ಸುದ್ದಿಗಳು

ಗರಿಕೆ ‘ದಿ ವಿಲನ್’ ಗಣೇಶ

ಬೆಂಗಳೂರು, ಸೆ.14: ‘ದಿ ವಿಲನ್’ ಸಿನಿಮಾ ಬಿಡುಗಡೆ ದಿನಾಂಕ ಈಗಾಗಲೇ ನಿಗದಿಯಾಗಿದೆ. ನಿನ್ನೆ ಗಣೇಶ ಹಬ್ಬದ ಪ್ರಯುಕ್ತ ಗಣೇಶನ ವಾಹನ ಮೂಷಿಕನ ಕೈಯಲ್ಲಿ ‘ದಿ ವಿಲನ್’ ಸಿನಿಮಾ ರಿಲೀಸ್ ಡೇಟ್ ನಾಮ ಫಲಕ ಹಿಡಿದ ಗಣೇಶ ಒಂದು ನಗರದಲ್ಲಿ ಸದ್ದು ಮಾಡುತ್ತಿದೆ.ನಿನ್ನೆ ನಾಡಿನ್ನೆಲ್ಲೆಡೆ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಈಗಾಗಲೇ ನಗರದಲ್ಲಿ ಭಿನ್ನ ವಿಭಿನ್ನ ಗಣೇಶಗಳು ರಾರಾಜಿಸುತ್ತಿವೆ. ಈ ನಡುವೆ. ಪ್ರೇಮ್ ಕಚೇರಿ ಮುಂದೆ ಕೂಡ ಗರಿಕೆ ಗಣೇಶ ಒಂದು ನೋಡುಗರನ್ನು ಸೆಳೆಯುತ್ತಿದೆ.ಮೂಷಿಕನ ಕೈಯಲ್ಲಿದೆ ‘ದಿ ವಿಲನ್’ ರಿಲೀಸ್ ಡೇಟ್

ಹೌದು, ಚಂದ್ರ ಲೇಔಟ್ ನಲ್ಲಿರುವ ಪ್ರೇಮ್ ಕಚೇರಿ ಮುಂದೆ ಗರಿಕೆ ಗಣಪನನ್ನು ಪ್ರತಿಷ್ಟಾಪನೆ ಮಾಡಲಾಗಿತ್ತು. ಸುಮಾರು ೧೦ ಅಡಿಯ ಗಣೇಶ ಮೂರ್ತಿ ಇದಾಗಿದ್ದು, ಮಹೇಶ್ ಎನ್ನುವ ಕಲಾವಿದ ಈ ಮೂರ್ತಿಯನ್ನು  ವಿಷೇಶವಾಗಿ ತಯಾರಿಸಿದ್ದಾರೆ. ಇನ್ನು ಈ ಗಣೇಶನ ವಾಹನ ಮೂಷಿಕನ ಕೈಯಲ್ಲಿ ‘ದಿ ವಿಲನ್’ ಬಿಡುಗಡೆಯ ದಿನಾಂಕವನ್ನು  ಬರೆದಿರುವ ಬೋರ್ಡ್ ಒಂದನ್ನು ಹಾಕಲಾಗಿದೆ.ಪೂಜೆಯಲ್ಲಿ ರಕ್ಷಿತಾ ಹಾಗೂ ಪ್ರೇಮ್ ಬಾಗಿ

ಇನ್ನು ನಿನ್ನೆ  ಪ್ರತಿಷ್ಟಾಪನೆ ಯಾಗಿರುವ ಈ ಗಣೇಶನಿಗೆ ಬೆಳಗ್ಗೆ ವಿಷೇಶ ಪೂಜೆ ಮಾಡಲಾಯ್ತು, ಪೂಜೆಯಲ್ಲಿ ಪ್ರೇಮ್, ರಕ್ಷಿತಾ, ನಿರ್ಮಾಪಕ ಸಿ.ಆರ್. ಮನೋಹರ್ ಸೇರಿದಂತೆ ಚಿತ್ರ ತಂಡ ಭಾಗಿಯಾಗಿದ್ದರು. ಇನ್ನು ಅಕ್ಟೋಬರ್ ೧೮ ರಂದು ‘ದಿ ವಿಲನ್’ ಸಿನಿಮಾ ಬಿಡುಗಡೆಯಾಗಲಿದೆ.

Tags