ಸುದ್ದಿಗಳು

ಇಬ್ಬರು ಚಕ್ರವರ್ತಿಗಳ ಸೂರೆಗೊಳ್ಳುವ ಕೇಶವಿನ್ಯಾಸ..!!!

‘ದಿ ವಿಲನ್’ ಹೇರ್ ಸ್ಟೈಲ್ ಟ್ರೆಂಡಿಂಗ್

ಚಂದನವನದಲ್ಲಿ ಸದ್ಯ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಯಾವುದು ಅಂತ ಅಭಿಮಾನಿಗಳಲ್ಲಿ ಕೇಳಿ ನೋಡಿ! ಅವರ ಬಾಯಲ್ಲಿ ಈಗ ಗುನುಗುವುದು ಒಂದೇ ಹೆಸರು.ಅದುವೇ ‘ದಿ ವಿಲನ್’ … ‘ದಿ ವಿಲನ್’… ಅಬ್ಬಾ! ಈ ಸಿನಿಮಾದಲ್ಲಿ ಅಂತಹದ್ದೇನಿದೆ ಅಂತ ಮಾತ್ರ ಕೇಳಬೇಡಿ.. ಯಾಕೆಂದರೆ ‘ದಿ ವಿಲನ್’ ಅಂತಿಂತಹ ಸಿನಿಮಾವಲ್ಲ! ಇದು ಮಲ್ಟಿ ಸ್ಟಾರ್ ಸಿನಿಮಾ..

ಶೀರ್ಷಿಕೆಯಿಂದ ಸೌಂಡ್ ಮಾಡುತ್ತಿದೆಯಾ ‘ದಿ ವಿಲನ್’

ಜೋಗಿ’ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ನಟರಾದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸುತ್ತಿರುವುದರಿಂದಲೋ ಅಥವಾ ಚಿತ್ರದ ಶೀರ್ಷಿಕೆಯಿಂದಲೋ ಗೊತ್ತಿಲ್ಲ. ಅಂತೂ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಹುಟ್ಟಿದೆ..

Image result for the villain

ಕಿಚ್ಚನ ಹವಾ !!

ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದೇ ತಡ, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ವೀಕ್ಷಿಸಿದ್ದರು. ಅದರಲ್ಲಿಯೂ ಸುದೀಪ್ ಹೇರ್ ಸ್ಟೈಲ್!! ವಾಹ್!! ಏನು ಲುಕ್ !! ಏನು ಸ್ಟೈಲ್ ಗುರು ಎಂದು ಕಿಚ್ಚನ ಅಭಿಮಾನಿಗಳು ಕಿಚ್ಚನನ್ನು ಕೊಂಡಾಡಿದ್ದೇ ಕೊಂಡಾಡಿದ್ದು..! ಅಲ್ಲಿಂದ ಶುರುವಾಯ್ತು ನೋಡಿ ಮತ್ತೆ ಕಿಚ್ಚನ ಹವಾ!!

‘ಹೆಬ್ಬುಲಿ’ ,’ದಿ ವಿಲನ್’ ಹೇರ್ ಸ್ಟೈಲ್

ಸುದೀಪ್ ‘ಹೆಬ್ಬುಲಿ’ ಹೇರ್ ಸ್ಟೈಲ್ ಅಭಿಮಾನಿಗಳನ್ನು ಸೆಳೆದಿತ್ತು. ಎಲ್ಲೆಲ್ಲೂ ‘ಹೆಬ್ಬುಲಿ’ ಹೇರ್ ಸ್ಟೈಲ್ ರಾರಾಜಿಸಿತ್ತು. ಅದೇ ರೀತಿಯ ಟ್ರೆಂಡ್ ಮರುಕಳಿಸಿದೆ.‘ಹೆಬ್ಬುಲಿ’,‘ದಿ ವಿಲನ್’ ಚಿತ್ರದ ಹೇರ್ ಸ್ಟೈಲ್ ಗೂ ಏನು ವ್ಯತ್ಯಾಸ ಅಂತ ನಿಮ್ಮ ತಲೆಯಲ್ಲಿ ಸಾವಿರ ಪ್ರಶ್ನೆ ಓಡಿರಬಹುದು..! ಆದರೆ ಈ ಎರಡೂ ಚಿತ್ರದಲ್ಲೂ ಕಿಚ್ಚನಹೇರ್ ಸ್ಟೈಲ್ ಡಿಫರೆಂಟ್ ಆಗಿಯೇ ಇದೆ..

