ಸುದ್ದಿಗಳು

ದಿ ವಿಲನ್ ನಾಲ್ಕನೇ ಹಾಡು ಯ್ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್!!

ಬೆಂಗಳೂರು,ಆ.16: ದಿ ವಿಲನ್ ಸಿನಿಮಾ ಈ ಟೈಟಲ್ ಇಟ್ಟಾಗಿನಿಂದಲೂ ಕೂಡ ನಿರೀಕ್ಷೆಗಳು ಹೆಚ್ಚಾಗಿವೆ. ಇದಾದ ನಂತರದ ಎಲ್ಲಾ ಬೆಳವಣಿಗಳು ನಿಮಗೆ ಗೊತ್ತೇ ಇದೆ. ಹಾಡುಗಳ ಬಿಡುಗಡೆಯಾದ ನಂತರ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದ್ದವು. ಈದಾದ ನಂತರ ವಾದ ವಿವಾದಗಳಿಗೆ ತೆರೆ ಖೂಡ ಬಿದ್ದಿತ್ತು. ಯಾವಾಗ ಪ್ರೇಮ್ ಈ ವಾದಗಳಿಗೆ ಮುಕ್ತಿ ಕೊಟ್ಟು ರೊಮ್ಯಾಂಟಿಕ್ ಹಾಡು ಬಿಡುಗಡೆ ಮಾಡುತ್ತಾರೋ ಅಂತಾ ಕಾದಿದ್ದ ಅಭಿಮಾನಿಗಳಿಗೆ ಇದೀಗ ಆ ಸುಯೋಗ ಬಂದಿದೆ.

ಟ್ರೆಂಡಿಂಗ್.. ಟ್ರೆಂಡಿಂಗ್…

‘ನೋಡಿವಳಂದಾವ, ಮುತ್ತಿನ ಮಾಲೆ ಚೆಂದಾವ’ ಅನ್ನೋ ಜಾನಪದ ಎಳೆಯನ್ನೇ ಬಳಸಿಕೊಂಡು ಅದ್ಭುತ ಹಾಡು ಕೊಟ್ಟಿದ್ದಾರೆ. ಅರ್ಮನ್ ಮಲಿಕ್- ಶ್ರೇಯಾ ಘೋಷಾಲ್ ಇಬ್ಬರು ಹಾಡು ನಿಜಕ್ಕೂ ಪ್ರೇಕ್ಷಕರನ್ನ ತಣಿಸುತ್ತಿದೆ. ಹಿಂದಿ ‘ಇಸ್ಕು ಹೈ’, ‘ತಮಿಳು ಕಾದಲೇ’, ‘ತೆಲುಗು ಪ್ರೇಮಮಾ’, ‘ಇಂಗ್ಲೀಷ್ ಲವ್ ಯೂ ನಾ’..’ ಅಂತಾ ಹಾಡಿದ್ದಾರೆ. ಈ ಹಾಡಿಗೂ ಪ್ರೇಮ್ ಲಿರಿಕ್ಸ್ ಬರೆದಿದ್ದು ಸಕ್ಕತ್ ರೊಮ್ಯಾಂಟಿಕ್ ಆಗಿದೆ.

ಇನ್ನೂ ‘ದಿ ವಿಲನ್’ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಇಬ್ಬರ ಕಾಂಬೀನೇಷನ್ ಇದ್ದು ನಾಯಕಿಯಾಗಿ ಆಮಿ ಜಾಕ್ಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಇನ್ನೋಂದು ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ನಟಿಸುತ್ತಿದ್ದಾರೆ. ‘ಚಕ್ರವರ್ತಿ’, ‘ಮುಂಗಾರು ಮಳೆ-೨’, ‘ತಾರಕ್’ ಸಿನಿಮಾದ ಹಾಡುಗಳನ್ನು ಜನರು ಇಂದಿಗೂ ಗುನುಗುತ್ತಲೇ ಇದ್ದಾರೆ. ಇದೀಗ, ‘ದಿ ವಿಲನ್’ ಸಿನಿಮಾದಲ್ಲಿ ಅಂಥದ್ದೇ ಜಬರ್‌ದಸ್ತ್ ಹಾಡಿಗೆ ಜೋಡಿಯಾಗಿದ್ದಾರೆ.

Tags