ಸುದ್ದಿಗಳು

ಸೋರಿಕೆಯಾದ ‘ದಿ ವಿಲನ್’ ಹಾಡಿನ ವಿಡಿಯೋ..

ಬೆಂಗಳೂರು,ಆ.22: ಒಂದು ಸಿನಿಮಾ ಅಂದರೆ ಆ ಸಿನಿಮಾ ಹಿಂದೆ ಅದೆಷ್ಟೋ ಮಂದಿಯ ಶ್ರಮ ಇರುತ್ತೆ. ನಿರ್ಮಾಪಕ ಕೆಲವೊಮ್ಮೆ ಸಿನಿಮಾ ನಂಬಿ ಕೋಟಿಗಟ್ಟಲೆ ಸಾಲ ಮಾಡಿರುತ್ತಾರೆ. ನಟರು ಇಡೀ ಜೀವನವನ್ನೇ ಈ ಸಿನಿಮಾಗೆ ಶ್ರಮಿಸಿರುತ್ತಾರೆ. ನಿರ್ದೇಶಕರು ತಲೆ ಕೆಡಿಸಿಕೊಂಡು ಸಿನಿಮಾಗೆ ಸ್ಕ್ರಿಪ್ಟ್ ಬರೆದಿರುತ್ತಾರೆ. ಅದೆಷ್ಟೋ ಹಾಡುಗಾರರು ಸಿನಿಮಾಗಾಗಿ ಹಾಡಿರುತ್ತಾರೆ. ಹಲವಾರು ಮಂದಿ ಒಂದು ನೃತ್ಯಕ್ಕಾಗಿ ಶ್ರಮವಹಿಸಿರುತ್ತಾರೆ. ಆದರೆ ಇಷ್ಟೆಲ್ಲಾ ಶ್ರಮ ಯಾರೋ ಕಿಡಿಗೇಡಿಗಳಿಂದ ಹೊಳೆನಲ್ಲಿ ಹುಣಸೆಹಣ್ಣು

ತೊಳೆದಂತಾಗುತ್ತೆ. ಒಂದು ಹಾಡಿನ ವಿಡಿಯೋಗಳನ್ನ ಹರಿ ಬಿಡುವ ಮೂಲಕ ಇಡೀ ಸಿನಿಮಾದ ಎಲ್ಲಾ ಶ್ರಮವನ್ನ ವ್ಯಕ್ತ ಮಾಡುತ್ತಾರೆ. ಇದೀಗ ‘ದಿ ವಿಲನ್’ ಸಿನಿಮಾದ ವಿಡಿಯೋ ತುಣುಕೊಂದು ಹೊರ ಬಂದಿದೆ.

ಹಾಡು ಸೋರಿಕೆ

ಹೌದು, ‘ದಿ ವಿಲನ್’ ಸಿನಿಮಾ ಈಗಾಗಲೇ ಅನೇಕ ವಿಚಾರಗಳಿಂದ ಸುದ್ದಿಯಾಗಿದೆ. ಪ್ರೇಮ್ ನಿರ್ದೇಶನದಲ್ಲಿ ಬರುತ್ತಾ ಇರೋ ಈ ಸಿನಿಮಾ ಅನೇಕ ವಿಶೇಷತೆಗಳಿಂದ ಕೂಡಿದೆ. ಮಲ್ಟಿಸ್ಟಾರರ್ ಸಿನಿಮಾ ಇದಾಗಿರೋದು ಮುಖ್ಯ ವಿಶೇಷ. ಈಗಾಗಲೇ ಆಡಿಯೋ ಬಿಡುಗಡೆ ಮಾಡಿರೋ ಈ ಸಿನಿಮಾ ಸದ್ಯ ಸಿನಿಮಾ ತೆರೆಗೆ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ವಿಚಾರ ಏನಪ್ಪಾ ಅಂದರೆ      ಯಾರೋ ಕಿಡಿಗೇಡಿಗಳಿಂದ ಈ ಸಿನಿಮಾದ ಹಾಡಿನ ನೃತ್ಯೊಂದರ ವಿಡಿಯೋ ತುಣುಕು ಇದೀಗ ಹೊರಬಿದ್ದಿದೆ.

ಕೈಯಲ್ಲೊಂದು ಲಾಂಗ್

ಹೌದು, ಶಿವಣ್ಣರ ಡಾನ್ಸ್ ವಿಡಿಯೋ ಒಂದು ಇದೀಗ ಸಿನಿಮಾ ಸೆಟ್ ನಿಂದ ಹೊರಬಂದಿದೆ. ಶಿವಣ್ಣ ಜೀಪ್ ನಿಂದ ನೆಗೆದು ಕೈಯಲ್ಲಿ ಲಾಂಗ್ ಹಿಡಿದು ನಿಲ್ಲೋ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಾ ಇದೆ. ಥಿಯೇಟರ್ ಗೆ ಬಂದು ಸಿನಿಮಾ ನೋಡಲಿ ಅಂತಾ ಯಾವ ವಿಡಿಯೋ ಹಾಡನ್ನು ಬಿಡದೆ ಇದ್ದರೋ ಹೀಗೆ ಕಿಡಿಗೇಡಿಗಳು ನಡೆಸಿರೋ ಕೃತ್ಯ ನಿಜಕ್ಕೂ ಹೀನಾಯ.

ಇದೊಂದು ಸಿನಿಮಾ ಅಲ್ಲ ಸಾಕಷ್ಟು ಸಿನಿಮಾಗಳ ಕಥೆ ಕೂಡ ಇದೆ. ಯಾವುದೋ ಒಂದು ಸೀನ್ ನ ಲೀಕ್ ಮಾಡೋ ಮೂಲಕ ಸಿನಿಮಾ ಇಮೇಜ್ ಗೆ ದಕ್ಕೆ ಆಗೋ ರೀತಿ ಮಾಡುತ್ತಾ ಇದ್ದಾರೆ‌. ಅದೇನೆ ಇದ್ದರೂ ಯಾವ ದೃಶ್ಯ ಸೋರಿಕೆಯಾದರೂ ಕೂಡ’ ದಿ ವಿಲನ್’ ಗೆ ಇರೋ ವರ್ಚಸ್ಸೇನು ಕಡಿನೆ ಆಗಲ್ಲ ಬಿಡಿ..

Tags