ಸುದ್ದಿಗಳು

ನಟ ‘ಚೇತನ್’ ನಿಂದ ‘ಕಿಚ್ಚ’ನಿಗೆ ಅಡ್ವೈಸ್

ಟ್ವಿಟರ್ ನಲ್ಲಿ ಸುದೀಪ್ ಅಭಿಮಾನಿಗಳು ಗರಂ

ಕಿಚ್ಚ ಸುದೀಪ್‍ ವಿರುದ್ಧ ನಟ ಚೇತನ್‍ ಅಸಮಾಧಾನ ಹೊರಹಾಕಿದ್ದಾರೆ. ಸುದೀಪ್‍ಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ ಎಂದು ಚೇತನ್‍ ಟ್ಚಿಟ್ ಮೂಲಕ ಸಲಹೆ ನೀಡಿದ್ದಾರೆ. ಅಷ್ಟಕ್ಕೂ ವಿಷಯ ಏನಪ್ಪ ಅಂದರೆ, ಭಾನುವಾರ ‘ಜನತಾ ಕರ್ಫ್ಯೂ’ ಇದ್ದ ವೇಳೆ ಕಿಚ್ಚ ಸುದೀಪ್‍ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಜನತಾ ಕರ್ಫ್ಯೂ’ ನಲ್ಲಿ ಸಂಜೆ 5 ಗಂಟೆಗೆ ಎಲ್ಲರು ಭಾಗವಹಿಸಿ ಚಪ್ಪಾಳೆ ತಟ್ಟುವಂತೆ ವಿಡಿಯೋದಲ್ಲಿ ಹುಡುಗಿಯೊಬ್ಬಳು ಮನವಿ ಮಾಡಿಕೊಂಡಿದ್ದಳು.

ಆ ವಿಡಿಯೋವನ್ನು ಸುದೀಪ್‍ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. “ಸಂಜೆ 5 ಗಂಟೆಗೆ ಎಲ್ಲರೂ ಚಪ್ಪಾಳೆ ತಟ್ಟಲು ದಯವಿಟ್ಟು ಭಾಗವಹಿಸಿ. ಹೀಗೆ ಮಾಡಿದರೆ ನಾವು ಯಾವುದನ್ನಾದರೂ ಕಳೆದುಕೊಳ್ಳುತ್ತೇವೆಯೇ? ಇಲ್ಲವಲ್ಲ. ನಾವು ಗಳಿಸುತ್ತೇವೆಯೇ? ಬಹುಶಃ ಗಳಿಸಬಹುದು. ಆದರೆ ಕನಿಷ್ಠ ಪ್ರಯತ್ನಿಸೋಣ. ಎಲ್ಲವನ್ನೂ ಆಮೇಲೆ ಯೋಚಿಸೋಣ. ಇದು ನಮ್ಮ ಜೀವನಕ್ಕಾಗಿ” ಎಂದು ಸುದೀಪ್‍ ಟ್ವಿಟ್‍ ಮಾಡಿದ್ದರು

ಇದಕ್ಕೆ ಪ್ರತಿಕ್ರಿತಿಯೆ ನೀಡಿರುವ ನಟ ಚೇತನ್, ಸುದೀಪ್ ಸರ್. ಸಿನಿಮಾ ಕ್ಷೇತ್ರದಲ್ಲಿ ನಿಮ್ಮ ಕೆಲಸವನ್ನು ನಾನು ಗೌರವಿಸುತ್ತೇನೆ. ವೈದ್ಯ ದಂಪತಿಯ ಮಗನಾಗಿ ನಮ್ಮ ವೈದ್ಯಕೀಯ ಸಿಬ್ಬಂದಿಯನ್ನು ಪ್ರಶಂಸಿಸಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಮೂಢನಂಬಿಕೆ ಮತ್ತು ತಪ್ಪು ಮಾಹಿತಿಯ ಹಾದಿಯಲ್ಲಿ ನಮ್ಮನ್ನು ಕೊಂಡೊಯ್ಯುವ ಇಂತಹ ಅವೈಜ್ಞಾನಿಕ ‘ಎನರ್ಜಿ ಮೆಡಿಸಿನ್’ ಸಿದ್ಧಾಂತಗಳನ್ನು ಹರಡುವುದರ ಮೂಲಕ ವೈದ್ಯರನ್ನು ಪ್ರಶಂಸಿಸುವುದು ಸರಿಯಲ್ಲ. ವಿಜ್ಞಾನದ ಮೂಲಕ ಕೊರೊನಾ ವೈರಸ್ ವಿರುದ್ಧ ಹೋರಾಡೋಣ ಎಂದು ಟ್ವೀಟ್ ಮಾಡಿದ್ದಾರೆ.

ಇದೀಗ ಚೇತನ್‍ ಮಾಡಿರುವ ಟ್ವಿಟ್‍ ಸುದೀಪ್‍ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಚೇತನ್‍ ಅವರ ಸಲಹೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಿಚ್ಚನ ಅಭಿಮಾನಿಗಳು, ಸೋಶಿಯಲ್‍ ಮಿಡಿಯಾದಲ್ಲಿ ಚೇತನ್‍ಗೆ ಗುರಿಯಾಗಿಸಿಕೊಂಡು ಕಮೆಂಟ್‍ ಮಾಡುತ್ತಿದ್ದಾರೆ.

#Balkaninewskannada #ChethanAhimsa #KicchaSudeepa #SudeepFans #Twitterwar

ಏಪ್ರಿಲ್‍ನಲ್ಲಿ ‘ಜೇಮ್ಸ್’ ಎರಡನೇ ಹಂತದ ಚಿತ್ರೀಕರಣ ಪ್ರಾರಂಭ

 

Tags