ಸುದ್ದಿಗಳು

ಪ್ರಭು ಓದಿದ ಪತ್ರ ಕಣ್ಣೀರು ತರಿಸಿತು: ಕಮಲ್ ಹಾಸನ್ ಹೃದಯಸ್ಪರ್ಶಿ ಟ್ವೀಟ್

ಚಿತ್ರರಂಗದಲ್ಲಿ 60 ವರ್ಷ ಪೂರೈಸಿದ ತಮಿಳು ನಟ ಹಿರಿಯ ಕಮಲ್ ಹಾಸನ್ ಅವರನ್ನು ತಮಿಳು ನಟ ಪ್ರಭು ಮತ್ತು ಕುಟುಂಬ  ಶುಕ್ರವಾರ ಸನ್ಮಾನಿಸಿದೆ.

ಶಿವಾಜಿ ಗಣೇಶನ್ ಅವರ ಮನೆಯಾದ ಅನ್ನೈ ಇಲ್ಲಂನಲ್ಲಿ ಪ್ರಭು ಅವರ ಕುಟುಂಬವು ಕಮಲ್ ಹಾಸನ್ ಅವರಿಗೆ ಫಲಕ ಮತ್ತು ಹೃತ್ಪೂರ್ವಕ ಪತ್ರವನ್ನು ನೀಡಿ ಗೌರವಿಸಿತು.

” ನಟನೆಯಲ್ಲಿ 60 ವರ್ಷಗಳ ಕಾಲ ತೊಡಗಿಸಿಕೊಳ್ಳುವ ಮೂಲಕ ಚಿತ್ರಂಗವನ್ನು ಆಳಿದ್ದೀರಿ. ಈಗ ಜಗತ್ತು  ಮತ್ತು ನಗರವನ್ನು ಆಳಿ, 100 ವರ್ಷಗಳ ಕಾಲ ಸಂತೋಷವಾಗಿರಿ” ಎಂದು ಪತ್ರದಲ್ಲಿ ತಿಳಿಸಲಾಗಿದೆ.  ಈ ಸಂದರ್ಭದಲ್ಲಿ ಪ್ರಭು, ಶ್ರುತಿ ಹಾಸನ್, ವಿಕ್ರಮ್ ಪ್ರಭು ಮತ್ತು ಅವರ ಪತ್ನಿ ಲಕ್ಷ್ಮಿ ಉಜ್ಜೈನಿ ಇತರರು ಇದ್ದರು.

ಕಮಲ್ ಹಾಸನ್ ಅವರು ಟ್ವಿಟರ್ ಖಾತೆಯಲ್ಲಿ ಪ್ರಭು ಅವರ ಸನ್ಮಾನವನ್ನು ಶ್ಲಾಘಿಸಿದ್ದು, “ಅನ್ನೈ ಇಲ್ಲಂನಲ್ಲಿ ಎಂದಿನಂತೆ, ಬಹಳಷ್ಟು ಪ್ರೀತಿ ಮತ್ತು ವಾತ್ಸಲ್ಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಪ್ರಭು ಓದಿದ ಪತ್ರವು ನನಗೆ ಕಣ್ಣೀರು ತರಿಸಿತು. ನನ್ನ ಹೃದಯ ತುಂಬಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

1959 ರಲ್ಲಿ ಕಲ್ಲತೂರ್ ಕಣ್ಣಮ್ಮದಲ್ಲಿ ಬಾಲ ಕಲಾವಿದನಾಗಿ ನಟಿಸಿದ ಕಮಲ್, ಈ ವರ್ಷದ ಆಗಸ್ಟ್‌ನಲ್ಲಿ ಚಿತ್ರರಂಗದಲ್ಲಿ 60 ವರ್ಷಗಳನ್ನು ಪೂರೈಸಿದರು. ಇತ್ತೀಚೆಗೆ ಬಿಗ್ ಬಾಸ್ ತಮಿಳು ಸೀಸನ್ 3 ಹೋಸ್ಟ್ ಮಾಡುತ್ತಿರುವ ಕಮಲ್ , ಆ ನಂತರ ಶಂಕರ್ ಅವರ ಇಂಡಿಯನ್ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅನುಪಮಾ ಪರಮೇಶ್ವರನ್ ಫೋಟೋ ಶೂಟ್ ಸಿಂಪ್ಲಿ ಸೂಪರ್ಬ್

#balkaninews #kamalhaasan #prabhu #twitter

Tags