾದಲ್ಲಿ ವೈಜ್ಞಾನಿಕ ಸರಣಿಯ ಆಧುನಿಕ ಜಗತ್ತಿನ ಚಲನ ವಲನಗಳನ್ನು ಅದ್ಬುತವಾಗಿ ತೋರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

Tags

One Comment