ಸುದ್ದಿಗಳು

‘ದಿ ವಿಲನ್’ ಸಿನಿಮಾಗೆ ಕಾಡುತ್ತಿರುವ ಪೈರಸಿ ಎಂಬ ಮಹಾಭೂತ..?!?

ಸ್ಯಾಂಡಲ್ ವುಡ್ ಬಹುನಿರೀಕ್ಷಿತ ಸಿನಿಮಾ ‘ದಿ ವಿಲನ್’

ಚಂದನವನದ ಬಹು ನಿರೀಕ್ಷಿತ ಸಿನಿಮಾ ‘ದಿ ವಿಲನ್’. ಕರ್ನಾಟಕದಾದ್ಯಂತ ಅಲ್ಲದೇ ಹೊರದೇಶಗಳಲ್ಲೂ ಎದುರು ನೋಡುತ್ತಿರುವ  ಸಿನಿಮಾ  ಇದು ! ಎಲ್ಲೆಡೇ ‘ದಿ ವಿಲನ್’ ಹವಾ ಜೋರಾಗಿದ್ದು, ಇನ್ನೇನು ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದ್ದು, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್  ಮತ್ತು ಕಿಚ್ಚ ಸುದೀಪ್ ಅಭಿನಯವನ್ನು ಕಣ್ತುಂಬಿಕೊಳ್ಳಲು  ಅಭಿಮಾನಿಗಳು  ಕಾತುರದಿಂದ  ಕಾಯುತ್ತಿದ್ದಾರೆ.

ಕಾತುರದಿಂದ ಕಾಯುತ್ತಿರುವ  ‘ದಿ ವಿಲನ್’ ಅಭಿಮಾನಿಗಳು

ಆದರೆ, ‘ದಿ ವಿಲನ್’ ಬರೋಬ್ಬರಿ ಒಂದೊವರೆ ವರ್ಷಗಳ ನಂತರ ಚಿತ್ರಮಂದಿರಗಳಲ್ಲಿ ರಾರಾಜಿಸಲಿದ್ದು, ಸಿನಿಮಾ ವಿಷಯಕ್ಕೆ ಸಂಬಂಧಪಟ್ಟಂತೆ  ‘ದಿ ವಿಲನ್’ ಚಿತ್ರತಂಡಕ್ಕೆ ಭಯ ಶುರುವಾಗಿದೆ.  ಹೌದು, ಅಕ್ಟೋಬರ್ 18 ರಂದು ದಸರಾ ಹಬ್ಬದ ಪ್ರಯುಕ್ತ ರಾಜ್ಯದ್ಯಾಂತ ಒಂದು ಸಾವಿರ ಥಿಯೇಟರ್ ಗಳಲ್ಲಿ ಸಿನಿಮಾ ತೆರೆಕಾಣಲಿದೆ. ಆದರೆ, ಈಗ ದಿ ವಿಲನ್ ಚಿತ್ರತಂಡ ಒಂದು ಗಂಡಾಂತರ ದಿಂದ ಯಾವ ರೀತಿ ತಪ್ಪಿಸಿಕೊಳ್ಳಬಹುದು ಎಂದು ಚಿಂತೆ ಮಾಡಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಪೈರಸಿ ಎಂಬ ಪೆಡಂಭೂತದಿಂದ ಹೇಗೆ ಕಾಪಾಡುವುದು ಎಂದು ‘ದಿ ವಿಲನ್’ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.ಚಿತ್ರತಂಡದ ತಲೆನೋವಿಗೆ ಕಾರಣವಾದ ಪೈರಸಿ

ಪೈರಸಿ ಎಂಬ ಭೂತ ಇಂದು ನಿನ್ನೆಯದಲ್ಲ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಮಾಡುವ ನಿರ್ಮಾಪಕ ಹಲವಾರು ಕನಸ್ಸುಗಳನ್ನು ಇಟ್ಟಿರುತ್ತಾರೆ. ಆದರೆ, ಅದು ಕೇವಲ ಕೆಲವೇ ಕ್ಷಣಗಳಲ್ಲಿ ಪೈರಸಿಗೆ ಸಿಕ್ಕು ಸಿನಿಮಾ ನೆಲಕಚ್ಚುವ ಸಂಭವ ಇರುತ್ತದೆ.