Related image

ಯಾವ ಹೇರ್ ಸ್ಟೈಲ್?

ಹೆಬ್ಬುಲಿ’ ಚಿತ್ರದಲ್ಲಿ ಸುದೀಪ್ ಉದ್ದ ಕೂದಲು ಬಿಟ್ಟು ಮೇಲೊಂದು ಸಣ್ಣ ಜುಟ್ಟು ಹಾಕಿದ್ದು ಅಂದಿಗೆ ಟ್ರೆಂಡ್ ಆಗಿತ್ತು. ಈಗ ಪುನಃ ‘ದಿ ವಿಲನ್’ ಚಿತ್ರದಲ್ಲಿ ಅಂತಹದ್ದೇ ಮತ್ತೊಂದು ಸ್ಟೈಲ್ ಅಭಿಮಾನಿಗಳನ್ನು ಸೆಳೆದಿದೆ. ಅದುವೇ ‘ಸ್ಟ್ರೀಕ್ ಲುಕ್’ .. ಎಕ್ಸ್ ಆಕಾರದ ಈ ಹೇರ್ ಕಟ್  ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.. ಕಿಚ್ಚ ಯಾವುದೇಸ್ಟೈಲ್ ಮಾಡಲಿ ಹೇಗೆಯೇ ಇರಲಿ ಅದು ಮಾತ್ರ ಟ್ರೆಂಡ್ ಆಗುತ್ತದೆ..

ಎಲ್ಲೆಲ್ಲೂ ಕಿಚ್ಚನ ಹೇರ್ ಸ್ಟೈಲ್ ಟ್ರೆಡಿಂಗ್

ಈಗಾಗಲೇ ಅಪಾರ ಸಂಖ್ಯೆಯ ಅಭಿಮಾನಿಗಳು ‘ದಿ ವಿಲನ್’ ಹೇರ್ ಸ್ಟೈಲ್ ಮೂಲಕ ಜಾಲತಾಣದಲ್ಲಿ ಮಿಂಚತೊಡಗಿದ್ದಾರೆ. ಬೈಕ್, ಮೊಬೈಲ್ ಕವರ್ ಗಳಲ್ಲಿಯೂ ಸುದೀಪ್ ‘ದಿ ವಿಲನ್’ ಹೇರ್ ಸ್ಟೈಲ್ ರಾರಾಜಿಸುತ್ತಿದೆ. ನಿರ್ದೇಶಕ ‘ಜೋಗಿ’ ಪ್ರೇಮ್, ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಶಿವಣ್ಣ ಹಾಗೂ ಸುದೀಪ್ ಅವರ ಹೇರ್ ಸ್ಟೈಲ್ ಮೂಲಕವೇ ಕಮಾಲ್ ಮಾಡಿದ್ದಾರೆ.

Related image

ಜೋಗಿ’ ಹೇರ್ ಸ್ಟೈಲ್

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಇಬ್ಬರ ಗೆಟಪ್ ಮತ್ತು ಹೇರ್ ಸ್ಟೈಲ್ ಈಗ ಎಲ್ಲೆಡೆ ವೈರಲ್ ಆಗಿದೆ. ಶಿವಣ್ಣ ವಿಭಿನ್ನವಾಗಿ ಏನೇ ಮಾಡಿದರೂ ಅಲ್ಲೊಂದು ಟ್ರೆಂಡ್ ಸೃಷ್ಟಿ ಆಗುತ್ತೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಜೋಗಿ’ ಚಿತ್ರದಲ್ಲಿ, ಶಿವರಾಜ್ ಕುಮಾರ್ ಅವರ ಗೆಟಪ್ ಮತ್ತು ಹೇರ್ ಸ್ಟೈಲ್ ಅಂದು ಹೊಸಾ ಟ್ರೆಂಡ್ ನ್ನೇ ಹುಟ್ಟುಹಾಕಿತ್ತು. ಶಿವಣ್ಣನ ಅಭಿಮಾನಿಗಳು ‘ಜೋಗಿ’ ಮತ್ತು ‘ಜೋಗಯ್ಯ’ ರೀತಿಯಲ್ಲಿ ಕೂದಲು ಬಿಟ್ಟು, ಖುಷಿ ಪಟ್ಟಿದ್ದರು.

