ಸುದ್ದಿಗಳು

ವಿತರಕ ಕಪಾಲಿ ಮೋಹನ್‍ ಆತ್ಮಹತ್ಯೆ

ತನ್ನದೇ ಹೋಟೆಲ್‍ನಲ್ಲಿ ನೇಣು ಬಿಗಿದುಕೊಂಡ ಡಾ.ರಾಜ್‍ ಆಪ್ತ

ಸಿನಿಮಾ ವಿತರಕ ಹಾಗೂ ಉದ್ಯಮಿ ಕಪಾಲಿ ಮೋಹನ್ ಖಾಸಗಿ ಹೋಟೆಲ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಪಾಲಿ ಮೋಹನ್ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು,ಅದರಲ್ಲೂ ವರನಟ ಡಾ. ರಾಜ್ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದರು.

ಮೋಹನ್‍ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದ ಹತ್ತಿರವಿರುವ ತಮ್ಮ ಒಡೆತನದ ಸುಪ್ರೀಂ ಹೋಟೆಲ್‍ನಲ್ಲಿ ಸೋಮವಾರ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಸಿಸಿಬಿ ಅಧಿಕಾರಿಗಳು ಗ್ಯಾಂಬ್ಲಿಂಗ್‍, ಮೀಟರ್ ಬಡ್ಡಿ ಆರೋಪದ ಮೇಲೆ ಕಪಾಲಿ ಮೋಹನ್ ಹೋಟೆಲ್‍ ಮೇಲೆ ರೇಡ್ ಮಾಡಿದ್ದರು. ಆಗ ಅಕ್ರಮವಾಗಿ ಸಂಗ್ರಹಿಸಿದ್ದ ವಿದೇಶಿ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

Image result for kapali mohan

ಕೆಲವು ಆಪ್ತರ ಪ್ರಕಾರ, ಮೋಹನ್‍ ಸಾಲದ ಸುಳಿಯಲ್ಲಿ ಸಿಲುಕ್ಕಿದ್ದರು ಹಾಗೂ ವಯಕ್ತಿಕ ಜೀವನದಲ್ಲಿ ಬಹಳ ನೋವು ಅಣುಭವಿಸಿದ್ದರು. ಅಷ್ಟೇ ಅಲ್ಲದೆ ಮಗಳು ತಂದೆಯ ಇಷ್ಟದ ವಿರುದ್ಧವಾಗಿ ತಾನು ಪ್ರೀತಿಸಿದ ಹುಡಗನೊಂದಿಗೆ ಅಂತರ್ಜಾತಿ ವಿವಾಹವಾಗಿದ್ದರು. ವಯಕ್ತಿಕ ಜೀವನದಲ್ಲಿ ನೋವು, ಉದ್ಯಮದಲ್ಲಿ ನಷ್ಟ, ಸಾಲದ ಹೊರೆ ಎಲ್ಲವು ಮೋಹನ್ ಅವರನ್ನು ಕುಗ್ಗಿಸಿತ್ತು. ಹೀಗಾಗಿ ಮನನೊಂದ ಮೋಹನ್‍ ಆತ್ಮಹತ್ಯಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಗಂಗಮ್ಮನಗುಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

#Balkanikannadanews #KapaliMohan #Suicide #Dr Rajkumar #Hotel

ನಟ ‘ಚೇತನ್’ ನಿಂದ ‘ಕಿಚ್ಚ’ನಿಗೆ ಅಡ್ವೈಸ್

Tags