ಸುದ್ದಿಗಳು

ನಿಮಗೊಂದು ಸವಾಲ್..?!.. “ದಿ ವಿಲನ್” ನಲ್ಲಿ ವಿಲನ್ ಯಾರು?

ಕಿಚ್ಚ ವಿಲನ್ ಆದರೆ.. ಶಿವಣ್ಣ ರಾವಣ....

 ಪ್ರೇಮ್ ನಿರ್ದೇಶನದ ಚಿತ್ರ  ‘ದಿ ವಿಲನ್’ ನಲ್ಲಿ ವಿಲನ್  ಯಾರೆಂಬುದು ಸದ್ಯ ಎಲ್ಲರಲ್ಲೂ ಕೇಳಿ ಬರುತ್ತಿರುವ ಪ್ರಶ್ನೆ..! ಅಭಿನಯ ಚಕ್ರವರ್ತಿ ಕಿಚ್ಚ ಹಾಗೂ ಕರುನಾಡ  ಚಕ್ರವರ್ತಿ ಶಿವಣ್ಣ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಬಿಡಗಡೆಗೆ ಕ್ಷಣಗಣನೆ ಶುರು..! ‘ದಿ ವಿಲನ್’ ಚಿತ್ರದಲ್ಲಿ ನಿಜವಾದ ವಿಲನ್ ಯಾರೆಂಬುದನ್ನು ಅ.1 ರಂದು ಬಿಡುಗಡೆಮಾಡುತ್ತಿರುವ ಟೀಸರ್ ಹೇಳುತ್ತದೆ ಎಂದು ಪ್ರೇಮ್ ಹೇಳಿದ್ದರು..’ಇಬ್ಬರು ಹೀರೋಗಳು ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಟೀಸರ್ ಹೇಗಿರಬೇಕೆಂಬುದನ್ನು ಸಾಕಷ್ಟು ವರ್ಕ್ ಮಾಡಿಯೇ ಟೀಸರ್ ಸಿದ್ದಪಡಿಸಲಾಗಿದೆ ಎನ್ನಲಾಗುತ್ತಿತ್ತು. ಇದರಲ್ಲಿ ವಿಲನ್ ಯಾರೆಂಬುದನ್ನು ಪರೋಕ್ಷವಾಗಿ ಹೇಳುತ್ತಿದ್ದೇನೆ. ಸೂಕ್ಷ್ಮವಾಗಿ ಟೀಸರ್ ಗಮನಿಸಿದವರಿಗೆ ಮಾತ್ರ ಖಳನಾಯಕನ ಗುಟ್ಟು ರಟ್ಟಾಗುತ್ತದೆ’ ಎಂದು ನಿರ್ದೇಶಕ ಪ್ರೇಮ್ ಈ ಹಿಂದೆ ತಿಳಿಸಿದ್ದರು

Related image

ದಿ ವಿಲನ್ ಶಿವಣ್ಣ ಅಥವಾ ಕಿಚ್ಚನಾ?

ಚಿತ್ರದಲ್ಲಿ ಕಿಚ್ಚ ಮತ್ತು ಶಿವಣ್ಣ ಇಬ್ಬರೂ ವಿಲನ್ ಗಳೇ..ಕಿಚ್ಚ ವಿಲನ್ ಆದರೆ.. ಶಿವಣ್ಣ ರಾವಣ.. ಇಬ್ಬರೂ ಕೂಡ ಒಂದೊಂದು ಕಾರಣಗಳಿಂದ ತಮ್ಮ ಬೇಟೆ ಹುಡುಕುತ್ತಿರುತ್ತಾರೆ. ಆ ಬೇಟೆ ತನಗೇ ಸಿಗಬೇಕೆಂಬ ಹಠ .. ಇನ್ನು ಈ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಇದೆಯಂತೆ… ಈಗ ಇಬ್ಬರೂ ವಿಲನ್ ಗಳೇ ಅಂತ ಗೊತ್ತಾಯ್ತು.. ಇನ್ನು ಈ ಚಿತ್ರಕ್ಕೆ ಟ್ವಿಸ್ಟ್ ಕೊಡುವುದೇ ಆ್ಯಮಿ ಜಾಕ್ಸನ್..ಆ್ಯಮಿಗೆ ಈ ಚಿತ್ರದಲ್ಲಿ ಏನು ಪಾತ್ರ..ಈಕೆಗೂ ವಿಲನ್ ಗೂ ಏನು ಸಂಬಂಧ ಎಂದು ಚಿತ್ರ ತೆರೆಗೆ ಬಂದ ಮೇಲೆ ಉತ್ತರ ಸಿಗಲಿದೆ.

 

Tags