ಸುದ್ದಿಗಳು

‘ಸಿಂಗ’ ಸಿನಿಮಾದಲ್ಲಿ ಪ್ರೇಮ್ ಧ್ವನಿಯ ಹಾಡು

ಬೆಂಗಳೂರು, ಫೆ.17:

ಜೋಗಿ ಪ್ರೇಮ್ ಒಬ್ಬ ನಟ ಮತ್ತು ನಿರ್ದೇಶಕ ಮಾತ್ರವಲ್ಲದೇ, ಒಬ್ಬ ಒಳ್ಳೆಯ ಗಾಯಕ ಕೂಡ.  ಅವರ ಹಾಡು ಅಂದಾಕ್ಷಣ ನೆನಪಿಗೆ ಬರೋದು ಬೇರೇನು ಅಲ್ಲ. ತಾಯಿಯ ಹಾಡು, ತಾಯಿಗಾಗಿ ಹಾಡು. ಈಗಾಗಲೇ ಈ ನಟ ಹಾಡಿದ್ದ ಹಾಡುಗಳು ಫುಲ್ ಫೇಮಸ್ ಆಗಿರೋದನ್ನು ನಾವು ನೋಡಿದ್ದೇವೆ. ಅಷ್ಟೇ ಅಲ್ಲ ಅದರಲ್ಲೂ ಈ ನಟನ ತಾಯಿ ಹಾಡುಗಳು ಸಕ್ಕತ್ ಹಿಟ್ ಆಗಿವೆ. ಇದೀಗ ಮತ್ತೊಂದು ಸಿನಿಮಾದಲ್ಲಿ ತಾಯಿ ಬಗ್ಗೆ ಹಾಡು ಹಾಡಲಿದ್ದಾರೆ ನಿರ್ದೇಶಕ ಪ್ರೇಮ್.

‘ಸಿಂಗ’ ಸಿನಿಮಾದಲ್ಲಿ ಪ್ರೇಮ್ ಧ್ವನಿ

ಹೌದು, ಇತ್ತೀಚೆಗಷ್ಟೆ ಫಸ್ಟ್ ಲುಕ್ ಬಿಡುಗಡೆಯಾಗಿ ಬಾರೀ ಸದ್ದು ಮಾಡಿದ ಸಿನಿಮಾ ಸಿಂಗ. ಇದೀಗ ಈ ಸಿನಿಮಾದಲ್ಲಿ ನಟ ಚಿರಂಜೀವ ಸರ್ಜಾ ನಾಯಕ‌ ನಟನಾಗಿ ನಟಿಸುತ್ತಿದ್ದು,  ನಿರ್ದೇಶಕ ಪ್ರೇಮ್ ಈ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಲಿದ್ದಾರೆ.

ಉದಯ್ ಕೆ. ಮೆಹ್ತಾ ನಿರ್ಮಾಣದ ಸಿನಿಮಾ

ಹೌದು, ಸಿಂಗ ಸಿನಿಮಾದಲ್ಲಿ ಪ್ರೇಮ್ ಹಾಡಲಿದ್ದಾರೆ. ವಿ.ನಾಗೇಂದ್ರ ಪ್ರಸಾದ್​ ಲಿರಿಕ್ಸ್​ ಬರೆದಿದ್ದು, ಧರ್ಮ ವಿಶ್​ ಮ್ಯೂಸಿಕ್​ ಕಂಪೋಸ್​ ಮಾಡಿರುವ ಹಾಡಿಗೆ ಪ್ರೇಮ್ ಧ್ವನಿ ನೀಡಲಿದ್ದಾರೆ. ಸದ್ಯ ‘ಸಿಂಗ’ ಸಿನಿಮಾವನ್ನು ವಿಜಯ್​ ಕಿರಣ್​ ನಿರ್ದೇಶನ ಮಾಡ್ತಾ ಇದ್ದು, ಉದಯ್​ ಕೆ.ಮೆಹ್ತಾ ನಿರ್ಮಾಣ ಮಾಡ್ತಿದ್ದಾರೆ.

ಹಸಿರು ತರಕಾರಿ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತೇ?!!

#singamovie #singakannadamovie #sandalwood #kannadamovies #balkaninews #dharmavish #jogiprem #vijaykiran #singamovieinchirusarja #chirusarjaandadithiprabhudeva

 

 

Tags

Related Articles