ಸುದ್ದಿಗಳು

ಆಫ್ರಿಕನ್-ಅಮೆರಿಕನ್ ಉದ್ಯಮಿಗಳ ಕಥೆ ಹೇಳುವ ‘ದಿ ಬ್ಯಾಂಕರ್’ ಚಿತ್ರ

ಸತ್ಯ ಕಥೆ ಆಧಾರಿತ ನಾಟಕ

ಅಕ್ಟೋಬರ್, 11: ಸ್ಯಾಮ್ಯುಯೆಲ್ ಎಲ್. ಜಾಕ್ಸನ್ ಅವರು ನಿರ್ದೇಶಕ ಜಾರ್ಜ್ ನೋಲ್ಫ್ ನ ಮುಂಬರುವ ಚಿತ್ರ ‘ದಿ ಬ್ಯಾಂಕರ್’ ನಲ್ಲಿ ನಟಿಸಲು ಸಿದ್ಧರಾಗಿದ್ದಾರೆ.

ಪಾತ್ರವರ್ಗದಲ್ಲಿ ಅಂಥೋನಿ ಮ್ಯಾಕಿ, ನಿಕೋಲಸ್ ಹೌಲ್ಟ್ ಮತ್ತು ನಿಯಾ ಲಾಂಗ್ ಕೂಡಾ ಸೇರಿದ್ದಾರೆ. ಸತ್ಯ ಕಥೆ ಆಧಾರಿತ ನಾಟಕ ಇಬ್ಬರು ಆಫ್ರಿಕನ್-ಅಮೆರಿಕನ್ ಉದ್ಯಮಿಗಳಾದ ಮ್ಯಾಕೀಯವರ ಬರ್ನಾರ್ಡ್ ಗ್ಯಾರೆಟ್ ಮತ್ತು ಜಾಕ್ಸನ್ ಜೊ ಮೊರ್ರಿಸ್ ಅವರ ನಿಜ ಕಥೆ ಮೇಲೆ ಕೇಂದ್ರೀಕರಿಸುತ್ತದೆ ಎಂದು ಡೆಡ್ಲೈನ್ ಪತ್ರಿಕೆ ವರದಿ ಮಾಡಿದೆ.ಜಾರ್ಜ್ ನೊಲ್ಫಿ ನಿರ್ದೇಶನದ ಚಿತ್ರದಲ್ಲಿ ನಟಿಸಲಿರುವ ಸ್ಯಾಮ್ಯುಯೆಲ್ ಎಲ್. ಜಾಕ್ಸನ್

1950ರ ದಶಕದಲ್ಲಿ, ಗ್ಯಾರೆಟ್ ಮತ್ತು ಮೊರಿಸ್ ಅವರು ಕಾರ್ಮಿಕ ವರ್ಗದ ಬಿಳಿಯ ವ್ಯಕ್ತಿ ಮ್ಯಾಟ್ ಸ್ಟೈನರ್ ನನ್ನು ನೇಮಿಸುವ ಮೂಲಕ ಈ ಅವಧಿಯ ಜನಾಂಗೀಯ ಮಿತಿಗಳನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅವರ ವ್ಯಾಪಾರಿ ಸಾಮ್ರಾಜ್ಯದ ಮುಖ್ಯಸ್ಥನಂತೆ ವರ್ತಿಸಲು ಅವರಿಗೆ ತರಬೇತಿ ನೀಡುತ್ತಿದ್ದಾಗ ಸೆಕ್ಯೂರಿಟಿ ಮತ್ತು ಚಾಲಕನಂತೆ ನಟಿಸಿದ್ದಾರೆ.

ಗ್ಯಾರೆಟ್ ಮತ್ತು ಮೋರಿಸ್ ಅತ್ಯಂತ ಯಶಸ್ವಿ ರಿಯಲ್ ಎಸ್ಟೇಟ್ ಮಾಲೀಕರಾದ ಮೇಲೆ ಯಶಸ್ಸು ಅಪಾಯದ ಅಂಚಿಗೆ ಅವರನ್ನು  ತಂದೊಡ್ಡುತ್ತದೆ. ನಿಯಾ ಲಾಂಗ್ ಬರ್ನಾರ್ಡ್ ನ ಪತ್ನಿ ಯುನೈಸ್ ಪಾತ್ರವನ್ನು ನಿರ್ವಹಿಸಿದ್ದಾರೆ.

ನೊಲ್ಫ್ ಅವರು ಈ ಹಿಂದೆ ಬ್ರೂಸ್ ಲೀ ಪಿಕ್ ‘ಬರ್ತ್ ಆಫ್ ದಿ ಡ್ರಾಗನ್’, ‘ದಿ ಅಡ್ಜಸ್ಟ್ಮೆಂಟ್ ಬ್ಯೂರೋ’, ‘ದಿ ಬೌರ್ನ್ ಅಲ್ಟಿಮಾಟಮ್’ ಮತ್ತು ‘ಓಷನ್ಸ್ ಟ್ವೆಲ್ವ್’ ಗಳಲ್ಲಿ ಕಾಣಿಸಿಕೊಂಡಿದ್ದರು.

ಆಂಥೋನಿ ಮ್ಯಾಕೀಯವರು ಕೂಡ  ಹಿಂದೆ ‘ಅವೆಂಜರ್ಸ್’, ‘ಕ್ಯಾಪ್ಟನ್ ಅಮೆರಿಕ’, ‘ಆಂಟ್-ಮ್ಯಾನ್’ ಮತ್ತು ‘ಪೇನ್ & ಗೇನ್’ ಸೇರಿದಂತೆ ಹಲವು ಹಾಲಿವುಡ್ ಹಿಟ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿಕೋಲಸ್ ಹೌಲ್ಟ್ ಅವರು ‘ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್’, ‘ಎಕ್ಸ್-ಮೆನ್: ಅಪೋಕ್ಯಾಲಿಪ್ಸ್’ ಮತ್ತು ‘ಜ್ಯಾಕ್ ದಿ ಜೈಂಟ್ ಸ್ಲೇಯರ್’ ಗಳಲ್ಲಿ ನಟಿಸಿದ್ದಾರೆ.

Tags