ಸುದ್ದಿಗಳು

‘ದಿ ವಿಲನ್’ ಸಿನಿಮಾವನ್ನು ದಸರಾ ಹಬ್ಬದಂದೇ ಬಿಡುಗಡೆ ಮಾಡುವುದಕ್ಕೆ ಕಾರಣವೇನು ಗೊತ್ತೇ…?

ಅಭಿನಯ ಚಕ್ರವರ್ತಿ ಮತ್ತು ಕರುನಾಡ ಚಕ್ರವರ್ತಿಗಳಿಬ್ಬರೂ ಒಟ್ಟಿಗೇ ನಟಿಸಿದ ಮೊಟ್ಟ ಮೊದಲ ಚಿತ್ರ

ಸ್ಯಾಂಡಲ್ ವುಡ್  ಚಿತ್ರರಂಗದಲ್ಲಿ ಎಲ್ಲರೂ ಎದುರು ನೋಡುವಂತಿರುವ ಸಿನಿಮಾವೆಂದರೆ ಅದು’ ದಿ ವಿಲನ್’. ಎಲ್ಲೆಲ್ಲೂ ‘ದಿ ವಿಲನ್’ ಫೀವರ್ ಜಾಸ್ತಿಯಾಗಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ‘ದಿ ವಿಲನ್’ ಟೀಸರ್ ಗಳು, ಹಾಡುಗಳು ಸಿನಿಮಾ ಪೋಸ್ಟರ್ ಗಳು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿದೆ. ಯಾವಾಗ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಎಲ್ಲರೂ ತುದಿಗಾಲಿನಲ್ಲಿ ನಿಂತಿದ್ದಾರೆ. ಅಷ್ಟರ ಮಟ್ಟಿಗೆ ಶಿವಣ್ಣ ಹಾಗೂ ಸುದೀಪ್ ಸಿನಿಪ್ರಿಯರಲ್ಲಿ ಕ್ರೇಜ್ ಹುಟ್ಟುಹಾಕಿಸಿದ್ದಾರೆ.

ಅಭಿನಯ ಚಕ್ರವರ್ತಿ ಮತ್ತು ಕರುನಾಡ ಚಕ್ರವರ್ತಿಗಳ ಸಿನಿಮಾ

ಒಂದೆಡೆ, ಚಿತ್ರರಂಗದ ಘಟಾನುಘಾಟಿಗಳಾದ ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಸಿನಿಮಾದಲ್ಲಿ ನಟಿಸಿರುವುದರಿಂದ ನಿರೀಕ್ಷೆ ಹೆಚ್ಚಾಗಿಯೇ ಇದ್ದು, ‘ದಿ ವಿಲನ್’ ಯಾವುದೇ ಸಮಯದಲ್ಲೂ ಸಿನಿಮಾ ಗೆಲ್ಲಲ್ಲೇ ಬೇಕಾದ ಪರಿಸ್ಥಿತಿ ಒದಗಿಬಂದಿದೆ.  ಅಷ್ಟರ ಮಟ್ಟಿಗೆ ಸಿನಿಮಾ ಕ್ರೇಜ್ ಹುಟ್ಟಿಸಿದೆ.  ‘ಜೋಗಿ’, ‘ಕರಿಯ’,  ಇನ್ನೂ ಮಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿರುವ  ಪ್ರೇಮ್ ಮೇಲೂ ಹೆಚ್ಚಾಗಿ ನಿರೀಕ್ಷೆಯ ಹುಟ್ಟಿಸಿರುವ ಪರಿಣಾಮ ಗೆಲುವು ಅವಶ್ಯಕ ಎನ್ನುವಂತಾಗಿದೆ. ಕೆಲಗಾಂಧೀನಗರದ ಮಂದಿ,  ಪ್ರೇಮ್ ಸಿನಿಮಾ ಮಾಡುತ್ತಾನೆ ಆದರೆ, ಆ ಸಿನಿಮಾ ಯಶಸ್ಸಿನ ಮಟ್ಟ ತಲುಪದೇ ಕೇವಲ ಕಲೆಕ್ಷನ್ ಮಾತ್ರ ಸಿಗುತ್ತದೆ. ಎನ್ನುವ ಮಾತುಗಳು ಅಲ್ಲಿಲ್ಲಿ  ಕೇಳಿಬರುತ್ತವೆ. ಅದರೆಂತೆ ಪ್ರೇಮ್ ನಿರ್ದೇಶನದ ಸಿನಿಮಾಗಳು ಇತ್ತೀಚೆಗೆ ಅಷ್ಟು ಯಶಸ್ಸನ್ನು ಕಾಣುತ್ತಿಲ್ಲ. ಹಾಗಾಗಿ ಬರೋಬ್ಬರಿ ಒಂದೊವರೆ ವರ್ಷಗಳ ನಂತರ ‘ದಿ ವಿಲನ್’ ತೆರೆಕಾಣಲಿದೆ.ದಸರಾ ಹಬ್ಬದಂದೇ ಸಿನಿಮಾ ಬಿಡುಗಡೆ ಯಾಕೆ..?

