ಸುದ್ದಿಗಳು

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ‘ದಿ ಟೆರರಿಸ್ಟ್’ ಚಿತ್ರಗಳ ಪೋಟೋಗಳು

‘ದಿ ಟೆರರಿಸ್ಟ್’ ಚಿತ್ರವು ತನ್ನ ವಿಶಿಷ್ಟ ಪೋಟೋಗಳ ಮೂಲಕ ಗಮನ ಸೆಳೆಯುತ್ತಿದ್ದು, ಇದೀಗ ಈ ಚಿತ್ರದ ಪಾತ್ರಗಳನ್ನು ಪ್ರತಿಬಿಂಬಿಸುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ನೋಡುಗರಿಂದ ಸಖತ್ ಮೆಚ್ಚುಗೆ ಗಳಿಸುತ್ತಿವೆ.

ಬೆಂಗಳೂರು, ಆ. 07: ನಟಿ ರಾಗಿಣಿ ‘ಟೆರರಿಸ್ಟ್’ ಆಗಿ “ದಿ ಟೆರರಿಸ್ಟ್’ ಚಿತ್ರದಲ್ಲಿ ಅಭಿನಯಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ‘ರಾಗ’ ಚಿತ್ರದ ನಂತರ ಪಿ.ಸಿ.ಶೇಖರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರವು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ರಾಗಿಣಿ ಇಲ್ಲಿ ‘ರೇಶ್ಮಾ’ ಎಂಬ ಮುಸ್ಲಿಂ ಹುಡುಗಿಯಾಗಿ ನಟಿಸುತ್ತಿದ್ದಾರೆ.

  

ಮೊದಲ ನೋಟ

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ‘ದಿ ಟೆರರಿಸ್ಟ್’ ಚಿತ್ರದ ಮೊದಲ ನೋಟಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿ ನೋಡುಗರಿಂದ ಮೆಚ್ಚಿಗೆ ಗಳಿಸಿದ್ದವು. ಇವುಗಳಲ್ಲಿ ರಾಗಿಣಿ ಬುರ್ಖಾ ತೊಟ್ಟು, ತಲೆಗೆ ಸ್ಕಾರ್ಫ್ ಕಟ್ಟಿಕೊಂಡು ಮುಸ್ಲಿಂ ಯುವತಿಯಂತೆಯೇ ಕಾಣಿಸಿಕೊಂಡಿದ್ದ ಪೋಟೋ ಆಕರ್ಷಿತವಾಗಿ ಕಂಡು ಬಂದಿತ್ತು.

   

ಗಮನ ಸೆಳೆಯುತ್ತಿರುವ ಪೋಟೋಗಳು

ನಟಿ ರಾಗಿಣಿಯವರ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದಂತೆ ಇದೀಗ ಈ ಚಿತ್ರದಲ್ಲಿ ನಟಿಸಿರುವ ಪಾತ್ರಧಾರಿಗಳ ಪೋಟೋಗಳು ಹರಿದಾಡುತ್ತಿವೆ. “ಪ್ರಚಲಿತ ಸಮಸ್ಯೆಗಳ ಮೇಲೆ ಸಿನಿಮಾದ ಕಥೆಯನ್ನು ಹೆಣೆಯಲಾಗಿದ್ದು , ಸಿನಿಮಾದ ಹೆಸರಿಗೆ ತಕ್ಕಂತೆ ಭಯೋತ್ಪಾದನೆ ಕುರಿತ ಚಿತ್ರ ಇದಾಗಿದೆ” ಎನ್ನುತ್ತಾರೆ ನಿರ್ದೇಶಕರು. ಈ ಚಿತ್ರವನ್ನು ಅಲಂಕಾರ್ ಸಂತಾನಂ ನಿರ್ಮಾಣ ಮಾಡಿದ್ದು, ವೈದಿಯವರ ಕ್ಯಾಮರಾ ಕೈಚಳಕವಿದೆ. ಸಂಭಾಷಣೆಯನ್ನು ಚಿನ್ ಬರೆದಿದ್ದಾರೆ.

Tags