ಸುದ್ದಿಗಳು

ಅಂದು ಶ್, A ಇಂದು ‘S’ 

ಸೈಕೋ’ ಡೈರೆಕ್ಟರ್ ದೇವದತ್ತಾ ಹೊಸ ಚಿತ್ರ

ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಶ್, A ಸಿನಿಮಾಗಳು ಟೈಟಲ್‍ನಿಂದ ಜನರ ಗಮನ ಸೆಳೆದಿತ್ತು. ಈಗ ಮತ್ತೊಮ್ಮೆ ಒಂದು ಅಕ್ಷರದ ಟೈಟಲ್‍ ಹೊತ್ತು ಹೊಸ ಚಿತ್ರ ಸೆಟ್‍ ಏರುತ್ತಿದೆ.  ‘ನಿನ್ನ ಪೂಜೆಗೆ ಬಂದೇ ಮಾದೇಶ್ವರ’ ಎಂಬ ಜನಪ್ರಿಯ ಹಾಡು ಇಂದಿಗೂ ಎಲ್ಲರ ನೆನಪಿನಲ್ಲಿ ಉಳಿದಿದೆ. ಈ ಹಾಡು, ಕೆಲವು ವರ್ಷಗಳ‌ ಹಿಂದೆ ಬಿಡುಗಡೆಯಾಗಿದ್ದ ‘ಸೈಕೋ’.ಚಿತ್ರದಾಗಿತ್ತು. ‘ಸೈಕೋ ‘‌ಚಿತ್ರವನ್ನು‌ ದೇವದತ್ತ ನಿರ್ದೇಶಿಸಿದ್ದರು. ನಂತರ ಅವರ ಬಗ್ಗೆ ಯಾವ ಸುದ್ದಿಯು ಕೇಳಲು ಸಿಗಲಿಲ್ಲ.

ಸದ್ಯಕ್ಕೆ ಲೇಟೆಸ್ಟ್‍ ಸುದ್ದಿಯೊಂದು ಹೊರ ಬಿದಿದ್ದೆ, ಅದುವೇ ಸುಮಾರು ‌ವರ್ಷಗಳ‌ ನಂತರ ದೇವದತ್ತ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ‘S’ ಎಂಬ ಹೆಸರಿನ‌  ಚಿತ್ರವನ್ನು ವಿ. ದೇವದತ್ತ ಅವರು ನಿರ್ದೇಶಿಸುತ್ತಿದ್ದಾರೆ. ಇದೊಂದು ಪ್ರೇಮಕಥೆಯಾಗಿದ್ದು, ‘ಒಂದು ಶಿಕಾರಿಯ ಕಥೆ’ ಚಿತ್ರದಲ್ಲಿ ನಟಿಸಿದ್ದ ಅಭಿಮನ್ಯುಪ್ರಜ್ವಲ್  ಈ ಲವ್ ಸ್ಟೋರಿಯ ನಾಯಕ ಹಾಗೂ ಅದ್ವಿತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ..

ಏಪ್ರಿಲ್ 10ರ ನಂತರ ಚಿತ್ರೀಕರಣ ಆರಂಭವಾಗಲಿದೆ…ಬೆಂಗಳೂರು, ಚಿಕ್ಕಬಳ್ಳಾಪುರ ಹಾಗು ದೊಡ್ಡಬಳ್ಳಾಪುರ ದಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ..ಮಡಿಕೇರಿ ಹಾಗೂ ಚಿಕ್ಕಮಗಳೂರಿನಲ್ಲಿ ಹಾಡುಗಳ ಚಿತ್ರೀಕರಣ ನಡೆಯಲಿದೆ . ‘S’ ಚಿತ್ರವನ್ನು ಶ್ರೀ ಮಹಾಬಲ ಕ್ರಿಯೇಷನ್ಸ್ ಮೂಲಕ ನಾಗರಾಜು ಕೆ.ವಿ ಅವರು ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಸಭಾಕುಮಾರ್ ಛಾಯಾಗ್ರಹಣ, ಪ್ರದೀಪ್ ವರ್ಮ ಸಂಗೀತ ನಿರ್ದೇಶನ ಹಾಗೂ ಬಿ.ಎಸ್.ಕೆಂಪರಾಜ್ ಅವರ ಸಂಕಲನ ‘S’ ಚಿತ್ರಕ್ಕಿದೆ.

Balkanikannadanews #Devadatta #Psycho #S #AbhimanyuPrajwal #Advithishetty

ಪೃಥ್ವಿ ‘ಫಾರ್ ರಿಜಿಸ್ಟ್ರೇಶನ್‍’

Tags