ಪ್ರೇಮ್ ಮನದಲ್ಲಿ ಒಂದು ರೀತಿಯ ಭಯ ಕಾಣುತ್ತಿದೆ ಅನಿಸುತ್ತಿದೆ. ಏಕೆಂದರೆ, ಈ ಹಿಂದೆ ಪ್ರೇಮ್ ನಿರ್ದೇಶನದ ಸಿನಿಮಾಗಳು ಗೆಲ್ಲುವಂತೆ ನಿರೀಕ್ಷೆಯನ್ನು ಮೂಡಿಸಿ, ಕೇವಲ ಸಿನಿಮಾಕ್ಕೆ ಹೂಡಿದ ಬಂಡವಾಳವನ್ನು ಪಡೆದು, ಸಿನಿಮಾ ನೆಲಕಚ್ಚಿದ ಉದಾಹರಣೆಗಳುಂಟು. ಅದಕ್ಕಾಗಿ ಪ್ರೇಮ್ ಈ ಬಾರಿ ಯಾವ ರೀತಿಯ ಸಿನಿಮಾ ಮಾಡಲು ಹೊರಟಿದ್ದಾರೆ ಎನ್ನುವ ಆಲೋಚನೆ ಎಲ್ಲರಲ್ಲೂ ಮೂಡಲು ಪ್ರಾರಂಭವಾಗಿದೆ.

ಅದರಂತೆ ‘ದಿ ವಿಲನ್’ ಸಿನಿಮಾ ಕೂಡ ಗೆಲುವನ್ನು ಕಾಣಬಹುದು ಎಂಬುವ ನಿರೀಕ್ಷೆಯನ್ನುಂಟು ಮಾಡಿ ಕೊನೆಯ ಸಮಯದಲ್ಲಿ ಒಂದು ವೇಳೆ ಸಿನಿಮಾ ಸೋಲನ್ನುಅನುಭವಿಸುತ್ತದೆಯೋ ಎಂಬ ಭಯ ಆತಂಕ ಪ್ರೇಮ್ ನಲ್ಲಿ ಕಾಡುತ್ತಿದೆಯೋ ಗೊತ್ತಿಲ್ಲ. ಅದರ ಸಲುವಾಗಿ ಪ್ರೇಮ್ ದಸರಾ ಹಬ್ಬದಂದು ಸಿನಿಮಾ ಬಿಡುಗಡೆ ಮಾಡಿ ಯಶಸ್ಸನ್ನುಕಾಣಬಹುದು ಎಂದುಕೊಂಡರಾ ಏನೋ ಗೊತ್ತಿಲ್ಲ.? ಅಕ್ಟೋಬರ್ 18 ರಂದು ಆಯುಧ ಪೂಜೆಯ ಪ್ರಯುಕ್ತ ಸಿನಿಮಾ ರಾಜ್ಯಾದ್ಯಂತ ಸಿನಿಮಾ ತೆರೆಕಾಣಲಿದೆ ಮತ್ತು ಅಕ್ಟೋಬರ್ 19ರಂದು ವಿಜಯದಶಮಿ ರಜಾ ಹಾಗೂ ಶನಿವಾರ  ಹಾಫ್ ಡೇ ಹಾಗೂ ಭಾನುವಾರ ಮಾಮುಲಿ ರಜಾ ಇದ್ದು, ಒಟ್ಟಾರೆ 4 ದಿನ ನಿರಂತರವಾಗಿ ರಜಾ ಇದ್ದುದ್ದರಿಂದ ಸಿನಿಪ್ರಿಯರು ಚಿತ್ರಮಂದಿರಕ್ಕೆ ಮುಗಿಬೀಳುವುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಮಲ್ಟಿಫ್ಲೆಕ್ಸ್ ಗಳಲ್ಲಿ ಟಿಕೆಟ್ ದರ  ತಲಾ 400 ದಾಟಿದ್ದು, ಸಾಮಾನ್ಯ ಚಿತ್ರಮಂದಿರಗಳಲ್ಲಿ ತಲಾ 200 ರಂತೆ ಇದ್ದು, ಸಿನಿಮಾ ಹೂಡಿದ್ದ ಬಂಡವಾಳ ನಾಲ್ಕೇ ದಿನದಲ್ಲಿ ವಾಪಾಸ್ ಆಗುವಂತಹ ಮೂನ್ಸೂಚನೆ ಕಾಣತೊಡಗಿದೆ. ಹಾಗಾಗಿ ಪ್ರೇಮ್ ಯಾವ ರೀತಿ ಸಿನಿಮಾ ಮಾಡಿದ್ದಾರೆ, ಸಿನಿಮಾವಾಗಿ ಹೂಡಿದ್ದ ಬಂಡವಾಳ ಬಂದರೂ ಸಹ ಸಿನಿಮಾ ಪ್ರೇಕ್ಷಕರ ನಿರೀಕ್ಷೆಯ ಮಟ್ಟ ಮುಟ್ಟಿಲ್ಲವಾದರೆ, ಅಂತಿಮವಾಗಿ ಸಿನಿಪ್ರಿಯರಿಗೆ ಪ್ರೇಮ್ ವಿಲನ್ ಆಗಿ ಕಾಣುವುದರಲ್ಲಿ ಯಾವ ವಿಪರ್ಯಾಸವು ಇಲ್ಲವಂತಾಗಿದೆ.

ಅದೇನೆ ಆದರೂ ಎಲ್ಲರೂ ಎದುರು ನೋಡುತ್ತಿರುವ ಸಮಯಕ್ಕೆ ಇನ್ನೇನು ಕೌಂಟ್ ಡೌನ್ ಶುರುವಾಗಿದ್ದು, ಸಿನಿಮಾ ಒಳ್ಳೆಯ ಯಶ್ಸಸ್ಸನ್ನು ಕಾಣಲಿ ಎಂದು ಬಾಲ್ಕನಿ ನ್ಯೂಸ್ ವತಿಯಿಂದ ಶುಭಾಶಯವನ್ನು ಕೋರೋಣ.

Tags