ಸುದ್ದಿಗಳು

‘ತಾರಕಾಸುರ’ ನ ಅಬ್ಬರಕ್ಕೆ ಸಿದ್ದವಾಯ್ತು ಸ್ಯಾಂಡಲ್ ವುಡ್

ವೈಭವ್ ಮತ್ತು ಮಾನ್ವಿತಾ ಅಭಿನಯದ ತಾರಕಾಸುರ

ಬೆಂಗಳೂರು, ನ.19: ಸ್ಯಾಂಡಲ್‌ವುಡ್‌ ಅಂಗಳದಲ್ಲಿ ವರ್ಷದ ದೊಡ್ಡ ನಿರೀಕ್ಷೆ ಹುಟ್ಟಿಸಿರೋ ಹೊಸ ಪ್ರತಿಭೆ ವೈಭವ್ ಅಭಿನಯದ ‘ತಾರಕಾಸುರ’ ಸಿನಿಮಾ ಇದೇ ವಾರ ತೆರೆಗೆ ಬರ್ತಿದೆ.   ‘ರಥಾವರ’ ಸಿನಿಮಾ  ಖ್ಯಾತಿಯ ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದಲ್ಲಿ ಮೂಡಿ ಬಂದಿರೋ ‘ತಾರಕಾಸು’ರ ಸಿನಿಮಾ ಸಾಕಷ್ಟು ವಿಚಾರಗಳಿಂದ ಸ್ಪೆಷಲ್ ಎನ್ನಿಸಿಕೊಂಡಿದೆ. ಇದೇ 23ನೇ ತಾರೀಖಿನಂದು ಸಿನಿಮಾ ಬಿಡುಗಡೆ

ಸಿನಿಮಾ ಪ್ರದರ್ಶಕ  ಎಂ. ನರಸಿಂಹಲು ಪುತ್ರ ವೈಭವ್ ನಾಯಕರಾಗಿ ನಟಿಸಿರುವ ಚೊಚ್ಚಲ ಸಿನಿಮಾ ‘ತಾರಕಾಸುರ’.  ಈ ಚಿತ್ರದಲ್ಲಿ ಮಾನ್ವಿತಾ ಹರೀಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದು . ಹಾಲಿವುಡ್‍ ನ ನಟ, ‘ಸಿಂಗಂ’ ಖ್ಯಾತಿಯ ಡ್ಯಾನಿ ಸಫಾನಿ ವಿಶೇಷ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಸಾಧುಕೋಕಿಲ, ಜೈಜಗದೀಶ್, ಎಂ.ಕೆ.ಮಠ, ಕರಿಸುಬ್ಬು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಕುಮಾರ್ ಗೌಡ ಅವರ ಕ್ಯಾಮೆರಾವರ್ಕ್ , ಕೆ.ಎಂ.ಪ್ರಕಾಶ್ ಸಂಕಲನವಿದೆ. ಓಂ ಬಾಲಾಜಿ ಎಂಟರ್ ಪ್ರೈಸಸ್ ಬ್ಯಾನರ್​ ನಡಿಯಲ್ಲಿ. ಎನ್.ನರಸಿಂಹಲು ನಿರ್ಮಿಸಿದ್ದಾರೆ. ಧರ್ಮವಿಶ್‌ ಸಂಗೀತ ಸಂಯೋಜಿಸಿರೋ ‘ತಾರಕಾಸುರ’ ಚಿತ್ರದ ಹಾಡುಗಳು ಈಗಾಗಲೇ ಹಿಟ್ ಲಿಸ್ಟ್ ಸೇರಿದ್ದು ಎಲ್ಲಾ ಕಥೆಗೆ ತಕ್ಕಂತೆ, ಸೊಗಡು ತುಂಬಿರೋ ಹಾಡುಗಳನ್ನು ಮಾಡಿದ್ದಾರೆ ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ. ಟೈಟಲ್ ಮತ್ತು ಟೀಸರ್ ನಿಂದ  ಬಹಳಷ್ಟು ಕುತೂಹಲ ಕೆರಳಿಸಿರೋ ‘ತಾರಕಾಸುರ’ ಸಿನಿಮಾ ಇದೇ ವಾರ ಅಂದ್ರೆ 23ನೇ ತಾರೀಖು ಪ್ರೇಕ್ಷಕರೆದುರಿಗೆ ಬರಲಿದೆ.

Tags

Related Articles