ಸುದ್ದಿಗಳು

‘ತಳಪತಿ 63’ ಚಿತ್ರಕ್ಕೆ ಹಿರೋಯಿನ್ ಸಿಕ್ಕಾಯ್ತು, ಯಾರು ಗೊತ್ತಾ?

‘ತಳಪತಿ 63’ ಚಿತ್ರದ ಚಿತ್ರೀಕರಣದಲ್ಲಿ ಸೂಪರ್ ಸ್ಟಾರ್ ವಿಜಯ್ ಬ್ಯೂಸಿಯಾಗಿದ್ದಾರೆ. ಈ ಚಿತ್ರವನ್ನು ಅಟ್ಲಿ ನಿರ್ದೇಶನ ಮಾಡುತ್ತಿದ್ದು, ಇದುವರೆಗೂ ಚಿತ್ರಕ್ಕೆ ನಾಯಕಿ ಫೈನಲ್ ಆಗಿರಲಿಲ್ಲ. ಆದರೆ ಈಗ ಚಿತ್ರತಂಡದಿಂದ ಬಂದಿರುವ ಸುದ್ದಿ ಪ್ರಕಾರ ತಳಪತಿಗೆ ನಾಯಕಿ ಸಿಕ್ಕಾಗಿದೆ.

ಹೌದು, ಎನ್ ಜಿಕೆ ಹೀರೋಯಿನ್ ರಾಕುಲ್ ಪ್ರೀತ್ ಸಿಂಗ್ ತಳಪತಿ ಚಿತ್ರದ ನಾಯಕಿಯಾಗಿದ್ದಾರೆ. ರಾಕುಲ್ ಈಗಾಗಲೇ ಸಾಕಷ್ಟು ಬಾರಿ ವಿಜಯ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದರು. “ನನಗೆ ವಿಜಯ್ ಅವರ ಡ್ಯಾನ್ಸ್ ಅಂದ್ರೆ ಇಷ್ಟ. ಮೊದಲನೆಯ ಚಿತ್ರದಿಂದ ಇಲ್ಲಿಯ ತನಕ ಮಾಡಿರುವ ವಿಜಯ್ ಎಲ್ಲಾ ಚಿತ್ರಗಳು ಸೂಪರ್ ಹಿಟ್. ಅವರು ಅಂದಿನಿಂದಲೂ ಹಾಗೇ ಇದ್ದಾರೆ. ನನಗೆ ಅವರ ಜೊತೆ ಕೆಲಸ ಮಾಡಲು ಬಹಳ ಇಷ್ಟ” ಎಂದು ಹೇಳಿದ್ದರು.

Image result for rakul preet singh

ಈ ಹಿಂದೆ ಚಿತ್ರಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಿಟ್‌ ಚಿತ್ರಗಳಲ್ಲಿ ನಟಿಸುತ್ತಿರುವ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ಅಥವಾ ತ್ರಿಶಾ ನಾಯಕಿಯಾಗಬಹುದು ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ರಾಕುಲ್ ನಾಯಕಿಯಾಗಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.

‘ಬಾಕ್ಸ್ ಆಫೀಸ್ ಸುಲ್ತಾನ್’ ಮೊದಲಿಗೆ ಪಡೆಯುತ್ತಿದ್ದ ಸಂಭಾವನೆ ಇಷ್ಟೇನಾ!!?!!

#balkaninews #thalapathy64movie #vijay #rakulpreetsingh #rakulpreetsinghinstagram #rakulpreetsinghtwitter

Tags