ಸುದ್ದಿಗಳು

‘ತಾರಕಾಸುರ’ನ ಬಗ್ಗೆ ಸುಕ್ಕಾ ಸೂರಿಯ ಮಾತುಗಳಿವು..!!!

ಇದೇ ತಿಂಗಳ 25 ರಂದು ಚಿತ್ರದ ಟ್ರೈಲರ್ ಬಿಡುಗಡೆ

ಬೆಂಗಳೂರು, ಅ.23: ಚಂದನವನದಲ್ಲಿ ಕುತೂಹಲ ಮೂಡಿಸುತ್ತಿರುವ ಚಿತ್ರಗಳಲ್ಲಿ ‘ತಾರಕಾಸುರ’ವೂ ಒಂದು. ಈ ಚಿತ್ರದ ಪೋಸ್ಟರ್ ಗಳು ವಿಭಿನ್ನವಾಗಿದ್ದು ಅನೇಕರು ಮೆಚ್ಚಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ಈಗ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತಿದೆ.

ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ

ಈ ಹಿಂದೆ ‘ರಥಾವರ’ ಎಂಬ ಬಿಗ್ ಹಿಟ್ ಚಿತ್ರವನ್ನು ಕೊಟ್ಟಿದ್ದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈ ಬಾರಿ ‘ತಾರಕಾಸುರ’ನ ಹಿಂದಿದ್ದಾರೆ. ಈ ಚಿತ್ರದ ಟ್ರೈಲರ್ ಅ. 25 ರಂದು ನಗರದ ಒರಾಯನ್ ಮಾಲ್ ನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ, ಸರಿಯಾಗಿ ಮಧ್ಯಾಹ್ನ 3:45 ಕ್ಕೆ ಬಿಡುಗಡೆಯಾಗಲಿದೆ.

ದುನಿಯಾ ಸೂರಿಯಿಂದ ಮೆಚ್ಚುಗೆಯ ಮಾತುಗಳು

ಇನ್ನು ಈ ಚಿತ್ರದ ಕುರಿತಂತೆ ನಿರ್ದೇಶಕ ‘ದುನಿಯಾ’ ಸೂರಿ ಮಾತನಾಡಿದ್ದಾರೆ, “ಒಬ್ಬೊಬ್ಬರದು ಒಂದೊಂದು ಸ್ಟೈಲ್ ಇದೆ. ನನಗೆ ನಿಮ್ಮ ಸ್ಟೈಲ್ ಇಷ್ಟವಾಗುತ್ತದೆ” ಎಂದು ನಿರ್ದೇಶಕ ಚಂದ್ರಶೇಖರ್ ರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.

“ಮೊದಲ ಚಿತ್ರದಲ್ಲಿ ಯಾರೂ ಈ ರೀತಿಯ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಅಷ್ಟೊಂದು ತೂಕ ಇಳಿಸಿಕೊಳ್ಳುವುದಾಲಿ, ಅದೇ ರೀತಿ ಕೂದಲು ಬಿಟ್ಟುಕೊಳ್ಳುವುದಾಗಲಿ ಕಷ್ಟ. ಆದರೆ ಇದನ್ನು ನೀವು ಮಾಡಿದ್ದೀರಿ. ನಿಮ್ಮ ಚಿತ್ರಕ್ಕೆ ಶುಭವಾಗಲಿ’’ ಎಂದು ಸೂರಿಯವರು ನಟ ವೈಭವ್ ಅವರಿಗೆ ಶುಭಾಶಯ ಕೋರಿದ್ದಾರೆ.

ಸದ್ಯದಲ್ಲಿಯೇ ತೆರೆಗೆ

ಓಂ ಬಾಲಾಜಿ ಎಂಟರ್ ಪ್ರೈಸೆಸ್ ಲಾಂಛನದಲ್ಲಿ ಎಂ. ನರಸಿಂಹಲು ‘ತಾರಕಾಸುರ’ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರವು ಸದ್ಯ ಅಳಿವಿನಂಚಿನಲ್ಲಿರುವ ಜಾನಪದ ಕಲೆಯೊಂದರ ಸುತ್ತ ಸುತ್ತಲಿದೆ.

ಇನ್ನು ಈ ಚಿತ್ರದಲ್ಲಿ ವೈಭವ್, ಮಾನ್ವಿತಾರೊಂದಿಗೆ ಸಾಧುಕೋಕಿಲ, ಎಂ. ಕೆ ಮಠ, ಕರಿಸುಬ್ಬು, ಹಾಲಿವುಡ್ ನ ಡ್ಯಾನಿ ಸಫಾನಿ ಸೇರಿದಂತೆ ಅನೇಕರ ತಾರಾಬಳಗವಿದೆ. ಚಿತ್ರಕ್ಕೆ ಕುಮಾರ್ ಗೌಡ ಕ್ಯಾಮೆರಾ, ಕೆ.ಎಂ.ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ ಮತ್ತು ಜಾಲಿಬಾಸ್ಟಿನ್ ಸಾಹಸ ನಿರ್ದೇಶನವಿದ್ದು, ಧರ್ಮ ವಿಶ್ ಸಂಗೀತ ನೀಡಿದ್ದಾರೆ.

(ಕೃಪೆ ಟ್ರೋಲ್ ಕನ್ನಡ ಮೂವೀಸ್: ದುನಿಯಾ ಸೂರಿಯವರೊಂದಿಗಿನ ಮಾತುಕಥೆಯ ವಿಡಿಯೋ)

Tags

Related Articles