ಸುದ್ದಿಗಳು

ಚಿತ್ರರಂಗಕ್ಕೆ ಶಿವಣ್ಣ ಒಬ್ಬರೇ ಹ್ಯಾಟ್ರಿಕ್ ಹೀರೋ: ನಟ ದರ್ಶನ್

‘ನಮ್ಮ ಚಿತ್ರರಂಗಕ್ಕೆ ಶಿವರಾಜ್ ಕುಮಾರ್ ಒಬ್ಬರೇ ಹ್ಯಾಟ್ರಿಕ್ ಹೀರೋ.. ನಾವು ಏನಂದ್ರೆ ಬರೀ ಸಿನಿಮಾ ಮಾಡ್ತಿವಿ ಅಷ್ಟೇ’ ಎಂದು ನಟ ದರ್ಶನ್ ಹೇಳಿಕೆ ನೀಡಿದ್ದಾರೆ.

ನಿನ್ನೆ ರಾತ್ರಿ (ಡಿ.01) ‘ಒಡೆಯ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಮಾಧ್ಯಮದವರು ದರ್ಶನ್ ಹೇಳಿಕೆ ನೀಡಿದರು. ಈ ವರ್ಷ ಅವರು ನಟಿಸಿರುವ ‘ಯಜಮಾನ’ ಮತ್ತು ‘ಕುರುಕ್ಷೇತ್ರ’ ಚಿತ್ರಗಳು ಶತದಿನ ಪೂರೈಸಿವೆ. ಅಲ್ಲದೇ ಈ ಚಿತ್ರವು ಸಹ ಇದೇ ವರ್ಷ ತೆರೆಗೆ ಬರುತ್ತಿದೆ. ಹೀಗಾಗಿ ಈ ಬಾರಿ ಹ್ಯಾಟ್ರಿಕ್ ಬಾರಿಸ್ಥಿರಾ ಎಂಬ ಪ್ರಶ್ನೆಗೆ ಅವರು ‘ಚಿತ್ರರಂಗಕ್ಕೆ ಶಿವಣ್ಣ ಒಬ್ಬರೇ ಹ್ಯಾಟ್ರಿಕ್ ಹೀರೋ’ ಎಂದರು.

‘ನಾನು ಅದೇ ಸ್ಪೀಡ್ ನಲ್ಲಿ ಸಿನಿಮಾ ಮಾಡುತ್ತಿದ್ದೇನೆ. ‘ಕುರುಕ್ಷೇತ್ರ’ ಸಿನಿಮಾ ಈ ವರ್ಷ ಬಿಡುಗಡೆಯಾದ ಕಾರಣ ಮೂರು ಸಿನಿಮಾ ಆಗಿವೆ. ಹಾಗೆ ನೋಡಿದರೆ, ಕಳೆದ ವರ್ಷ ನನ್ನ ಯಾವ ಸಿನಿಮಾ ಬಿಡುಗಡೆಯೇ ಆಗಿಲ್ಲ’ ಎಂದು ದರ್ಶನ್ ನಗುನಗುತ್ತಾ ಹೇಳಿದರು.

ಬಬ್ರೂ: ಥ್ರಿಲ್ಲಿಂಗ್ ಜರ್ನಿಯಲ್ಲಿ ತೆರೆದುಕೊಳ್ಳಲಿದೆ ರೋಚಕ ಕಥನ

#Shivarajkumar  #HattrikHero #Darshan #KannadaSuddigalu

Tags