ಸುದ್ದಿಗಳು

‘ದಿ ವಿಲನ್’ ಗೆ ಚಿತ್ರಕ್ಕೆ ಆಮಿ ಜಾಕ್ಸನ್ ಯಾಕೆ ಬೇಕಿದ್ದಿರಬಹುದು ಹೇಳಿ?

ಜಾಕ್ವೆಲಿನ್ ಸೂಕ್ತಳೇ?....

ಇದೀಗ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯದ ಅವರ ಮುಂದಿನ ಚಿತ್ರ `ದಿ ವಿಲನ್ ನಲ್ಲಿ ಯುನೈಟೈಡ್ ಕಿಂಗ್ ಡಂ ಮೂಲದ ಮಿಲ್ಕಿ ಬ್ಯೂಟಿ ಆಮಿ ಜಾಕ್ಸನ್ ನಾಯಕಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ..

ಆಮಿಗೆ ಕನ್ನಡದಲ್ಲಿ ಇದು ಮೊದಲನೆಯ ಚಿತ್ರ..

ಇನ್ನು ಆಮಿಗೆ ಕನ್ನಡ ಸುತರಾಂ ಬರೋದಿಲ್ಲ ಅನ್ನುವುದು ಸತ್ಯ..! ಯಾಕೆಂದರೆ ಆಕೆ ಇಂಗ್ಲೆಂಡ್ ಮೂಲದ ಬ್ರಿಟೀಷ್ ಬೆಡಗಿ..! ಆಕೆ ಈ ಚಿತ್ರಕ್ಕೆ ಆಯ್ಕೆ ಹೇಗಾದಳು ಅನ್ನುವುದಕ್ಕೆ ಪ್ರೇಮ್ ಅವರನ್ನೇ ಕೇಳಬೇಕು!!. ಪ್ರೇಮ್ ಹೇಳುವಂತೆ ‘ಈ ಪಾತ್ರವನ್ನು ನಾನು ಬೇರೆ ಯಾವ ಪ್ರಮುಖ ಚಿತ್ರನಟಿಯಿಂದಲಾದರೂ ಮಾಡಿಸಬಹುದಿತ್ತು. ಆದರೆ ಈ ಪಾತ್ರಕ್ಕೆ ಎರಡು ವಿಭಿನ್ನ ಛಾಯೆಗಳಿದ್ದು, ಒಂದು ಹಂತದಲ್ಲಿ ಬ್ರಿಟನ್ ಪ್ರಜೆಯಾಗಿ ನಟಿಸಬಲ್ಲ ನಟಿಯ ಅವಶ್ಯಕತೆ ಇತ್ತು. ಅದರಲ್ಲೂ ಆಕೆ ಬ್ರಿಟನ್ ಆರ್ಮಿ ಮಹಿಳೆಯ ಪಾತ್ರಕ್ಕೆ ಹೊಂದಬೇಕಿತ್ತು. ಈ ಪಾತ್ರ ಮಾಡಲು ಆಮಿ ಒಪ್ಪಿಕೊಂಡಿರುವುದು ನಮ್ಮ ಪುಣ್ಯ’ ಎಂದು ಹೇಳಿದ್ದಾರೆ ಪ್ರೇಮ್. ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಆಮಿ ಜಾಕ್ಸನ್ ಬ್ರಿಟನ್ ಪ್ರಜೆ ಜೊತೆಗೆ ದೇಸಿ ಹುಡುಗಿಯಾಗಿಯೂ ಕಾಣಿಸಿಕೊಳ್ಳಲಿದ್ದಾರೆ.

Image result for amy jackson in the villain

ಪ್ರೇಮ್  ಸೆಟ್ ನಲ್ಲಿ ಆಮಿ ಜಾಕ್ಸನ್ ಹೆಂಗೆ ಕರಿತಿದ್ದರು ಗೊತ್ತಾ?

