ಸುದ್ದಿಗಳು

ರಿಲೀಸ್ ಆಯ್ತು ‘ದಿ ಐರನ್ ಲೇಡಿ’ ಚಿತ್ರದ ಫಸ್ಟ್ ಲುಕ್ …!

ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಿತ್ಯಾಮೆನನ್

ಬೆಂಗಳೂರು, ಡಿ.6: ‘ದಿ ಐರನ್ ಲೇಡಿ’ ಚಿತ್ರದ ಮೂಲಕ ನಟಿ ನಿತ್ಯಾಮೆನನ್ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಹೌದು, ‘ದಿ ಐರನ್ ಲೇಡಿ’ ಸಿನಿಮಾ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಲು ಹೊರಟಿರುವ ಚಿತ್ರ.  ಈ ಚಿತ್ರದ ಫಸ್ಟ್ ಲುಕ್ ಜಯಲಲಿತಾ ಅವರ ಪುಣ್ಯತಿಥಿ ದಿವಸ ನಿನ್ನೆ ರಿಲೀಸ್ ಆಗಿದೆ.

ಪ್ರಿಯದರ್ಶಿನಿ ಚಿತ್ರಕ್ಕೆ ಆ್ಯಕ್ಷನ್ ಕಟ್ …!

ಸದ್ಯ ನಿರ್ದೇಶಕ ಮಿಸ್ಕಿನ್ ಅವರ ಜೊತೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಪ್ರಿಯದರ್ಶಿನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರದಲ್ಲಿ ನಿತ್ಯಾ ಮೆನನ್ ಜಯಲಲಿತಾ ಪಾತ್ರಕ್ಕೆ ಯಾವ ಪರಿ ಸಿದ್ಧತೆ ಮಾಡಿಕೊಂಡಿರಬಹುದು ಅನ್ನುವುದು ಈ ಸಿನಿಮಾದ ಪೋಸ್ಟರ್ ನೋಡಿದರೆ ಗೊತ್ತಾಗುತ್ತದೆ. ಇದಕ್ಕೂ ಮೊದಲು ಜನಪ್ರಿಯ ಚಿತ್ರನಟಿಯಾಗಿದ್ದ ಜಯಲಲಿತಾ ಬಳಿಕ ರಾಜಕೀಯಕ್ಕಿಳಿದು ಅಲ್ಲಿ ಸಂಚಲನ ಮೂಡಿಸಿದ ಬಗೆಯನ್ನು ಈ ಚಿತ್ರದಲ್ಲಿ ತೋರಿಸಲಿದ್ದಾರಂತೆ.ಥೇಟ್ ಜಯಲಲಿತಾ ಥರ ಕಾಣಿಸಿಕೊಳ್ಳಲಿರುವ ನಿತ್ಯಾ ಮೆನೆನ್ ..!

ಸದ್ಯ ಈ ಚಿತ್ರದಲ್ಲಿ ದೊಡ್ಡ ಬೊಟ್ಟಿಟ್ಟುಕೊಂಡ, ದಪ್ಪನೆಯ ಹೆಣ್ಣುಮಗಳ ಲುಕ್‌ನಲ್ಲಿ ನಿತ್ಯಾ ಥೇಟ್ ಜಯಲಲಿತಾರಂತೆ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ದಿನವೂ ಕಷ್ಟ ಪಟ್ಟಿದ್ದಾರಂತೆ ನಿತ್ಯಾ. ಜೊತೆಗೆ ತೂಕವೂ ಹೆಚ್ಚು ಮಾಡಿಕೊಂಡಿರುವುದು ಪೋಸ್ಟರ್‌ ನಲ್ಲಿ ಸ್ಪಷ್ಟವಾಗಿದೆ. ಈ ಸಿನಿಮಾ ಜಯಲಲಿತಾ ಜನ್ಮದಿನ ಫೆಬ್ರವರಿ 24ಕ್ಕೆ ರಿಲೀಸ್ ಆಗಲಿದೆಯಂತೆ. ಸಿನಿಮಾ ಕುರಿತು ಮಾಹಿತಿ ನೀಡಿರುವ ನಿರ್ದೇಶಕಿ ಪ್ರಿಯದರ್ಶಿನಿ, ‘ಜಯಲಲಿತಾ ಅವರ ಎಳವೆಯಿಂದ ಅವರು ಕೊನೆಯುಸಿರೆಳೆಯುವವರೆಗಿನ ವಿವರಗಳು ಸಿನಿಮಾದಲ್ಲಿ ಇದೆಯಂತೆ.

Tags