ಪೈರಸಿ ಒಂದು ಚಿತ್ರವನ್ನು ಕ್ಷಣ ಮಾತ್ರದಲ್ಲಿ ನಾಶ ಮಾಡುತ್ತದೆ. ಪೈರಸಿಯಿಂದ ಚಿತ್ರತಂಡದ ಮೇಲೆ ವಿಪರೀತ ಪರಿಣಾಮ ಬಿರುವುದಲ್ಲದೇ, ಚಿತ್ರಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಚಿತ್ರಮಂದಿರಕ್ಕೆ ಮೊದಲ ದಿನ ಪ್ರೇಕ್ಷಕರು ಕಾಲಿಟ್ಟ  ಕೆಲವೇ ತಾಸುಗಳಲ್ಲಿ ಸಿನಿಮಾದ ನಕಲು ತಯಾರಾಗುತ್ತದೆ. ಇದರಿಂದ ಸಿನಿಮಾಗಾಗಿ ವರ್ಷಾನುಗಟ್ಟಲೇ ಕಷ್ಟಪಟ್ಟು ದುಡಿದಿದ್ದ ಕಲಾವಿದರು ತಂತ್ರಜ್ಞರು, ನಿರ್ಮಾಪಕ ನಿರ್ದೇಶಕ ತುಂಬಾ ನಷ್ಟವನ್ನು ಅನುಭವಿಸುವಂತ್ತಾಗುತ್ತದೆ. ಅದಲ್ಲದೇ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಆನ್ ಲೈನ್ ನಲ್ಲಿ ಸಿನಿಮಾದಲ್ಲೂ ಈ ತೆರನಾದ ಸೋರಿಕೆಯಾಗುತ್ತದೆ. ಥಿಯೇಟರ್ ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಚಿತ್ರದ ಪೂರ್ತಿ ಭಾಗವನ್ನು ಇಂಟರ್ನೆಟ್ನಲ್ಲಿ ಸಾವಿರಾರು ಮಂದಿ ನೋಡಬಹುದಾಗಿದ್ದು, ಥಿಯೇಟರ್ ಬಂದು ಸಿನಿಮಾ ನೋಡುವ ಜನಸಂಖ್ಯೆ ಕುಸಿಯುತ್ತದೆ. ಇದರಿಂದ ಸಿನಿಮಾ ಗಳಿಕೆ ವಿಷಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ.ಆದ್ದರಿಂದ ಪೈರಸಿ ಎಂಬ ಮಹಾಭೂತ ಎಲ್ಲೆಲ್ಲೂ ಕಾಡುತ್ತಿದೆ , ಅದಕ್ಕಾಗಿ  ‘ದಿ ವಿಲನ್’ ಚಿತ್ರತಂಡ ಸ್ಪಲ್ಪ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇಡಬೇಕಾಗಿದ್ದು, ಯಾವುದೇ ಸಮಯದಲ್ಲೂ ಪೈರಸಿ ಹಾವಳಿಗೆ ದಾರಿಮಾಡಿಕೊಡಬಾರದು ಎಂಬುದು ನಮ್ಮ ಬಾಲ್ಕನಿ ನ್ಯೂಸ್ ಆಶಯ.

‘ದಿ ವಿಲನ್’ ಸಿನಿಮಾ ಪೈರಸಿ ಹಾವಳಿಗೆ ತುತ್ತಾಗದೇ ಭರ್ಜರಿಯಾಗಿ ಸಿನಿಮಾ ಯಶಸ್ಸನ್ನು ಗಳಿಸಲಿ ಎಂದು ಬಾಲ್ಕನಿ ನ್ಯೂಸ್ ವತಿಯಿಂದ ಶುಭವನ್ನು ಕೋರೊಣ.

Tags