Image result for jogi movie poster

‘ಜೋಗಯ್ಯ’ ಲುಕ್

ಇನ್ನು ಜೋಗಿ ಹಾಗೂ ಜೋಗಯ್ಯ ಚಿತ್ರದಲ್ಲೂ ಶಿವಣ್ಣ ಮಚ್ಚು ಹಿಡಿದು ಉದ್ದ ಕೂದಲು ಬಿಟ್ಟು ಆಗಿನ ಟ್ರೆಂಡನ್ನೇ ಬದಲಾಯಿಸಿಬಿಟ್ಟಿದ್ದರು.. ಇದೀಗ  ಮತ್ತೆ ಅಂತಹದ್ದೇ ಟ್ರೆಂಡ್ ಸೃಷ್ಟಿ ಮಾಡಲು ಹೊರಟಿದ್ದಾರೆ ಕರುನಾಡ ಚಕ್ರವರ್ತಿ..

Image result for jogayya

ಶಿವಣ್ಣ ಮತ್ತೆ ಅದೇ ಹೇರ್ ಸ್ಟೈಲ್ ಟ್ರೆಂಡ್ ಸೃಷ್ಟಿ ಮಾಡ್ತಾರಾ?

ಇದೀಗ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ಲುಕ್ಸ್, ಡೈಲಾಗ್, ಹೇರ್ ಸ್ಟೈಲೂ ಎಲ್ಲವೂ ಟ್ರೆಂಡ್ ಆಗ್ತಿದೆ. ಮೊನ್ನೆ ತಾನೇ ರಿಲೀಸಾದ ‘ದಿ ವಿಲನ್‘ ಟೀಸರ್  ಗೆ ಅಭಿಮಾನಿಗಳು ಫಿದಾ ಆಗಿದ್ದು, ಈಗ ಎಲ್ಲಿ ನೋಡಿದರೂ ಶಿವಣ್ಣನ ಅಭಿಮಾನಿಗಳು ಅದೇ ಲುಕ್ನಲ್ಲಿ  ಕಾಣಿಸಿಕೊಂಡು ಮಿಂಚುತ್ತಿದ್ದಾರೆ. ಅಲ್ಲದೆ ಫೇಸ್ಬುಕ್ ಟ್ವಿಟ್ಟರ್,ಹಾಗೂ ವಾಟ್ಸಾಪ್ ಡಿಪಿ ಹಾಕಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ.. ಟೀಸರ್ನಲ್ಲಿ ಶಿವಣ್ಣ ಉದ್ದ ಕೂದಲಿನಲ್ಲಿ ಕಾಣಿಸಿಕೊಂಡಿದ್ದಾರೆ .. ಇನ್ನು ‘ದಿ ವಿಲನ್’ ನ ಟೀಸರ್ ಗಳಲ್ಲಿ ಸುದೀಪ್ ಹಾಗೂ ಶಿವಣ್ಣನ ಕೌಂಟರ್ ಡೈಲಾಗ್ ಗಳು ಹವಾ ಕ್ರಿಯೇಟ್ ಮಾಡಿದ್ದು, ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ… ನೀವು ಯಾವುದೇ ವಯಸ್ಸಿನವರಾಗಿದ್ದರೂ  ಸಹ  ನಿಮ್ ಕೇಶ ವಿನ್ಯಾಸದಿಂದ ನಿಮ್  ವ್ಯಕ್ತಿತ್ವಕ್ಕೆ ಹೊಸ ರೂಪು-ಛಾಪು ಎರಡೂ ದೊರಕಿಸಿ ಕೊಡಬಹುದೆಂಬುದಕ್ಕೆ ಇಲ್ಲಿ ಸಿಕ್ಕಿತಲ್ಲಾ ನಿಮಗೊಂದು ಜ್ವಲಂತ ಸಾಕ್ಷಿ..!!

Related image

ಇವರ ಹೊಸ ಲುಕ್ ‘ದಿ ವಿಲನ್’ ಗೂ ವಿಶಿಷ್ಟ ಲುಕ್ ಕೊಡಿಸಿದೆ. ನೀವೂ ಈ ಲುಕ್ ನಿಂದ ಪ್ರಭಾವಿತರಾದೀರಾ ನೋಡಿ…!! ತಿಳಿಸಿ ಬಾಲ್ಕನಿಗೆ ಕಾಲ್ ಮಾಡಿ ನಿಮ್ಮ ಸಂತೋಷ, ಥ್ರಿಲ್, ಅನಿಸಿಕೆ, ಅಭಿಪ್ರಾಯ ಹಂಚಿಕೊಳ್ಳಿ..

ಫೋನ್: 8884444254

 

Tags