ಪ್ರೇಮ್ ಆಮಿ ಜಾಕ್ಸನ್ ಅವರನ್ನು ಏಮಿ ಜಾಕ್ಸನ್ ಅಂತಾನೇ ಕರೀತಿದ್ರಂತೆ. ಅವರು ಪ್ರೇಮ್ ಜೀ ಎಂದ್ರೆ,  ಯೆಸ್ ಅಮ್ಮಿ, ವಾಟ್ ಎನ್ನುತ್ತಿದ್ದರಂತೆ ಪ್ರೇಮ್..! ಆಮಿ ಏನಾದ್ರೂ ಪಟಪಟ ಅಂಥಾ ಇಂಗ್ಲಿಷ್‍ನಲ್ಲಿ ಹೇಳಿಬಿಟ್ಟರೆ.. ಪ್ರೇಮ್ ಅಸಿಸ್ಟೆಂಟ್‍ಗಳನ್ನು ಕರೀತಿದ್ರಂತೆ. ನಿಮ್ಮಜ್ಜಿ ಬರ್ರಲೇ.. ಆಯಮ್ಮಂಗೆ ಸೀನ್ ಹೇಳ್ರೋ ಅನ್ನೋರಂತೆ. ಅವರೋ.. ಹೇಳಿ ಕೇಳಿ ಪ್ರೇಮ್ ಶಿಷ್ಯರು…! ಕೊನೆಗೆ ಅದೂ ಫೇಲ್ ಆದಾಗ.. ಏಮಿ ಜಾಕ್ಸನ್ ಯು ಸೀ.. ಜಸ್ಟ್ ಯು ಫಾಲ್.. ಅಂಡ್ ಲುಕ್.. ಅಂಡ್ ಗೋ.. ದಟ್ಸ್ ಇಟ್ ಎಂದುಬಿಡ್ತಿದ್ದರಂತೆ. ಇನ್ನೂ ಕೆಲವೊಮ್ಮೆ ಆಯಮ್ಮಂಗೆ ನೀನೇ ಸೀನ್ ಹೇಳಿಬಿಡು ಡಾರ್ಲಿಂಗ್ ಎಂದು ಸುದೀಪ್ ಬೆನ್ನು ಹತ್ತುತ್ತಿದ್ದರಂತೆ ಪ್ರೇಮ್.  ನೀನೇ ಹೇಳು, ನಾನೇನು ನಿನ್ ಅಸಿಸ್ಟೆಂಟಾ ಅಂತಿದ್ರಂತೆ ಖಡಕ್ ಮಾತಿನ ಕಿಚ್ಚ!

Related image

ಚಿತ್ರಕ್ಕೆ ಆಮಿ ಬದಲು ಬೇರೆ ಯಾವ ನಟಿ ಸೂಕ್ತ?

ಆಮಿ ಜಾಕ್ಸನ್ ಬದಲು ಬೇರೆ ನಟಿಯರಿಗಿಂತ ಮುಂಚೂಣಿಯಲ್ಲಿರುವುದು ಅಂದರೆ ಜಾಕ್ವಲಿನ್ ಫರ್ನಾಂಡಿಸ್..! ಜಾಕ್ವೆಲಿನ್ ಮೂಲತಃ ಶ್ರೀಲಂಕಾ ಬೆಡಗಿ…  ಈಕೆ ‘ಮಿಸ್ ಯೂನಿವರ್ಸ್ ಶ್ರೀಲಂಕಾ’ 2006 ಕಿರೀಟವನ್ನು ಕೂಡ ಮುಡಿಗೇರಿಸಿಕೊಂಡಿದ್ದಳು.. ಬಾಲಿವುಡ್ ನಲ್ಲಿ ಈ ನಟಿ ಮುಂಚೂಣಿಯಲ್ಲಿದ್ದು ಸಲ್ಮಾನ್ ಖಾನ್ ಜೊತೆ ಇತ್ತೀಚೆಗೆ ರೇಸ್ -3 ನಲ್ಲಿ ಸಖತ್ ಆಗಿ ಮಿಂಚಿದ್ದಳು…

Related image

ಜಾಕ್ವೆಲಿನ್ ಸೂಕ್ತಳೇ?

ಆಮಿ ಅಷ್ಟಾಗಿ ಚಿತ್ರದಲ್ಲಿ ಅಭಿನಯಿಸಿದವಳಲ್ಲ.. ಆದರೆ ಜಾಕ್ವೆಲಿನ್ ಬಾಲಿವುಡ್ ಚಿತ್ರರಂಗದಲ್ಲಿ ಪಳಗಿದ್ದು ಈಕೆಗೆ ‘ದಿ ವಿಲನ್’ ನಲ್ಲಿ ಅವಕಾಶ ಕೊಡಬಹುದಿತ್ತಲ್ಲವೇ ಎಂಬ ದೂರ ಆಲೋಚನೆ ಮೂಡುವುದು ಸಹಜ.. ಈ ಪಾತ್ರಕ್ಕೆ ಜಾಕ್ವಲಿನ್ ಕೂಡ ಸೂಟ್ ಆಗುತ್ತಿದ್ದಳು ಅಲ್ಲವೇ?

Image result for jacqueline

ಏನೇ ಇರಲಿ ‘ದಿ ವಿಲನ್’ ಇದೀಗ ಬಿಡುಗಡೆಯಾಗಲಿದೆ. ಪ್ರೇಮ್ ಕರೆಸಿ ನಟಿಸಿರುವ ‘ಏಮಿ’ ಹೆಂಗೆ ಅಭಿನಯಿಸಿದ್ದಾಳೆ..?! ಅಂತ ಚಿತ್ರ ನೋಡಿದ ನೀವೇ ಹೇಳಿ..! ಅಲ್ಲಿ ತನಕ ಮೂಕ ಪ್ರೇಕ್ಷಕರಾಗಿರೋಣ..!!

Tags