ಸುದ್ದಿಗಳು

25 ದಿನ ಪೂರೈಸಿದ ‘ದಿ ವಿಲನ್’ ಚಿತ್ರ …!

'ದಿ ವಿಲನ್’ ಚಿತ್ರಕ್ಕೆ ಉತ್ತಮ ಸ್ಪಂದನೆ

ಬೆಂಗಳೂರು,,15: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ‘ದಿ ವಿಲನ್’ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ‘ದಿ ವಿಲನ್’ ಚಿತ್ರಕ್ಕೆ ಅದ್ಭುತ ಓಪನಿಂಗ್ ಸಿಕ್ಕಿದ್ದು, ಸಿನಿಮಾ ತೆರೆಕಂಡ ಒಂದು ವಾರದಲ್ಲಿ ಸುಮಾರು 70 ಕೋಟಿ ಕಲೆಕ್ಷನ್ ಮಾಡಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಕೇಳಿಬಂದಿದೆ.

Image result for the villain

ಚಿತ್ರದಲ್ಲಿ ವಿಲನ್ ಗುರು ರಾವಣ …!

ಚಿತ್ರದಲ್ಲಿ ಆ್ಯಮಿ ಜಾಕ್ಸನ್‌ ನಾಯಕಿಯಾಗಿ ನಟಿಸಿದ್ದಾರೆ. ಪ್ರೇಮ್‌ ಅವರ ಪ್ರತಿಯೊಂದು ಚಿತ್ರದಲ್ಲೂ ಅಮ್ಮನ ಸೆಂಟಿಮೆಂಟ್‌ ಇದ್ದೇ ಇದೆ. ಈ ಚಿತ್ರದಲ್ಲಿ ಇದೆ. ‘ಮನುಷ್ಯನಲ್ಲಿ ಪಾಸಿಟಿವ್‌ ಮತ್ತು ನೆಗೆಟಿವ್‌ ಗುಣಗಳಿರುತ್ತವೆ. ಸಮಯಕ್ಕೆ ತಕ್ಕಂತೆ ಅವನು ಬದಲಾಗುತ್ತಾ ಹೋಗುತ್ತಾನೆ. ವಿಲನ್‌ ಗುರು ರಾವಣ. ಚಿತ್ರದಲ್ಲಿ ಆ ಗುಣ ಇರುವ ನಾಯಕರಿದ್ದಾರೆ. ರಾವಣ ವಿಲನ್‌ ರೀತಿ ಇದ್ದರೂ ಅವನು ಕೂಡ ಹೀರೊನೇ. ರಾವಣ ಸತ್ತಾಗ ರಾಮ ಹೇಳುವ ಒಂದು ಮಾತು ಹೀಗಿದೆ. ‘ರಾವಣನ ಅಹಂ ಸತ್ತಿತು. ಅವನು ದೊಡ್ಡ ಗುಣ ಇರೋರು. ನಾಯಕ’ ಅಂತ. ಅದೇ ಕ್ಯಾರೆಕ್ಟರ್‌ಗಳನ್ನು ಈ ಚಿತ್ರದಲ್ಲಿ ನೋಡಬಹುದು

.

ಲವ್‌, ಸೆಂಟಿಮೆಂಟ್‌, ಆ್ಯಕ್ಷನ್ಸಿನಿಮಾ ದಿ ವಿಲನ್ …!

ಇದು ಫುಲ್‌ ಪ್ಯಾಕ್ಡ್‌ ಕಮರ್ಷಿಯಲ್‌ ಚಿತ್ರ ಜೊತೆಗೆ ‘ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ.ಪ್ರತಿಕ್ಷಣ ಯಾರು, ಯಾಕೆ, ಅವನಾರು, ಯಾಕೆ ಹೀಗೆ ಅನ್ನುವ ಕುತೂಹಲ ಕೆರಳಿಸುತ್ತಲೇ ಹೋಗುತ್ತದೆ. ಶಿವಣ್ಣ, ಸುದೀಪ್‌ ಮತ್ತು ಆ್ಯಮಿ ಜಾಕ್ಸನ್‌ ಡಬಲ್‌ ಶೇಡ್‌ ಪಾತ್ರಗಳಲ್ಲಿ ನಟಿಸಿದ್ದಾರೆ. ಅದ್ಬುತವಾಗಿ ಆಗಿ ನಟಿಸಿದ್ದಾರೆ. ಲವ್‌, ಸೆಂಟಿಮೆಂಟ್‌, ಆ್ಯಕ್ಷನ್‌ ಎಲ್ಲರಿಗೂ ಥ್ರಿಲ್‌ ನೀಡಿದೆ. ಪ್ರೇಮ್ ಸಿನಿಮಾ ಬಗ್ಗೆ ಏನೇ ವಿಮರ್ಶೆಗಳಿದ್ದರೂ, ಚಿತ್ರ ಮಾತ್ರ ಬಾಕ್ಸ್ ಆಫೀಸಲ್ಲಿ ಮುನ್ನುಗ್ಗುತ್ತಿದೆ. ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ 550ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಸಿನಿಮಾ ಇದು. ಒಟ್ಟಾರೆ ‘ದಿ ವಿಲನ್’ ಚಿತ್ರದಿಂದಾಗಿ ಬಾಕ್ಸ್‌ ಆಫೀಸ್‌ಗೆ ಹೊಸ ಕಳೆ ಬಂದಿದೆ. ಸತತ 25 ದಿನಗಳ ಜೊತೆಗೆ 50ನೇ ದಿನದತ್ತ ಮುನ್ನುಗುತ್ತಿದೆ.

 

Tags