ಸುದ್ದಿಗಳು

ಯಶ್ ತಾಯಿ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ರದ್ದುಗೊಳಿಸಿದ ಹೈಕೋರ್ಟ್

ಬಾಡಿಗೆ ಮನೆ ಖಾಲಿ ಮಾಡುವಾಗ ಕೆಲವು ಬೆಲೆ ಬಾಳುವ ವಸ್ತುಗಳನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕರು ನಟ ಯಶ್ ತಾಯಿ ಪುಷ್ಪಾ ವಿರುದ್ಧ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮನೆ ಮಾಲೀಕರು ಗಿರಿನಗರ ಠಾಣೆಯಲ್ಲಿ ನೀಡಿದ್ದ ದೂರನ್ನು ಪ್ರಶ್ನಿಸಿ ಯಶ್ ತಾಯಿ ಪುಷ್ಪಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

“ನಾವು ಹೈಕೋರ್ಟ್ ಹೇಳಿದಂತೆ ಬಾಡಿಗೆ ಮನೆ ಖಾಲಿ ಮಾಡಿದ್ದೇವೆ. ಕೋರ್ಟ್ ಹೇಳಿದಷ್ಟು ಹಣವನ್ನೂ ಪಾವತಿಸಿದ್ದೇವೆ. ಮನೆಗಾಗಿ ನಾವು ಹಾಕಿದ ವಸ್ತುಗಳನ್ನು ಕೊಂಡೊಯ್ದಿದ್ದೇವೆ. ಅವುಗಳನ್ನು ತೆಗೆಯುವಾಗ ಸ್ವಲ್ಪ ಡ್ಯಾಮೇಜ್ ಆಗಿದೆ. ಅದಕ್ಕಾಗಿ ಎಫ್ ಐಆರ್ ದಾಖಲಿಸಿದ್ದು, ಎಷ್ಟು ಸರಿ” ಎಂದು ಪ್ರಶ್ನಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್​ ಎಫ್​ಐಆರ್​ನ್ನು ರದ್ದುಗೊಳಿಸಿದೆ.

ಹೈಕೋರ್ಟ್​ ಆದೇಶದಂತೆ ಬಾಡಿಗೆ ಮನೆ ಖಾಲಿ ಮಾಡಿದ್ದ ಯಶ್ ಅಲ್ಲಿಂದ ಹೊರಡುವಾಗ ಸಿಟ್ಟಿನ ಭರದಲ್ಲಿ ಹಲವು ವಸ್ತುಗಳನ್ನು ಒಡೆದು ಹಾಕಿದ್ದರು ಎನ್ನಲಾಗಿತ್ತು. ಈ ಸಂಬಂಧ ಮನೆ ಮಾಲೀಕರು ನೀಡಲಾಗಿದ್ದ ದೂರಿನ ಅನ್ವಯ ಯಶ್​​ ತಾಯಿ ವಿರುದ್ಧ ದಾಖಲಾದ ಎಫ್​ಐಆರ್​ನ್ನು ಇದೀಗ ಹೈಕೋರ್ಟ್​ ರದ್ದುಗೊಳಿಸಿದೆ.

ವಿಶ್ವ ಅಪ್ಪಂದಿರ ದಿನಾಚರಣೆಗೆ ಮಗಳ ಫೋಟೋ ಹಂಚಿಕೊಂಡ ತಾರೆಯರು!!

 

#balkaninews #yash # highcourt #yashmother #renthouse #yashinstagram #yashtwitter #yashfacebook

 

Tags